ಕಾಲಿನಲ್ಲಿ ಉಂಟಾಗುವ ಆಣೆ ಸಮಸ್ಯೆಗೆ ಇಲ್ಲಿದೆ ನೋಡಿ ಸಿಂಪಲ್ ಮನೆ ಮದ್ದು..!
ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ ಎಂದರೆ ಸಣ್ಣ ಸಮಸ್ಯೆಗಳೇ ದೊಡ್ಡ ಸಮಸ್ಯೆಗಳಾಗಿ ಮಾರ್ಪಾಡಾಗುತ್ತದೆ, ಅಂತಹ ಸಮಸ್ಯೆಗಳನ್ನು ಸುಲಭವಾದ ಮನೆಮದ್ದು ಗಳನ್ನು ಬಳಸಿ ಯಾವುದೇ ಹಣ ಕಾಸು ಖರ್ಚಿಲ್ಲದೆ ಬಗೆಹರಿಸಬಹುದು, ಅದೇ ರೀತಿ ಕಾಲಿನ ಪಾದದಲ್ಲಿ ಬೆಳೆಯುವ ಆಣೆಯನ್ನು ಸಹ ಮನೆಯಲ್ಲೇ ಸಿಗುವ ಮದ್ದುಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಕಾಲಿನ ಆಣೆ ಸಮಸ್ಯೆಯನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲು ಸಾಧ್ಯವೇ ಇಲ್ಲ, ಕಾರಣ ಈ ಆಣೆ ಸಮಸ್ಯೆಯು ಬಹುದಿನಗಳ ಕಾಲ ನಿಮ್ಮ ಕಾಲಿನಲ್ಲಿ ಇದ್ದು ಚಿತ್ರಹಿಂಸೆ ನೋವನ್ನು ನೀಡುತ್ತದೆ, ಇವು ಬೇಗನೇ ವಾಸಿಯಾಗದೆ ಪದೇ ಪದೇ ನೋವುಗಳನ್ನು ನೀಡುತ್ತಲೇ ಇರುತ್ತದೆ, ಇಂತಹ ಆಣೆ ಸಮಸ್ಯೆಗೆ ನಿಂಬೆಹಣ್ಣಿನಲ್ಲಿ ಅಡಗಿದೆ ಸುಲಭ ಪರಿಹಾರ.
ಒಂದು ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಅದರ ಒಂದು ಭಾಗವನ್ನು ಕಾಲಿನಲ್ಲಿ ಆಣೆಯ ಗಾಯವಾಗಿರುವ ಆ ಜಾಗದಲ್ಲಿ ನಿಂಬೆ ಹಣ್ಣಿನ ತುಂಡನ್ನು ಇಟ್ಟು ಬಟ್ಟೆಯಲ್ಲಿ ಗಟ್ಟಿಯಾಗಿ ಕಟ್ಟಿ ರಾತ್ರಿ ಮಲಗಬೇಕು, ಹೀಗೆ ಮಾಡಿದರೆ ಮನೆಯಲ್ಲಿರುವ ಕಸ ಹಾಗೂ ಬ್ಯಾಕ್ಟೀರಿಯಾ ದಂತಹ ಅಂಶಗಳು ಹೊರಗೆ ಬರುತ್ತವೆ ಹಾಗೂ ನೋವು ನಿವಾರಣೆಯಾಗುವ ಮೂಲಕ ಗುಣವಾಗುತ್ತದೆ .