ಬಸ್ ಕಂಡಕ್ಟರ್‌ನನ್ನು 52 ಬಾರಿ ಕೊಚ್ಚಿ ಕೊಂದ ಬಿಸಿ ರಕ್ತದ ಯುವಕರು
ಉಡುಪಿ: ಪೆರ್ಡೂರಿನ ಬಸ್ ಕಂಡಕ್ಟರ್‌ನನ್ನು 52 ಬಾರಿ ಕತ್ತಿಯಲ್ಲಿ ಇರಿದು ಕೊಲೆ ಪ್ರಕರಣದ ಓರ್ವ ಆರೋಪಿಗೆ ಮೂರು ದಿನ ಪೊಲೀಸ್ ಕಸ್ಟಡಿ.ನಿನ್ನೆ ಪೆರ್ಡೂರಿನಲ್ಲಿ ಬಂಧನವಾಗಿದ್ದ ರಕ್ಷಕ್‌ನನ್ನು ಇಂದು ಉಡುಪಿ ಜಿಲ್ಲಾ ನ್ಯಾಯಾಲಕ್ಕೆ ಹಾಜರುಪಡಿಸಿದ್ದು ಆತನಿಗೆ ಮೂರು ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಘಟನೆ ವಿವರ:
ಪೆರ್ಡೂರು ಆಲಂಗಾರು ರಕ್ಷಕ್‌ಗೆ (19)ಪೆರ್ಡೂರಿನ ಸೊಸೈಟಿಯೊಂದರಲ್ಲಿ ಐವತ್ತು ಸಾವಿರ ಸಾಲವನ್ನು ಪರಿಚಯದ ನೆಲೆಯಲ್ಲಿ ಕೊಲೆಗೀಡಾದ ಪ್ರಶಾಂತ್ ಪೂಜಾರಿ ತೆಗೆಸಿಕೊಟ್ಟಿದ್ದ. ರಕ್ಷಕ್ ಸ್ನೇಹಿತ ಸಚಿನ್ ಹಾಗೂ ಜೆರಾಲ್ಡ್ ಅದಕ್ಕೆ ಜಾಮೀನು ಹಾಕಿದ್ದರು. ಈ ಸಾಲವನ್ನು ಸರಿಯಾಗಿ ಪಾವತಿಸದಿರುವುದನ್ನು ಕೇಳಿದ್ದೇ ಪ್ರಶಾಂತ್ ಪೂಜಾರಿ ಹತ್ಯೆಗೆ ಕಾರಣವೆಂದು ತಿಳಿದು ಬಂದಿದೆ, ಜೂನ್ ಗುರುವಾರ ರಾತ್ರಿ ರಕ್ಷಕ್ ಮತ್ತು ಸಚಿನ್ ನಾಯ್ಕ್ ಪೆರ್ಡೂರು ಕುಬೇರದಲ್ಲಿ ಹೊಟೇಲ್‌ನಲ್ಲಿ ಊಟ ಮಾಡಿ ಇತನಿಗೆ ಸರಿಯಾಗಿ ಬುದ್ಧಿಕಲಿಸಬೇಕೆಂದು ಬೈರಂಪಳ್ಳಿಯ ಪ್ರಶಾಂತ್ ಮನೆ ಹೋಗಿ ಬಾಗಿಲು ಬಡಿದಿದ್ದಾರೆ. ರಾತ್ರಿ ಊಟ ಮಾಡಿ ಗಾಢಾ ನಿದ್ದೆಯಲ್ಲಿದ್ದ ಪ್ರಶಾಂತ್‌ನನ್ನು ಹೊರಕರೆದು ಸಾಲ ತೆಗೆಸಿಕೊಟ್ಟದ್ದಕ್ಕೆ ಕಮೀಷನ್ 5000 ರೂ. ನೀಡಿದ್ದೇನೆ ಮತ್ತೆ ಸಾಲ ನಾನು ಪಾವತಿಸಿಲ್ಲವೆಂದು ಕೇಳಲು ನೀನ್ಯಾರು ಎಂದು ಹೇಳಿ ತಗಾದೆ ತೆಗೆದು ಈ ಸಂದರ್ಭ ಮೂವರಲ್ಲಿ ಮಾತಿನ ಚಕಮಕಿ ನಡೆದಿತ್ತು.
ಇವರ ಚಿರಾಟ ನೋಡಿ ಪ್ರಶಾಂತ್ ಪತ್ನಿ ವಿಜಯ ಎದ್ದು ಮನೆಯಿಂದ ಹೋರ ಹೋಗ ಬೇಕು ಎನ್ನುವಷ್ಟರಲ್ಲಿ ಪ್ರಶಾಂತನನ್ನು ಹೊಡೆದುರುಳಿಸಿ ಆತನ ಮೇಲೆ ರಕ್ಷಕ್ ಕುಳಿತು ಹಲ್ಲೆ ಮಾಡುತ್ತಿದ್ದ, ಅದನ್ನು ಕಂಡ ವಿಜಯ ಮನೆಯಿಂದ ಕತ್ತಿ ಹಿಡಿದು ಪತಿಯನ್ನು ಬಿಡಿ ಎಂದು ಬೊಬ್ಬೆ ಹೊಡೆದರೂ ಕೇಳದ ರಕ್ಷಕ್ ಮತ್ತೂ ಹಲ್ಲೆ ಮುಂದುವರಿಸುತ್ತಿದ್ದ, ಆಗ ಸಚಿನ್ ಪ್ರಶಾಂತ್ ಪತ್ನಿ ವಿಜಯ ಕೈಯಲ್ಲಿದ್ದ ಕತ್ತಿಯನ್ನು ಎಳೆದು ಆಕೆಯನ್ನು ಮನೆಯ ಒಳಗೆ ದೂಡಿ ಬಾಗಿಲಿನ ಚಿಲಕ ಹಾಕಿ ಕೂಡಿ ಹಾಕಿದರು.
ನಂತರ ಸಚಿನ್ ಪ್ರಶಾಂತ್‌ನನ್ನು ಕತ್ತಿಯಿಂದ ಯದ್ವಾತದ್ವ ತಲೆಯನ್ನು ಕಡಿಯಲು ಪ್ರಾರಂಭಿಸಿದ, ಇನ್ನೂ ಏಳದ ಸ್ಥಿತಿ ಕಂಡು ರಕ್ಷಕ್ ಕೂಡ ಸಚಿನ್ ಕೈಯಲ್ಲಿದ್ದ ಕತ್ತಿಯನ್ನು ಏಳೆದು ಕಡಿದಿರುತ್ತಾನೆ. ಇಬ್ಬರೂ ಸೇರಿ ಪ್ರಶಾಂತನನ್ನು 52 ಬಾರಿ ಇರಿದು ಕ್ರೂರ ರೀತಿಯಲ್ಲಿ ಹತ್ಯೆ ಗೈದಿದ್ದಾರೆ. ಆತ ಸತ್ತನೆಂದು ತಿಳಿದು ತಾವು ಬಂದಿದ್ದ ಬೈಕ್ ನ ಸ್ಟ್ಯಾಂಡ್ ತುಂಡಾಗಿ ಬಿದಿದ್ದನ್ನು ಎತ್ತಲು ಆಗದ ಇವರು ಅಲ್ಲಿಂದ ಪರಾರಿಯಾಗಿದ್ದಾರೆ.
ಕೊಲೆ ಮಾಡಿ ಮನೆಗೆ ಹೋಗಿ ತಾನೂ ಏನೂ ಮಾಡಿಲ್ಲ ಎಂಬ ರೀತಿ ಹೋಗಿ ಮಲಗಿದ್ದಾನೆ ರಕ್ಷಕ್, ಆದರೇ ಸಚಿನ್ ತನ್ನ ಬುದ್ಧಿವಂತಿಕೆ ಉಪಯೋಗಿಸಿ ತಾನು ದುಡಿಯುತ್ತಿದ್ದ ಪೆಟ್ರೋಲ್ ಪಂಪ್‌ಗೆ ಕನ್ನ ಹಾಕಲು ಹೋಗಿ ಸಿಕ್ಕಿ ಬಿದ್ದ.
ನಂತರ ಅಲ್ಲಿಂದ ತನ್ನ ಮಾವನ ಮನೆಯಾದ ತುಮಕೂರಿಗೆ ಹೋಗಿದ್ದಾನೆಂದು ತಿಳಿದು ಬಂದಿದೆ. ಕೇವಲ 3000 ರೂ. ಹಿಡಿದುಕೊಂಡು ಕೊಲೆ ಮಾಡಲು ಹೊರಟ ಬಿಸಿ ರಕ್ತದ ಯುವಕರು.
ಪೆರ್ಡೂರು ಹೊಟೇಲ್ ಊಟಕ್ಕೆ 1000 ರೂ.ಬಿಲ್ ಪಾವತಿಸಿದ ಸಚಿನ್ ಕೈಯಲ್ಲಿ 2000ರೂ ಮಾತ್ರ ಇದ್ದದರಿಂದ ಊರಿಂದ ಪರಾರಿಯಾಗಬೇಕಾದರೆ ಹಣ ಬೇಕಾಗುತ್ತದೆಂದು ತಿಳಿದು ತಾನು ಕೆಲಸಕ್ಕಿದ್ದ ಸಂಸ್ಥೆಯ ಹಣ ದೋಚಲು ತನ್ನಲ್ಲಿದ್ದ ಕೀಯನ್ನು ಉಪಯೋಗಿಸಿ ಪೆಟ್ರೋಲ್ ಪಂಪ್‌ನ ಬಾಗಿಲು ತೆರೆಯಲು ಹೋದಾಗ ಅಲ್ಲಿ ಮಲಗಿದ್ದ ಇತರ ಸಿಬ್ಬಂದಿಗಳು ಎಚ್ಚರಗೊಂಡರು. ಇನ್ನೇನು ಸಚಿನ್‌ನನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಈಗ ಸಚಿನ್ ಮುಂಬಾಯಿಗೆ ಪರಾರಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆದಷ್ಟು ಬೇಗ ಬಂಧಿಸುವುದಾಗಿ ತನಿಖಾಧಿಕಾರಿ ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ ನಾಯಕ್ ತಿಳಿಸಿದ್ದಾರೆ.