ಗೋಲ್ಡ್ನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ
ಇದೀಗ ಸ್ಯಾಂಡಲ್ವುಡ್ನಲ್ಲಿ ಬರ್ತಡೇ ಸೆಲೆಬ್ರೇಷನ್ ಕಡಿಮೆಯಾಗುತ್ತಿದೆ, ಅದೇ ಸಾಲಿನಲ್ಲಿ ಗೋಲ್ಡ್ನ್ ಸ್ಟಾರ್ ಗಣೇಶ್ ಕೂಡ ಹುಟ್ಟುಹಬ್ಬ ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ. ಇದೇ ಜುಲೈ 2 ರಂದು ಅವರ ಹುಟ್ಟುಹಬ್ಬಕ್ಕೆ ಅಭಿಮಾನಿ ಬಳಗದವರು ಸಿದ್ಧತೆ ಮಾಡಿಕೊಳ್ಳುವ ಮೊದಲೇ ನಟ ಗಣೇಶ್ ತಿಳಿಸಿದ್ದಾರೆ.
ನಮಸ್ಕಾರ.. ನಮಸ್ಕಾರ.. ಅಂತಾನೇ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಮುಂಗಾರು ಮಳೆ ಖ್ಯಾತಿಯ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬರ್ತ್ಡೇ ಆಚರಣೆ ಮಾಡದಿರಲು ಕಾರಣ ಕೂಡ ಕೊಟ್ಟಿದ್ದಾರೆ, ಕೆಲವು ತಿಂಗಳ ಹಿಂದೆಯಷ್ಟೇ ತಮ್ಮ ತಂದೆಯನ್ನು ಅಗಲಿದ್ದ ಕಾರಣಕ್ಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ, ಅಲ್ಲದೇ ಆ ಸಂಧರ್ಭ ಮನೆಯಲ್ಲೂ ಇಲ್ಲದಿರುವುದಿಂದ ಅಭಿಮಾನಿಗಳು ದೂರದ ಊರಿನಿಂದ ಬಂದು ಕಾಯುವ ಪ್ರಯತ್ನ ಮಾಡಬೇಡಿ.
ಹುಟ್ಟುಹಬ್ಬ ಆಚರಿಸಲು ಹಾರ, ಕೇಕ್, ಬ್ಯಾನರ್ಗಳಿಗಾಗಿ ಹಣ ವ್ಯಯಿಸುವ ಬದಲು ಆ ಹಣದಿಂದ ಹತ್ತಿರದ ಅನಾಥಾಶ್ರಮ, ವೃದ್ಧಶ್ರಾಮಗಳಿಗೆ ನೀಡಿ ಸಹಾಯ ಮಾಡಿದರೇ ಅದೇ ದೊಡ್ಡ ಉಡುಗೊರೆ ಎಂದು ತಿಳಿಸಿದ್ದಾರೆ.