ಮಿಯ್ಯಾರಿನ ಗಣಪತಿ ವಿಗ್ರಹ ಕೆನರಾ ಬ್ಯಾಂಕ್ ಕೇಂದ್ರಿಯ ಕಚೇರಿಗೆ
ಕಾರ್ಕಳ : ಕೆನರಾ ಬ್ಯಾಂಕ್ ಕೇಂದ್ರಿಯಾ ಕಚೇರಿಯ ಮುಂಭಾಗ ದ್ವಾರದಲ್ಲಿ ಪ್ರತಿಷ್ಠಾಪಿಸಲು ಮಿಯ್ಯಾರು ಗ್ರಾಮದಿಂದ ೧೦ ಲಕ್ಷ ರೂ. ವೆಚ್ಚದಲ್ಲಿ ಏಳು ಅಡಿ ಎತ್ತರದ ರೋಸ್ ವುಡ್ ಹಾಗೂ ಗ್ರಾನೇಟ್ ಕಲ್ಲಿನಿಂದ ನಿರ್ಮಾಣಗೊಂಡ ಗಣಪತಿಯ ವಿಗ್ರಹವು ಸಿದ್ದಗೊಳ್ಳುತ್ತಿದೆ. ಮುಂಬರುವ ಸೆಪ್ಟೆಂಬರ್ ತಿಂಗಳ ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಳ್ಳಲಿದೆ ಎಂದು ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಮಣಿಮಕಲೈ ಹೇಳಿದ್ದಾರೆ.
ಅವರು ಶನಿವಾರ ಮಿಯ್ಯಾರು ಕೆನರಾ ಬ್ಯಾಂಕ್ ಸಿಇ ಕಾಮತ್ ಕಲಶಕಾರ್ಮಿಕರ ತರಬೇತಿ ಕೇಂದ್ರ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿ, ಕೆನರಾ ಬ್ಯಾಂಕ್ ಪ್ರಾಯೋಜಕತ್ವದ ೩೩ ಶಾಖೆಗಳನ್ನು ಹೊಂದಿದ್ದು ಎರಡು ಸಾವಿಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಕಾರ್ಕಳ ಮಿಯ್ಯಾರು ಸಿಇ ಕಾಮತ್ ಸಂಸ್ಥೆಯಲ್ಲಿ ಪ್ರಸ್ತುತ 77 ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಸಿಈ ಕಾಮತ್ ತರಬೇತಿ ಸಂಸ್ಥೆಯ ನಿರ್ದೇಶಕರಾದ ಜಿ.ಪಿ ಪ್ರಭು ಮಾತನಾಡಿ ಸಿಇ ಕಾಮತ್ ಸಂಸ್ಥೆ ೧೯೯೭ ರಲ್ಲಿ ಪಾರಂಭವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಯುವಜನತೆಗೆ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವಂತೆ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಈಗಾಗಲೇ 693 ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ವನ್ನು ಪೂರೈಸಿ ತಮ್ಮ ಜೀವನಕ್ಕೆ ಬೇಕಾದ ಉದ್ಯೋಗವನ್ನು ತಾವೇ ರೂಪಿಸಿ ಕೊಳ್ಳವ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಇಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಶಿಲ್ಪ ಕಲಾ ಅಕಾಡಮಿಯ ವತಿಯಿಂದ ಮಾನ್ಯತೆ ನೀಡಿ ಗುರುತಿಸಿಲಾಗುದು. ಅದರಂತೆ ಈ ಬಾರಿ ಐದು ವಿದ್ಯಾರ್ಥಿಗಳಿಗೆ ಪ್ರಶಸ್ತಿ ದೊರೆತಿದ್ದು, ಅವರನ್ನು ಇಂದು ನಾವು ಸನ್ಮಾನಿಸಲಿದ್ದೇವೆ ಎಂದರು.
ಶಿಕ್ಷಕ ಗುಣವಂತೇಶ್ಚರ ಭಟ್ ಮಾತನಾಡಿ, ಶಿಲ್ಪಕಲೆ ಅರಳಿಸುವಂತ ಕೆಲಸ ನಮ್ಮ ಸಂಸ್ಥೆಯಿಂದ ನಡೆಯುತ್ತಿದೆ. ಉಚಿತ ತರಬೇತಿ ಪಡೆದ ಬಳಿಕ ಮುಂದಿನ ಭವಿಷ್ಯಕ್ಕಾಗಿ ಅವರಿಗೆ ಆರ್ಥಿಕ ಸಹಾಯವನ್ನು ನೀಡುವ ಕೆಲಸ ಕೂಡಾ ನಡೆಯುತ್ತಿದೆ ಎಂದರು.
ಶಿಕ್ಷಕ ನಾಗೇಶ್ ಅಚಾರ್ಯ ಮಾತನಾಡಿ 19 ತಿಂಗಳ ಕಾಲ ಇಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡಲಾಗುತ್ತಿದ್ದು ಪ್ರಾರಂಭದಲ್ಲಿ ಸಾಂಪ್ರಾದಾಯಿಕ ಚಿತ್ರವನ್ನು ನಂತರ ಮದು ಶಿಷ್ಟ ವಿಧಾನ ದಲ್ಲಿ ,ಮೇಣ, ಎರಕ ಮಾಡುವಂತದ್ದು , ಬಳಿಕ ಹಿತ್ತಾಳೆ ತಾಮ್ರದ ಹಾಳೆಯ ಮೂಲಕ ಕಲಾ ತರಬೇತಿ ನೀಡಲಾಗುತ್ತಿದೆ. ಬಳಿಕ ದೇವಸ್ತಾನದ ಅರ್ಚನೆ ಮೂರ್ತಿ ದೇವರ ವಿಗ್ರಹಗಳು ಇಲ್ಲಿ ಸಿದ್ದ ಪಡಿಸಲಾಗುತ್ತಿದೆ.
ಕೇಂದ್ರ ಕಚೇರಿಯ ಬೆಂಗಳೂರು ಜನರಲ್ ಮೇಜರ್ ಪಳನೀವೇಲು, ಮಂಗಳೂರಿ ವೃತ್ತ ಕಚೇರಿ ಪ್ರಧಾನ ವ್ಯವಸ್ಥಾಪಕ ಯೋಗಿಶ್ ಆಚಾರ್ಯ, ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಮೇಟಿ, ಉಪಸ್ಥಿತರಿದ್ದರು