ಪೊಲೀಸರಿಗೆ ಗುಡ್ ನ್ಯೂಸ್
ಬೆಂಗಳೂರು: ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆಯಾದ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಆದೇಶದ ಅನ್ವಯ ಪೊಲೀಸರ ವೇತನ ಪಟ್ಟಿ ವಿವರ ಇಲ್ಲಿದೆ.
2016 ರ ಜೂನ್ 21ರಂದು ಔರಾದ್ಕರ್ ಸಮಿತಿ ರಚನೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಔರಾದ್ಕರ್ ವರದಿಗೆ ಮೈತ್ರಿ ಸರ್ಕಾರ ಅಂಕಿತ ಹಾಕಿ, ಆಗಸ್ಟ್ 1ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಮುಂದಿನ ಆದೇಶ ಬರುವವರೆಗೆ ಕಾಯುವಂತೆ ಎಡಿಜಿಪಿ ಸೂಚಿಸಿದ್ದರು.
ಸದ್ಯ ವರದಿ ಶಿಫಾರಸ್ಸಿನಂತೆ ವೇತನವನ್ನು ಉನ್ನತೀಕರಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಈ ಆದೇಶ 2019ರ ಆಗಸ್ಟ್ 1 ರಿಂದಲೇ ಜಾರಿಯಾಗಿದೆ.
ಪರಿಷ್ಕೃತ ಮೂಲ ವೇತನ ವಿವರ
- ಪೊಲೀಸ್ ಕಾನ್ಸ್ಟೇಬಲ್ – ರಿಸರ್ವ್ ಕಾನ್ಸ್ಟೇಬಲ್ – 23,500 ದಿಂದ 47,650
- ಹೆಡ್ ಕಾನ್ಸ್ಟೇಬಲ್ – 27,650 ದಿಂದ 52,650
- ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ – 30,350 ದಿಂದ 58,250
- ಇನ್ಸ್ಪೆಕ್ಟರ್ – 43,100 ದಿಂದ 83,900
- ಎಸ್ಪಿ( ಐಪಿಎಸ್ ಹೊರತುಪಡಿಸಿ)-70,850 ದಿಂದ 1,07,100.