ಗೋಪಾಲ್ ಭಂಡಾರಿ ನಿಧಾನಕ್ಕೆ ಸಂತಾಪ

ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ

ಹೃದಯಾಘಾತದಿಂದ ನಿಧನರಾದ ಕಾರ್ಕಳ ಮಾಜಿ ಶಾಸಕರಾದ ಎಚ್. ಗೋಪಾಲ ಭಂಡಾರಿಯವರ  ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ 10.00 ರಿಂದ 11.00 ರ ವರೆಗೆ ಕಿಸಾನ್ ಸಭಾ ಟ್ರಸ್ಟ್ ನ ರಾಜೀವಗಾಂಧಿ ಸಭಾಭವನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಹೆಬ್ರಿಯ ಪ್ರಥಮ ದರ್ಜೆ ಕಾಲೇಜಿನ ಹೊರಾಂಗಣದ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ .

ಮಹಿಳಾ ಕಾಂಗ್ರೆಸ್ ಸಮಿತಿ ಸಂತಾಪ

ಸರಳ ಸಜ್ಜನಿಕೆಯ ರಾಜಕಾರಣಿಯೆಂದೇ ಜನಪ್ರಿಯರಾಗಿದ್ದ ಶ್ರೀಯುತ ಗೋಪಾಲ ಭಂಡಾರಿಯವರ ನಿಧನ ನಮಗೆಲ್ಲರಿಗೂ ತುಂಬಲಾರದ ನಷ್ಟವನ್ನುಂಟು ಮಾಡಿದೆ.ಅತ್ಯುತ್ತಮ ವಾಗ್ಮಿಯಾಗಿದ್ದ ಅವರು ಪಕ್ಷದ ಯಾವುದೇ ಕಾರ್ಯಕ್ರಮವಿರಲಿ,ಸದಾ ಹಾಜರಿದ್ದು ,ಕಾರ್ಯಕರ್ತರಲ್ಲಿ ಸ್ಪೂರ್ತಿಯನ್ನು ತುಂಬುತ್ತಿದ್ದರು.ಎಲ್ಲರೊಂದಿಗೂ ಸ್ನೇಹ,ಸೌಹಾರ್ದತೆಯಿಂದ ಮಾತನಾಡುತ್ತಿದ್ದ ಗೋಪಲಭಂಡಾರಿಯವರ ಆ ನಗುಮುಖ ಇನ್ನು ಒಂದು ನೆನಪು ಮಾತ್ರ.ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬಕ್ಕೆ ನೀಡಲಿ ಎಂದು ಹಾರೈಸುತ್ತೇನೆ.—ಶ್ರೀಮತಿ ಗೀತಾ ವಾಗ್ಳೆ, ಅಧ್ಯಕ್ಷರು,ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ.

ಮಾಜಿ ಶಾಸಕ ಯು.ಆರ್. ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಅಲೆವೂರು ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಕಿಶಾನ್ ಹೆಗ್ಡೆ ಕೊಳ್ಕೆಬೈಲ್ ಸಹಿತ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!