ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಹಣ್ಣುಗಳು ಇಲ್ಲಿವೆ ನೋಡಿ

ಚಳಿಗಾಲದಲ್ಲಿ ಹೆಚ್ಚಾಗಿ ಅರೋಗ್ಯ ಹಾಳಾಗುತ್ತಾಳೆ ಇರುತ್ತದೆ. ನಾವು ಇವುಗಳನ್ನ ದೂರ ಮಾಡಲು ಹಲವಾರು ಔಷಧಿಗಳನ್ನ ತೆಗೆದುಕೊಳ್ಳುತ್ತೇವೆ, ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಇರಬೇಕು. ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು ನಾವು ಕೆಲವು ಹಣ್ಣುಗಳನ್ನ ಸೇವಿಸ ಬೇಕಾಗುತ್ತದೆ, ಅಂತಹ ಕೆಲವು ಹಣ್ಣುಗಳು ಇಲ್ಲಿವೆ ನೋಡಿ.

ಬೆಳ್ಳುಳ್ಳಿ:ಬೆಳ್ಳುಳ್ಳಿಗೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಇದೆ. ಅಧ್ಯಯನಗಳ ಪ್ರಕಾರ, ವಾರದಲ್ಲಿ 6ಕ್ಕಿಂತ ಹೆಚ್ಚಿನ ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ಕ್ಯಾನ್ಸರ್‌ ಸಮಸ್ಯೆ ಕಮ್ಮಿ ಆಗುತ್ತದೆಯಂತೆ.

ಅಣಬೆ:ಅಣಬೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಧ್ಯಯನಗಳ ಪ್ರಕಾರ, ಬಿಳಿ ರಕ್ತಕಣಗಳ ಕಾರ‍್ಯ ಚಟುವಟಿಕೆಗಳನ್ನು ಆರೋಗ್ಯಪೂರ್ಣವಾಗಿರಿಸುತ್ತದೆ.

ಗೆಣಸು:ರೋಗ ನಿರೋಧಕ ಶಕ್ತಿಯೊಂದಿಗೆ ತ್ವಚೆಗೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ವಿಟಮಿನ್‌ ಎ ತ್ವಚೆಯನ್ನು ರೋಗ್ಯಪೂರ್ಣವಾಗಿರಿಸುತ್ತದೆ. ಇದರ ಜತೆ ಕ್ಯಾರೆಟ್‌, ಕುಂಬಳಕಾಯಿ ಕೂಡ ಸೇವಿಸಬಹುದು.

ಕಿತ್ತಳೆ: ಚಳಿಗಾಲದಲ್ಲಿ ಸಿಗುವ ಕಿತ್ತಳೆಯಂಥ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ವಿಟಮಿನ್‌ ಸಿ ಇರುವ ಹಣ್ಣುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಇರುತ್ತದೆ. ಅದರಲ್ಲೂ ಕಿತ್ತಳೆ ಹಣ್ಣು ನೆಗಡಿ, ಜ್ವರಗಳು ನಿಮ್ಮನ್ನು ಕಾಡದಂತೆ ಕಾಪಾಡುತ್ತದೆ. ಈ ಹಣ್ಣಿನಲ್ಲಿರುವ ಬೆಟಾಕೆರೋಟಿನ್‌ ದೇಹದಲ್ಲಿನ ಜೀವ ಕಣಗಳನ್ನು ಸಂರಕ್ಷಿಸುತ್ತದೆ. ಕಿತ್ತಳೆಯಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ. ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಇದರಲ್ಲಿನ ನಾರಿನಾಂಶ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಕಿವಿ ಹಣ್ಣು :ವಿಟಮಿನ್‌ ಇ ಹೊಂದಿರುವ ಕಿವಿ ಹಣ್ಣು ವೈರಲ್‌ ಹಾಗೂ ಬ್ಯಾಕ್ಟೀರಿಯಾ ಸೊಂಕಿನಿಂದ ಇದು ದೇಹವನ್ನು ಕಾಪಾಡುತ್ತದೆ

Leave a Reply

Your email address will not be published. Required fields are marked *

error: Content is protected !!