ಕಾರ್ಕಳ ಮಾಜಿ ಶಾಸಕರು ಗೋಪಾಲ್ ಭಂಡಾರಿ ಹೃದಯಾಘಾತದಿಂದ ನಿಧನ
ಬೆಂಗಳೂರಿನಿಂದ ಮಧ್ಯಾಹ್ನ 2 ಘಂಟೆಗೆ ಹೊರಟಿದ್ದ ವೋಲ್ವೋ ಬಸ್ ನಲ್ಲಿದ್ದ ಗೋಪಾಲ್ ಭಂಡಾರಿಯವರು ಮಂಗಳೂರಿನ ಬಸ್ ನಿಲ್ದಾಣ ತಲುಪಿದ ನಂತರವೂ ಇಳಿಯದ್ದನ್ನು ಕಂಡ ನಿರ್ವಾಹಕರು ಪೊಲೀಸ್ ರಿಗೆ ತಿಳಿಸಿದ್ದು , ಇದೀಗ ವೆನ್ಲಾಕ್ಆಸ್ಪತ್ರೆಗೆ ಕೊಂಡ್ಯಲಾಗಿದೆ.
1952 ಜುಲೈ 5 ಹೆಬ್ರಿಯ ಚಾರ ಗ್ರಾಮದ ಹುರ್ತುಕೆಯಲ್ಲಿ ಜನಿಸಿದ ಇವರಿಗೆ 66 ವರ್ಷ ವಯಸ್ಸಾಗಿತ್ತು .ಒಂದು ಅವಧಿಗೆ ಹೆಬ್ರಿ ಬ್ಲಾಕ್ ಅಧ್ಯಕ್ಷರಾಗಿದ್ದರು
ಮಾಜಿ ಸಿಎಂ ವೀರಪ್ಪ ಮೊಯ್ಲಿ ಆಪ್ತ ಕೆಪಿಸಿಸಿ ಕಾರ್ಯದರ್ಶಿ ಆಗಿದ್ದರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಇವರನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಇವರನ್ನು ಸಕ್ರೀಯ ರಾಜಕೀಯಕ್ಕೆ ಕರೆ ತಂದರು ,
ಜಾತಿ ಬಲ ಇಲ್ಲದೆ ಎರಡು ಬಾರಿ ಶಾಸಕರಾಗಿದ್ದ ಭಂಡಾರಿ
ಉಡುಪಿ ಜಿಲ್ಲೆ ಹೆಬ್ರಿಯ ನಿವಾಸಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ 1999ರಲ್ಲಿ ಕಾಂಗ್ರೆಸ್ ನ ಎಚ್. ಗೋಪಾಲ ಭಂಡಾರಿ ಕಣಕ್ಕಿಳಿದು ಗೆಲುವು ಕಂಡಿದ್ದರು ನಂತರ
2004ರಲ್ಲಿ ಚುನಾವಣೆಯಲ್ಲಿ ವಿ. ಸುನಿಲ್ ಕುಮಾರ್ ಎದರು ಗೋಪಾಲ್ ಭಂಡಾರಿಗೆ ಸೋಲು ಉಂಟಾಯಿತು. 2008ರಲ್ಲಿ ಮತ್ತೆ ಗೋಪಾಲ್ ಭಂಡಾರಿ ಸುಮಾರು ಒಂದು ಸಾವಿರ ಮತಗಳಿಂದ ಸುನಿಲ್ ಕುಮಾರ್ ಎದುರು ಗೆಲುವು ಮರೆಯಲಾಗದ ಗೆಲವಾಗಿ ಉಳಿದಿತ್ತು.
2013ರ ಚುನಾವಣೆಯಲ್ಲಿ 4,254 ಮತಗಳ ಅಂತರದಲ್ಲಿ ಗೋಪಾಲ ಭಂಡಾರಿ ಸೋಲು, ಹೀಗೆ ನಿರಂತರ ರಾಜಕೀಯ ಕ್ಷೇತ್ರದಲ್ಲಿ ಸೋಲು ಗೆಲುವನ್ನು ಸರಿಯಾಗಿ ಅನುಭವಿಸಿ ರಾಜಕೀಯ ಕ್ಷೇತ್ರದಲ್ಲಿ ಬೆಳೆದವರು ಗೋಪಾಲ ಭಂಡಾರಿ ಒಂದು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು ಇದೀಗ ಪತ್ನಿ ಪ್ರಕಾಶಿನಿ ಭಂಡಾರಿ ,ಮಗಳು ದೀಪಾ ಭಂಡಾರಿ ,ಅಳಿಯ ಶ್ವೇತಾ ಕುಮಾರ್, ಸೊಸೆ ಅಕ್ಷತಾ ಪ್ರದೀಪ್ ಭಂಡಾರಿ, ಮಗ ಸುದೀಪ್ ಭಂಡಾರಿ, ಪ್ರದೀಪ್ ಭಂಡಾರಿ, ಸಹೋದರ ಎಚ್. ರಾಜೇಶ್ ಭಂಡಾರಿ ಯವರನ್ನು ಅಗಲಿದ್ದಾರೆ … ಇವರ ಅಗಲುವಿಕೆ ರಾಜಕೀಯ ಕ್ಷೇತ್ರಕ್ಕೆ ಬರ ಸಿಡಿಲಿನಂತೆ ಬಡಿದಿದೆ