ಮಣಿಪಾಲ ದರೋಡೆ ಪ್ರಕರಣ; ಓರ್ವ ಅಪ್ರಾಪ್ತ ಸಹಿತ ನಾಲ್ವರು ಆರೋಪಿಗಳ ಬಂಧನ

ಮಣಿಪಾಲ ; ಆಗಸ್ಟ್ 9 ರಂದು ತಡರಾತ್ರಿ ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಸಗ್ರಿ ಶಾಲೆಗೆ ಹೋಗುವ ರಸ್ತೆಯಲ್ಲಿ ಅಪರಿಚಿತರು ಬೈಕಿನಲ್ಲಿ ಹೋಗುತ್ತಿದ್ದ ಮೂಡುಸಗ್ರಿಯ ನರಸಿಂಹ ನಾಯಕ್‌ರನ್ನು ಅಡ್ಡಗಟ್ಟಿ ಪೊದೆಯಲ್ಲಿದ್ದ ಮರದ ಕೋಲಿನಿಂದ ಎಡಕಾಲಿಗೆ ಹೊಡೆದು ನಂತರ ಅವರದೇ ಹೆಲ್ಮೆಟ್ ತೆಗೆದು ಹಣೆಯ ಎಡಭಾಗಕ್ಕೆ ಹೊಡೆದು 24 ಗ್ರಾಂ ತೂಕದ ಸುಮಾರು 70.000/- ಮೌಲ್ಯದ ಚಿನ್ನದ ಸರ, ರೂಪಾಯಿ 29,000/- ಮೌಲ್ಯದ ಮೊಬೈಲ್ ಹಾಗೂ ಎ.ಟಿ.ಎಂ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಸಹಿತ ಸುಮಾರು 31,000/- ರೂಪಾಯಿ ನಗದು ಇದ್ದ ಪರ್ಸನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ನರಸಿಂಹ ನಾಯಕ್‌ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು.
ಕಟಪಾಡಿ, ವಿನೋಭಾ ನಗರ, ಆತೀಶ್ ಡಿಸಿಲ್ವಾ, ಪ್ರಾಯ (22) ಪಗಡಿಗುತ್ತು, ಕುರ್ಕಾಲ್ ಪ್ರೇಮನಾಥ್ ರೇವ್, ಪ್ರಾಯ (19) ಈಶ್ವರನಗರ, ಕೊಡವೂರು ಪೋಸ್ಟ್, ತೆಂಕನಿಡಿಯೂರು ಗ್ರಾಮ ಯೊಗೀಶ್ ಪ್ರಾಯ (19) ಬ್ರಹ್ಮಾವರ ಆರೂರು ಬಂಗ್ಲೆ ಗುಡ್ಡೆ ಸಂದೇಶ್ ( 18) ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸಹಿತ ಒಟ್ಟು 5 ಜನ ಆರೋಪಿತರನ್ನು ನಿನ್ನೆ ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕೆ.ಟಿ.ಎಂ ಬೈಕ್, ಡಿ.ವೋ ಸ್ಕೂಟರ್ ಮತ್ತು ವಿವೋ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ಪೈಕಿ ಈ ಪ್ರಕರಣದ ತನಿಖೆ ಸಮಯ ಮಣಿಪಾಲ ಠಾಣೆಗೆ ಸಂಬಂಧಿಸಿದ ಇನ್ನೊಂದು ಪ್ರಕರಣವಾದ ವಿದ್ಯಾರ್ಥಿನಿಗೆ ಲೈಂಗಿಕ ಚುಡಾವಣೆ ಪ್ರಕರಣವನ್ನು ತಾವೇ ಎಸಗಿದ್ದಾಗಿ ಬಂಧಿತ ಆರೋಪಿತರಾದ ಆತೀಶ್ ಡಿಸಿಲ್ವಾ, ಸಂದೇಶ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನು ಮಾಡಿರುವುದಾಗಿ ತನಿಖೆಯ ವೇಳೆಯಲ್ಲಿ ಬಾಯಿಬಿಟ್ಟಿದ್ದಾರೆ.
ಆರೋಪಿಗಳ ಶೀಘ್ರ ಪತ್ತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರ ಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಟಿ.ಅರ್ ಜೈಶಂಕರ್‌ರವರ ಮಾಗದರ್ಶನದಂತೆ ಮಣಿಪಾಲ ಠಾಣಾ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ,
ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಮಣಿಪಾಲ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಶ್ರೀ ಸಂಪತ್ ಕುಮಾರ್, ಪೊಲೀಸ್ ಉಪನಿರೀಕ್ಷಕರಾದ ಶ್ರೀ ಶ್ರೀಧರ ನಂಬಿಯಾರ್, ಎ.ಎಸ್.ಐ ಉಮೇಶ್ ಜೋಗಿ, ದಿವಾಕರ್ ಶರ್ಮಾ, ಹಾಗೂ ಸಿಬ್ಬಂದಿಯವರಾದ ಅಬ್ದುಲ್ ರಜಾಕ್, ಪ್ರಸನ್ನ ಕುಮಾರ್, ಥೋಮ್ಸನ್, ಪ್ರವೀಣ, ಸಂತೋಷ, ಅದರ್ಶ ಹಾಗೂ ಜೀಪು ಚಾಲಕರಾದ ಸುರೇಶ್ ನಾಯ್ಕ, ಸುದೀಪ್, ಸತೀಶ್‌ರವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!