ಮೈತುಂಬಿ ಹರಿಯುತ್ತಿರುವ ಮಡಿಸಾಲು; ನೀರಿನ ಹರಿವೆಗೆ ಅಡ್ಡಲಾದ ಕಸದ ರಾಶಿ
ಉಪ್ಪೂರು : ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಉಪ್ಪೂರಿನ ಮಡಿಸಾಲು ನದಿ ಮೈತುಂಬಿ ಹರಿಯುತ್ತಿದೆ. ಶಾಂತವಾಗಿ ಹರಿಯುತ್ತಿದ್ದ ನದಿ ಮಳೆಗಾಲಕ್ಕೆ ಮೈದುಂಬಿ ಆಸುಪಾಸಿನ ಜನರು ನೆರೆಯಿಂದಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಹೌದು ಪ್ರತಿ ವರ್ಷ ಈ ಊರಿನ ಜನರ ಗೊಳನ್ನು ಯಾರು ಕೇಳುವಂತಿಲ್ಲ.
ಮಡಿಸಾಲು ಮೈತುಂಬಿ ಹರಿಲಿಕ್ಕೆ ಶುರು ಮಾಡಿದ್ದೇ ತಡ, ಮಾಮೂಲಿಯೆಂಬಂತೆ ಸಮಸ್ಯೆಯೊಂದು ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗಿ ನೆರೆ ಬರುವುದು ಸಾಮಾನ್ಯ ಸಂಗತಿ ಆದರೆ, ಮಡಿಸಾಲು ಹೊಳೆಗೆ ಅಡ್ಡಲಾಗಿ ಕಟ್ಟಿದ ಕಿಂಡಿ ಅಣೆಕಟ್ಟಿನಲ್ಲಿ ಮರ ಬಿದಿರು ಕಸದ ಬೃಹತ್ ರಾಶಿ ಶೇಖರಣೆಯಾಗಿರುವ ಹಿನ್ನೆಲೆ ನೀರಿನ ಸರಾಗ ಹರಿವಿಗೆ ಅಡಚಣೆಯಾಗಿದ್ದು, ಆಸುಪಾಸಿನ ಊರಿನಲ್ಲಿ ಕೃತಕ ನೆರೆಯಾಗಿ ಸಮಸ್ಯೆ ತಲೆದೋರಿದೆ.
ನೆರೆಯಿಂದ ಪರದಾಡುತ್ತಿರುವ ಜನರ ಸಮಸ್ಯೆಗೆ ಸೂಕ್ತ ಪರಿಹಾರಕ್ಕೆ ಸಂಬಂಧಿಸಿದ ಇಲಾಖೆ ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.s