ಗಂಗೊಳ್ಳಿ: ಜಮಾತುಲ್ ಮುಸ್ಲಿಮೀನ್ ಅಧ್ಯಕ್ಷರಾಗಿ ಪಿ ಎಂ ಹಸೈನಾರ್ ಸಾಹಬ್ ಆಯ್ಕೆ
ಗಂಗೊಳ್ಳಿ: ಇಲ್ಲಿನ ಕೇಂದ್ರ ಜುಮ್ಮಾ ಮಸೀದಿಯ ಆಡಳಿತ ಮಂಡಳಿ ಜಮಾತುಲ್ ಮುಸ್ಲಿಮೀನ್ ( ವಕ್ಫ್ ರಿಜಿಸ್ಟರ್ಡ್) ಇದರ ನೂತನ ಕಮಿಟಿಯು ಮಾಜಿ ಅಧ್ಯಕ್ಷರಾದ ಜನಾಬ್ ರಫೀಕ್ ಸಾಹಬ್ ಪೂಕೊಯ ಇವರ ಅಧ್ಯ ಕ್ಷತೆಯಲ್ಲಿ ಆಯ್ಕೆಯಾಯಿತು.. ಈ ಒಂದು ಕಮಿಟಿಯು ಮೂರು ವರುಷದ ಅವಧಿಯದ್ದಾಗಿರುತ್ತದೆ.. ಅಧ್ಯಕ್ಷರಾಗಿ ಜನಾಬ್ ಪಿ ಎಂ ಹಸೈನಾರ್ ಸಾಹಬ್, ಉಪಾಧ್ಯಕ್ಷರಾಗಿ ಮೊಹಮ್ಮದ್ ಇಬ್ರಾಹಿಂ ಎಂ ಎಚ್,ಕಾರ್ಯದರ್ಶಿಯಾಗಿ ಜಿ ರೆಹಾನ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ಫಾಯಿಕ್ ಎಂ ಎಚ್, ಖಜಾಂಚಿಯಾಗಿ ಮೊಹಮ್ಮದ್ ಹನೀಫ್, ಉಳಿದಂತೆ ಸದಸ್ಯರಾಗಿ ಮುಅಝಮ್ ಎಂ ಎಚ್, ಜಯೀಮ್ ಎಂ ಎಚ್, ಅಬ್ದುಲ್ ಹಮೀದ್, ಅಬ್ದುಲ್ ಗಫಾರ್ ಬುಖಾರಿ, ಮುಜಾಹೀದ್ ನಾಖುದ, ಭಟ್ಕಳ್ ಮೊಹಮ್ಮದ್ ಹುಸಇನ್,ಮೌಲಾನಾ ಝುಬೈರ್, ನಾಸೀರ್ ಬುಡ್ಧ, ತಬರೇಜ್ ಖಲೀಫ ಹಾಗೂ ಮೊಹಮ್ಮದ್ ಜಲೀಲ್ ಆಯ್ಕೆಯಾಗಿದ್ದಾರೆ.