ಮಾದಕ ವ್ಯಸನ ಮುಕ್ತ ವಿದ್ಯಾರ್ಥಿ ಶಕ್ತಿ ದೇಶದ ಭವಿಷ್ಯ- ಪ್ರೇಮಾನಂದ ಕಲ್ಮಾಡಿ
ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ, ಪ್ರಜ್ಞಾ ಸಲಹಾ ಕೇಂದ್ರ ಮಂಗಳೂರು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ತರಬೇತುದಾರ ಪ್ರೇಮಾನಂದ ಕಲ್ಮಾಡಿ ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಹಾಗಾಗಿ, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲದೇ ದೇಶದ ಭವಿಷ್ಯಕ್ಕೂ ಅಪಾಯವೆಂದರು. ಹೆಣ್ಣು ಮಕ್ಕಳು ಪರಿಸ್ಥಿತಿ ಎದುರಿಸುವ ಧೈರ್ಯ ಮಾಡಬೇಕು, ಕಾನೂನಿನ ಅರಿವು ಹೊಂದುವುದು ಅನಿವಾರ್ಯವೆಂದರು. 18 ವರ್ಷದ ಒಳಗಿನ ಮಕ್ಕಳು ದುಷ್ಕೃತ್ಯಗಳಿಂದ ದೂರ ಉಳಿಯಲು ಕಠಿಣ ಮನಸ್ತೈರ್ಯ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲರಾದ ಶ್ರೀ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ಞಾ ಸಲಹಾ ಕೇಂದ್ರದ ಕ್ಷಮಾ ಶೆಟ್ಟಿ, ಉಡುಪಿ ಯೂತ್ ಕೋ-ಆರ್ಡಿನೇಟರ್ ರಯಾನ್ ಫೆರ್ನಾಂಡಿಸ್, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಮಂಜುನಾಥ ಬಿ.ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಸ್ವಾಗತಿಸಿ, ಕುಮಾರಿ ಆಶಿಕಾ ವಂದಿಸಿದರು. ಕುಮಾರಿ ನಿರೂಪಿಸಿದರು.