ಸಮಾಜಕ್ಕೆ ಕೊಡುಗೆಯ ಭಾವನೆ ಬೆಳೆಸಿಕೊಳ್ಳಬೇಕು: ಅದಮಾರು ಕಿರಿಯ ಶ್ರೀ

 ಉಡುಪಿ:ಸಮಾಜಕ್ಕೆ ಕೊಡುಗೆ ನೀಡಬೇಕು ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದು ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದರು.  ಕೃಷ್ಣಮಠ ರಾಜಾಂಗಣದಲ್ಲಿ ಭಾನುವಾರ ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್‌ನ  ಹದಿನೈದನೇ ವರ್ಷದ ವಿನಮ್ರ ಸಹಾಯ ಕಾರ್ಯಕ್ರಮ ಉದ್ಘಾಟಿಸಿ ಆಶಿರ್ವಚನ ನೀಡಿದರು. ವಿದ್ಯಾಪೋಷಕ್ ಸಂಸ್ಥೆಯಿಂದ ಸಹಾಯ ಪಡೆದುಕೊಂಡವರು ಮುಂದೆ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು. ಆಧ್ಯಾತ್ಮಿಕದಲ್ಲಿ ಸಹ ಸಾಧನೆ ಮಾಡಬೇಕು. ಸಮಾಜ ಹಾಕಿರುವ ಚೌಕಟ್ಟನ್ನು ಮೀರಿದರೆ ತೊಂದರೆ ಖಚಿತ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ವಹಿಸಿದ್ದರು. ಅಶ್ವಿನಿ ಹೆನ್ನಾಬೇರ್ ಇವಳ ಹೆಸರಿನಲ್ಲಿ ನೀಡುವ ಅತ್ಯುತ್ತಮ ಪತ್ರ ಮತ್ತು ಯು. ಉಪೇಂದ್ರ ಅವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಕಡತ ನಿರ್ವಹಣೆಗೆ ನೀಡುವ ಪ್ರಮಾಣ ಪತ್ರ ವಿತರಿಸಲಾಯಿತು. ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್‌ನ ಜಿ. ಎಂ ಭಾಸ್ಕರ ಹಂದೆ, ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್, ಹುಬ್ಬಳ್ಳಿ ಮೈಲೈಫ್ ಸಂಸ್ಥೆಯ ಪ್ರವೀಣ್ ಗುಡಿ ಮತ್ತು ಲೆಕ್ಕಪರಿಶೋಧಕ ಸಿ.ಎ ಗಣೇಶ್ ಕಾಂಚನ್  ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಬಳಿಕ ಮಯ್ಯಸ್ ಸಂಸ್ಥೆಯ ಸಂಸ್ಥಾಪಕರಾದ ಡಾ.ಪಿ.ಸದಾನಂದ ಮಯ್ಯ ಇವರು ವಿಶೇಷ ಉಪನ್ಯಾಸ ನೀಡದರು.ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ ಭಟ್ ಸ್ವಾಗತಿಸಿದರು.  ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವಿಸಿದರು. ಕೆ. ಮನೋಹರ್ ವಂದಿಸಿದರು.   ಗಣೇಶ್ ರಾವ್ ಎಲ್ಲೂರು

ಸಮಾರೋಪ ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಜಿ.ಶಂಕರ್ ವಹಿಸಿದ್ದರು. ಅತಿಥಿಗಳಾಗಿ ರತ್ನಕುಮಾರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಆನಂದ್ ಸಿ.ಕುಂದರ್, ಡಾ.ತಲ್ಲೂರು ಶಿವರಾಮ ಶೆಟ್ಟಿ, ವಿ.ಜಿ.ಶೆಟ್ಟಿ, ಭುವನೇಂದ್ರ ಕಿದಿಯೂರು, ವಿಶ್ವನಾಥ ಶೆಣೈ, ಆನಂದ ಪಿ. ಸುವರ್ಣ, ಯಕ್ಷಗಾನ ಕಲಾರಂಗದ ಅಧ್ಯಕ್ಷ  ಗಣೇಶ್ ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!