ಗಾಳದ ಕೊಂಕಣಿ ಸಮಾಜದಿಂದ ಅದಮಾರು ಶ್ರೀಗಳ ಭೇಟಿ
ಉಳ್ಳಾಲ: ಮುಂದಿನ ಜನವರಿಯಲ್ಲಿ ಪರ್ಯಾಯ ಪೀಠವನ್ನೇರಲಿರುವ ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರನ್ನು ಶಿಷ್ಯವರ್ಗವಾದ ಮಂಗಳೂರಿನ ಗಾಳದ ಕೊಂಕಣಿ ಸಮಾಜಬಾಂಧವರ ನಿಯೋಗ ರವಿವಾರ ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭ ಗಾಳದ ಕೊಂಕಣಿ ಅಭ್ಯುದಯ ಸಂಘ, ಶ್ರೀ ಸೋಮೇಶ್ವರಿ ಮಹಿಳಾ ಮಂಡಳಿಯ ಚಟುವಟಿಕೆ ಹಾಗೂ ಲಾಭದಲ್ಲಿ ಮುನ್ನಡೆಯುತ್ತಿರುವ ಶ್ರೀ ಸೋಮೇಶ್ವರಿ ಸೌ.ಸ.ನಿ.ದ ಕುರಿತಂತೆ ಕಿರಿಯ ಶ್ರೀಗಳಿಗೆ ವಿವರಿಸಲಾಯಿತು. ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ಸ್ವಾಮೀಜಿ ಶಿಷ್ಯವರ್ಗವನ್ನು ಫಲ, ಮಂತ್ರಾಕ್ಷತೆ ನೀಡಿ ಆರ್ಶೀವದಿಸಿದರು.
ಇದೇ ವೇಳೆ ಆರ್ಶೀವಚನ ನೀಡಿದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಶಿಷ್ಯವರ್ಗವು ಸಂಘದ ಮೂಲಕ ನಡೆಸುವ ಜನಪರ ಚಟುವಟಿಕೆ ಅಭಿನಂದನೀಯವಾಗಿದ್ದು, ಮನಷ್ಯನಿಗೆ ತಾಳ್ಮೆ ಎಂಬುದು ಅತೀ ಮುಖ್ಯವಾಗಿದೆ. ಪ್ರತಿನಿತ್ಯ ದೇವರ ನಾಮಸ್ಮರಣೆಯನ್ನು ಮಾಡುವ ಮೂಲಕ ತಮ್ಮ ಜೀವನವನ್ನು ಪಾವನಗೊಳಿಸಬೇಕು ಎಂದರು.ಸಂಘದ ವತಿಯಿಂದ ಕಿರಿಯ ಯತಿಗಳ ಪಾದಪೂಜೆ ನೆರವೇರಿಸಲಾಯಿತು. ಇದಕ್ಕು ಮೊದಲು ಪಡುಬಿದ್ರೆ ಸಮೀಪದ ಎರ್ಮಾಳುವಿನಲ್ಲಿರುವ ಅದಮಾರುವಿನ ಮೂಲ ಮಠಕ್ಕು ಭೇಟಿ ನೀಡಿ ಅಲ್ಲಿನ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಗುರಿಕಾರರಾದ ರಾಮಚಂದ್ರ ನಾಯ್ಕ್ ,ಉಮೇಶ್ ನಾಯ್ಕ್ ಜಪ್ಪಿನಮೊಗರು, ಗಾಳದ ಕೊಂಕಣಿ ಅಭ್ಯುದಯ ಸಂಘದ ಪ್ರ.ಕಾರ್ಯದರ್ಶಿ ಮುರಳೀಧರ ನಾಯ್ಕ್,ಜತೆ ಕಾರ್ಯದರ್ಶಿಆಶಾ ನಾಯ್ಕ್ ಗೋರಿಗುಡ್ಡೆ,ಕೋಶಾಧಿಕಾರಿ ಚಂದ್ರಶೇಖರ್ ಬಪ್ಪಾಲ್,ಮಾಜಿ ಅಧ್ಯಕ್ಷ ಉಮಾನಾಥ ನಾಯ್ಕ್ ಉಳ್ಳಾಲ,ಮಾಜಿ ಪ್ರ.ಕಾರ್ಯದರ್ಶಿ ಕೋಡಿ ಜಯ ನಾಯ್ಕ್ ಪದಾಧಿಕಾರಿಗಳಾದ ಮಹೇಶ್ ಬಂಟ್ವಾಳ,ಯೋಗೀಶ್ ಪಂಪ್ ವೆಲ್,ಲಕ್ಷ್ಮಣ್ ನಾಯ್ಕ್, ಮಂಜುನಾಥ ನಾಯ್ಕ್, ಶ್ರೀರಿಷ್,ನಾಗೇಶ್ ಕೋಡಕಲ್,ಸುಧೀರ್ ಬಿಜೈ, ಪ್ರವೀಣ್ ಬಂಟ್ವಾಳ, ಶ್ರೀ ಸೋಮೇಶ್ವರಿ ಸೌ.ಸ.ಸಂಘದ ಉಪಾಧ್ಯಕ್ಷ ಧರ್ಮಪಾಲ್ ನಾಯ್ಕ್ ಪಂಪ್ ವೆಲ್, ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಹೇಮಾ ಮಂಕಿಸ್ಟ್ಯಾಂಡ್, ಜಯಶೀಲ ನಾಯ್ಕ್ ಬಜಾಲ್, ಮೋಹಿನಿ ಶೆಟ್ಟಿಬೆಟ್ಟು, ಅಮಿತಾ ನಾಯ್ಕ್ ಬಂಟ್ವಾಳ, ಉದ್ಯಮಿ ಯಶವಂತ ನಾಯ್ಕ್ ಮೊದಲಾದವರಿದ್ದರು.