ಮದುವೆಯಾಗದಕ್ಕೆ ಮಾಜಿ ಪ್ರೇಯಸಿಯ ಅಶ್ಲೀಲ ಪೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಪ್ರಿಯಕರ

ಭುವನೇಶ್ವರ: ಮಾಜಿ ಪ್ರಿಯಕರನೊಬ್ಬ ತನ್ನ ಪ್ರೇಯಸಿ ಬೇರೊಬ್ಬನ ಜೊತೆ ಮದುವೆಯಾಗಿದ್ದಕ್ಕೆ ಸಿಟ್ಟಿನಿಂದ ಆಕೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ಒಡಿಶಾದ ಪರಲಖೇಮುಂಡಿಯಲ್ಲಿ ನಡೆದಿದೆ.
ಘಟನೆ ಸಂಬಂಧ ಗಜಪತಿ ಪೊಲೀಸರು ಆರೋಪಿ ಪ್ರಿಯಕರನನ್ನು ಬಂಧಿಸಿದ್ದಾರೆ. ಬಂಧಿತನನ್ನು ಗಂಜಾಂ ಜಿಲ್ಲೆಯ ಕೈದಾಡಾ ಗ್ರಾಮದ ನಿವಾಸಿ ಕುಬರ್ ಪಲ್ಲೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕುಬರ್ ಪಲ್ಲೆ ಗಜಪತಿ ಜಿಲ್ಲೆಯ ಪರಲಖೇಮುಂಡಿ ಪ್ರದೇಶದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಯುವತಿ ಇತ್ತೀಚೆಗೆ ಪೋಷಕರು ನೋಡಿದ ಬೇರೆ ಹುಡುಗನನ್ನು ಮದುವೆಯಾಗಿದ್ದಳು. ಇದರಿಂದ ಕೋಪಗೊಂಡ ಆರೋಪಿ ತಾನು ಯುವತಿ ಜೊತೆಯಲ್ಲಿದ್ದಾಗ ಕ್ಲಿಕ್ಕಿಸಿಕೊಂಡಿದ್ದ ಫೋಟೋ ಮತ್ತು ರೆಕಾರ್ಡ್ ಮಾಡಿದ್ದ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. ಇದೀಗ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.

ಇದನ್ನು ನೋಡಿದ ಯುವತಿಯ ಕುಟುಂಬಸ್ಥರು ತಕ್ಷಣ ಯುವತಿಯೊಂದಿಗೆ ಪರಾಲಖೇಮುಂಡಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!