ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ

ಉಡುಪಿ:  ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಯವರ ಕಛೇರಿಯ ಎದುರಿನ ಪ್ರತಿಭಟನೆಯ ಕಟ್ಟೆಯ ಬಳಿ ಧರಣಿನಡೆಯಿತು. ಅಂಗನವಾಡಿ ನೌಕರರ ಸಂಘ ಉಡುಪಿಯ ಅಧ್ಯಕ್ಷರಾದ ಸುಶೀಲಾ ನಾಡರವರ ನೇತೃತ್ವದಲ್ಲಿ ಸಿಐಟಿಯು ಸಹಯೋಗದೊಂದಿಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು , ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

 

ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು ಒತ್ತಾಯಿಸಿ, ಸೇವಾ ಜೇಷ್ಠತೆಯ ಆಧಾರದಲ್ಲಿ ವೇತನ ಕನಿಷ್ಠ ಕೂಲಿ, ಎಲ್‌ಐಸಿ ಆಧಾರಿತ ಪೆನ್ಸನ್ , ಪ್ರತಿ ತಿಂಗಳು ಗೌರವಧನ ಬಿಡುಗಡೆ, ಕೇಂದ್ರ ಸರ್ಕಾರ 2018 ರಲ್ಲಿ ಘೋಷಣೆ ಮಾಡಿದ  1500 ರೂ ಗೌರವಧನ ಬಿಡುಗಡೆಗೊಳಿಸಬೇಕು ಇನ್ನೂ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ.

 

ಈ ಪ್ರತಿಭಟನೆಯಲ್ಲಿ ಸದಸ್ಯರು ಸಿಐಟಿಯು ಸದಸ್ಯರಾದ ಕವಿರಾಜ್, ಸಿಐಟಿಯು ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಹಾಗೂ ಸುಮಾರು 350 ಜನ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!