ತೊಂಡೆ ಕಾಯಿ – ಕಾಯಿ ಹುಳಿ
ಬೇಕಾಗುವ ಸಾಮಗ್ರಿ
ತೊಂಡೆ ಕಾಯಿ– ಕಾಲು ಕೆಜಿ
ತೆಂಗಿನ ಕಾಯಿ -1 ಹೋಳು
ಮಜ್ಜಿಗೆ
ಒಣಮೆಣಸು -1
ಹಸಿಮೆಣಸು -4
ಇಂಗು
ಒಗ್ಗರಣೆ (ಜೀರಿಗೆ, ಮಜ್ಜಿಗೆ ಮೆಣಸು ,ಕರಿಬೇವು )
ಮೊದಲಿಗೆ ತೊಂಡೆಕಾಯಿಯನ್ನ ಉಪ್ಪು ಹಾಕಿ ಬೇಯಿಸಿಕೊಳ್ಳಿ, ನಂತರ ಒಂದು ಮಿಕ್ಸಿ ಜಾರಿಗೆ ತುರಿದ ತೆಂಗಿನಕಾಯಿ ಹಸಿಮೆಣಸು ೧ ಒಣಮೆಣಸು ಇಂಗು ಹಾಕಿ ಸ್ವಲ್ಪ ಮಜ್ಜಿಗೆ ಹಾಕಿ ರುಬ್ಬಿಕೊಳ್ಳಿ ..ನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಜೀರಿಗೆ, ಮಜ್ಜಿಗೆ ಮೆಣಸು ಹಾಗು ಕರಿಬೇವಿನ ಒಗ್ಗರಣೆ ಹಾಕಿ ಅದಕ್ಕೆ ಬೇಯಿಸಿದ ತೊಂಡೆಕಾಯಿ ಹೋಳನ್ನು ಸೇರಿಸಿ ಅದು ಒಂದು ಕುದಿ ಬಂದ ಮೇಲೆ ಅದಕ್ಕೆ ರುಬ್ಬಿಕೊಂಡ ಮಿಶ್ರಣವನ್ನ ಹಾಕಿ ಒಂದು ಕುದಿ ಕುದಿಸಿ ಒಲೆಯಿಂದ ಇಳಿಸುವ ಮೊದಲು ಮಜ್ಜಿಗೆಯನ್ನ ಸೇರಿಸಿ ಬೇಕಾದಲ್ಲಿ ಕೊತ್ತಂಬರಿ ಸೊಪ್ಪನ್ನ ಸೇರಿಸಬಹುದು ….
ಶ್ವೇತಾ ಉಲ್ಲಾಸ್ ಹೊಳ್ಳ
ಮೊಡಂಕಾಪು