ಗಂಡು ನವಿಲಿನ ಶವ ಪತ್ತೆ

ಕಾರವಾರ : ಅರಣ್ಯ ಪ್ರದೇಶದಲ್ಲಿ ಗಂಡು ನವಿಲೊಂದು ಮ್ರತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ದೇವಭಾಗ ಅರಣ್ಯದಲ್ಲಿ ನೆಡೆದಿದೆ.

ಬೆಳಗಿನ ಜಾವ ಸುಮಾರು ಆರು ವರ್ಷ ವಯಸ್ಸಿನ ನವಿಲು ಗಾಳಿಗಿಡಗಳ ನೆಡುತೋಪಿನಲ್ಲಿ ಮ್ರತಪಟ್ಟಿದ್ದು ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ರು.

ಸ್ಥಳಕ್ಕೆ ಭೇಟಿ ನೀಡಿದ ಗೋಪಶಿಟ್ಟಾ ವಲಯ ಅರಣ್ಯಾಧಿಕಾರಿ ಜಿ.ವಿ ನಾಯ್ಕ್ ಪರಿಶೀಲನೆ ನೆಡೆಸಿ ನವಿಲಿನ ಮ್ರತದೇಹವನ್ನು ಮರಣೋತ್ತರ ಪರೀಕ್ಷೆಗೆ ಪಶು ವೈದ್ಯಾಧಿಕಾರಿಗಳು ನೆಡೆಸಿ ಇದೊಂದು ಸ್ವಾಭಾವಿಕ ಸಾವೆಂದು ಧ್ರಡಪಡಿಸಿದ್ದು ನವಿಲಿನ ಮ್ರತದೇಹವನ್ನು ಅಂತ್ಯ ಸಂಸ್ಕಾರ ನಡೆಸಲಾಯಿತು .

Leave a Reply

Your email address will not be published. Required fields are marked *

error: Content is protected !!