ಫಾ.ಮಹೇಶ್ ಡಿಸೋಜ: ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಸಾವಿರಾರು ಜನರು
ಶಿರ್ವ : ಶುಕ್ರವಾರ ನಿಧನರಾದ ಸಾವೂದ್ ಮಾತೆಯ ದೇವಾಲಯ ಇಲ್ಲಿನ ಸಹಾಯಕ ಧರ್ಮಗುರು ಮತ್ತು ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಫಾ. ಮಹೇಶ್ ಡಿಸೋಜ ಅವರ ಅಂತ್ಯಕ್ರಿಯೆಯ ಪ್ರಾರ್ಥನಾ ವಿಧಿಗಳ ನೇತೃತ್ವವನ್ನು ಪರಮಪೂಜ್ಯ ಡಾ ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಎಲೋಸಿಯಸ್ ಪೌಲ್ ಡಿಸೋಜ ಅವರ ನೇತೃತ್ವದಲ್ಲಿ ನಡೆಯಿತು. 300 ಕ್ಕೂ ಅಧಿಕ ಧರ್ಮಗುರುಗಳು, ನೂರಾರು ಧರ್ಮಭಗಿನಿಯರ ಉಪಸ್ಥಿತಿಯಲ್ಲಿ 4000 ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸಿದ್ದರು.
ಬೆಳಗ್ಗೆಯಿಂದಾ ಸಂಜೆಯವರೆಗೆ ಪ್ರಾರ್ಥೀವ ಶರೀರವನ್ನು ವಿದ್ಯಾರ್ಥಿಗಳು ಸೇರಿದಂತೆ ಜಾತಿ ಮತ ಭೇದವಿಲ್ಲದೆ 10 ಸಾವಿರಕ್ಕೂ ಅಧಿಕ ಜನರು ಫಾ. ಮಹೇಶ್ ಅವರ ಅಂತಿಮ ದರ್ಶನವನ್ನು ಪಡೆದರು. ಫಾ. ಮಹೇಶ್ ಅವರ ತಂದೆ ತಾಯಿ, ಸಹೋದರ ಮತ್ತು ಕುಟುಂಬಸ್ಥರು ಅಪಾರ ಬಂಧು ಬಳಗದ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆಯೂ ನಡೆಯಿತು.
ಉಡುಪಿ ಧರ್ಮ ಪ್ರಾಂತ್ಯದ ಪರವಾಗಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಸ್ಟಾನಿ ಲೋಬೋ ಶ್ರದ್ಧಾಂಜಲಿ ಅರ್ಪಿಸಿ ನಮನ ಸಲ್ಲಿಸಿದರು. ದೇವಾಲಯದ ಪರವಾಗಿ ವಿಲ್ಸನ್ ರೋಡ್ರಿಗಸ್ ಶ್ರದ್ಧಾಂಜಲಿ ಅರ್ಪಿಸಿದರೆ, ಕುಟುಂಬಸ್ಥರ ಪರವಾಗಿ ಮತ್ತು ವಿದ್ಯಾರ್ಥಿ ಮತ್ತು ಶಿಕ್ಷಕರ ಪರವಾಗಿಯೂ ಶ್ರದ್ಧಾಂಜಲಿ ಅರ್ಪಿಸಿ ನಮನ ಸಲ್ಲಿಸಲಾಯಿತು.
ಪ್ರಾರ್ಥನಾ ವಿಧಿಗಳಲ್ಲಿ ಫಾ. ಡೆನ್ನಿಸ್ ಡೇಸಾ, ಫಾ. ವಲೇರಿಯನ್ ಮೆಂಡೋನ್ಸಾ, ಫಾ. ಪೌಲ್ ರೇಗೋ, ಫಾ. ಆಲ್ಬನ್ ಡಿಸೋಜ, ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್, ಫಾ. ರಿಚರ್ಡ್ ಕುವೆಲ್ಲೋ, ಫಾ. ವಿನ್ಸೆಂಟ್ ಕ್ರಾಸ್ತಾ, ಫಾ. ಫ್ರಾನ್ಸಿಸ್ ಲೂವಿಸ್, ಫಾ. ರಾಯ್ಸನ್ ಫರ್ನಾಂಡಿಸ್, ಫಾ. ಫೆಡ್ರಿಕ್ ಡಿಸೋಜ, ಪಾ. ಸುನೀಲ್, ಫಾ. ಅನಿಲ್ ಸಹಿತ ನೂರಾರು ಧರ್ಮಗುರುಗಳು ಪ್ರಾರ್ಥನಾ ವಿಧಿಗಳಲ್ಲಿ ಭಾಗವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಯುಆರ್ ಸಭಾಪತಿ, ಆಳ್ವಾಸ್ ವಿದ್ಯಾ ಸಮಸ್ಯೆಗಳ ಮುಖ್ಯಸ್ಥರಾದ ಮೋಹನ್ ಆಳ್ವ, ಮಾಜಿ ಶಾಸಕ ಜೆ ಆರ್ ಲೋಬೋ, ಪ್ರಮುಖರಾದ ವಿಲ್ಸನ್ ಡಿಸೋಜಾ, ವಿಲ್ಸನ್ ರೋಡ್ರಿಗಸ್, ಮೈಕಲ್ ಡಿಸೋಜಾ, ಮೆಲ್ವಿನ್ ಡಿಸೋಜಾ, ಸುನೀಲ್ ಕಬ್ರಾಲ್, ಮೆಲ್ವಿನ್ ಆರನ್ನ, ಪ್ರಶಾಂತ್ ಜತ್ತನ್ನ, ಪ್ರಮೀಳಾ ಜತ್ತನ್ನ, ವೆರೋನಿಕಾ ಕರ್ನೇಲಿಯೋ, ಡೆನ್ನಿಸ್ ಡಿಸಿಲ್ವಾ ಸಹಿತ ಪ್ರಮುಖ ನಾಯಕರು ಅಂತಿಮ ನಮನ ಸಲ್ಲಿಸಿದರು.
Rip