“ಉತ್ತರದೊಂದಿಗೆ ಉಡುಪಿ ಟೈಮ್ಸ್”ಅಭಿಯಾನ – ಕೈ ಜೋಡಿಸಿದ ಅನೇಕ ಸಂಘ ಸಂಸ್ಥೆಗಳು
ಉಡುಪಿ: ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಭೀಕರ ನೆರೆಯಿಂದಾಗಿ ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಅವರ ನೆರವಿಗಾಗಿ ಉಡುಪಿ ಟೈಮ್ಸ್ ವೆಬ್‌ಸೈಟ್ ಬಳಗವು ಜಿಲ್ಲೆಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಪರಿಹಾರ ಕಾರ್ಯಕ್ಕೆ ಅಳಿಲು ಸೇವೆ ನೀಡಲು ಮುಂದಾಗಿದೆ.
ಮಾಧ್ಯಮ ಲೋಕಕ್ಕೆ ಇತ್ತೀಚೆಗೆ ಪಾದರ್ಪಾಣೆಗೊಂಡ ಉಡುಪಿ ಟೈಮ್ಸ್ ವೆಬ್ ಸೈಟ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ಅಭಿಯಾನಕ್ಕೆ ಜಿಲ್ಲೆಯ ಜನರಿಂದ ಪ್ರಶಂಸೆ ವ್ಯಕ್ತವಾಗಿತ್ತು.
ಓದುಗರಿಗೆ ಕೇವಲ ಸುದ್ದಿಗಳನ್ನು ನೀಡುವುದು ಗುರಿಯಾಗದೇ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಕೈಜೋಡಿಸುವ ಹಂಬಲದೊಂದಿಗೆ ಉತ್ತರ ಕರ್ನಾಟಕದಲ್ಲಿ ಉಂಟಾದ ಜಲ ಪ್ರಳಯಕ್ಕೆ ನಲುಗಿದ ಸಂತ್ರಸ್ಥತರಿಗೆ ನೆರವಿನ ಹಸ್ತ ನೀಡಲು ಮುಂದೆ ಬಂದಿದೆ ನಿಮ್ಮ ಉಡುಪಿ ಟೈಮ್ಸ್ .
ಸುಮಾರು 2 ತಿಂಗಳ ಹಿಂದೆ ಉಡುಪಿಯಲ್ಲಿ ಪ್ರಾರಂಭವಾದ ಕನ್ನಡ ವೆಬ್ ಸೈಟ್ ” ಉಡುಪಿ ಟೈಮ್ಸ್” 2 ಲಕ್ಷಕ್ಕೂ ಅಧಿಕ ವೀಕ್ಷಕರನ್ನು ಹೊಂದಿದ್ದ ಹೆಗ್ಗಳಿಕೆ ನಮಗಿದೆ., ನಮ್ಮ ಈ ಅಭಿಯಾನಕ್ಕೆ ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸಿದೆ ಅದರಲ್ಲಿ ಪ್ರಮುಖವಾಗಿ – ರೋಟರಿ ಕ್ಲಬ್ ಶಿರ್ವ, ಅನ್ಸ್ ಕ್ಲಬ್ ಕೋಟೇಶ್ವರ, ಜೆಸಿಐ ಕುಂದಾಪುರ, ಜೆಸಿಐ ಉಡುಪಿ ಸಿಲ್ವರ್ ಸ್ಟಾರ್ ,ಉದ್ಯಾವರ ಲಯನ್ಸ್ ಕ್ಲಬ್ ಸನ್ ಶೈನ್, ಜೆಸಿಐ ಕಲ್ಯಾಣಪುರ, ಜೆಸಿಐ ಶಂಕರಪುರ ಜಾಸ್ಮಿನ್,ಜೆಸಿಐ ಉದ್ಯಾವರ ಕುತ್ಪಾಡಿ, ಹೀಗೆ ಅನೇಕ ಸಂಸ್ಥೆಗಳು ನೆರವಿನ ಹಸ್ತ ಚಾಚಿದೆ, ಇನ್ನು ಅನೇಕ ಸಂಸ್ಥೆಗಳು ಸಹಾಯ ಹಸ್ತ ನೀಡಲು ಮುಂದೆ ಬರುತ್ತಿದೆ.
*ಉಡುಪಿ ,”ಮದರ್ ಆಫ್ ಸಾರೋಸ್ ದೇವಾಲಯದ ಸಭಾಂಗಣ- 94820-41878
* ಉದ್ಯಾವರ, ಸನೋರಿಟ ಎಂಟರ್‌ಪ್ರೈಸಸ್ ,ಸಿಂಡಿಕೇಟ್ ಬ್ಯಾಂಕ್ ಬಳಿ.- 99017-01381
* ಉದ್ಯಾವರ ,”ಸೌಂಧರ್ಯ” ಸಿಂಡಿಕೇಟ್ ಬ್ಯಾಂಕ್ ಎಟಿಎಮ್ ಬಳಿ- 91415-72906
* ಶಿರ್ವ ರೋಟರಿ ಕ್ಲಬ್ ,- 82968-18712
* ಶಂಕರಪುರ ಜೆಸಿ ಭವನ ,- 98451-47475 , 98808-75866
*ಜೆಸಿಐ ಕಲ್ಯಾಣಪುರ, ಸಂತೆಕಟ್ಟೆ – 96117-97171
* ಜೆಸಿ ಭವನ ಕುಂದಾಪುರ -96865-03454
* ಸಾಯಿ ರಾಮ್ ಕ್ಯಾಂಟೀನ್ ವಿದ್ಯಾನಿಕೇತನ ಸಮೂಹ ಸಂಸ್ಥೆ ಬಳಿ 87480-29018