ಫ್ಲೈಯಿಂಗ್ ಕಿಸ್ ಕೊಡ್ತೀರಾ…..ಎಚ್ಚರ – ಸ್ವಲ್ಪ ಯಾಮಾರಿದರೂ ನೀವು ಅಂದರ್

ಚಂಡೀಗಢ್: ವ್ಯಕ್ತಿಯೊಬ್ಬ ಪಕ್ಕದ ಮನೆ ಮಹಿಳೆಗೆ ಫ್ಲೈಯಿಂಗ್ ಕಿಸ್ ನೀಡಿದ್ದಕ್ಕೆ ಮೂರು ವರ್ಷ ಜೈಲು ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ.
ವಿನೋದ್ ಜೈಲು ಸೇರಿದ ವ್ಯಕ್ತಿ. ವಿನೋದ್ ತನ್ನ ಪಕ್ಕದ ಮನೆ ಮಹಿಳೆಯನ್ನು ನೋಡಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದನು. ಅಲ್ಲದೆ ಸನ್ನೆ ಮಾಡುವ ಮೂಲಕ ಅನುಚಿತವಾಗಿ ವರ್ತಿಸುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮಹಿಳೆ ತನ್ನ ಪತಿಯ ಜೊತೆ ವಾಸಿಸುತ್ತಿದ್ದಳು. ಅಲ್ಲದೆ ಈ ವಿಷಯವನ್ನು ಪತಿಗೆ ಹೇಳಿದ್ದಾಳೆ. ಬಳಿಕ ಇಬ್ಬರು ದೂರು ನೀಡಿದ್ದಾರೆ. ಮಹಿಳೆ ತನ್ನ ದೂರಿನಲ್ಲಿ, “ವಿನೋದ್ ಹಲವು ಬಾರಿ ಫ್ಲೈಯಿಂಗ್ ಕಿಸ್ ಮಾಡಿ ಅಶ್ಲೀಲ ಸನ್ನೆ ಮಾಡುವ ಮೂಲಕ ನನಗೆ ಕಿರುಕುಳ ನೀಡುತ್ತಿದ್ದಾನೆ” ಎಂದು ಉಲ್ಲೇಖಿಸಿದ್ದರು.
ಅಲ್ಲದೆ ಆರೋಪಿ ವಿನೋದ್ ಟಾಪ್ ಫ್ಲೋರ್ ಫ್ಲಾಟ್‍ನಲ್ಲಿ ವಾಸಿಸುತ್ತಾನೆ. ಅಲ್ಲದೆ ಆತ ನನ್ನನ್ನು ನೋಡಿ ಅಶ್ಲೀಲವಾಗಿ ಸನ್ನೆ ಮಾಡುತ್ತಾನೆ. ಕೆಲವು ಬಾರಿ ಅಶ್ಲೀಲವಾಗಿ ಕಮೆಂಟ್ ಕೂಡ ಮಾಡುತ್ತಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಮಹಿಳೆ ವಿರುದ್ಧ ದೂರು ದಾಖಲಿಸುತ್ತಿದ್ದಂತೆ, ಆರೋಪಿ ವಿನೋದ್ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪತಿ – ಪತ್ನಿ ಇಬ್ಬರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿನೋದ್ ಆರೋಪಿಸಿದ್ದಾನೆ. ಆದರೆ ಪೊಲೀಸರಿಗೆ ದಂಪತಿ, ವಿನೋದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದ್ದಕ್ಕೆ ಯಾವುದೇ ಸಾಕ್ಷಿ ಸಿಗಲಿಲ್ಲ.
ಸದ್ಯ ಮೋಹಾಲಿ ನ್ಯಾಯಾಲಯ ಆರೋಪಿ ವಿನೋದ್‍ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!