ಪೇಜಾವರ ಮಠದ ನೇತೃತ್ವ : ಉಡುಪಿಯಿಂದ ಮುದ್ದೇಬಿಹಾಳಕ್ಕೆ ನೆರೆ ಪರಿಹಾರ ರವಾನೆ
ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾದವರಿಗಾಗಿ ಸಹಾನುಭೂತಿಯ ನೆಲೆಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ನೆರವು ಕಾರ್ಯಾಚರಣೆಯ ಅಂಗವಾಗಿ ಉಡುಪಿಯ ಭಕ್ತರು ಹಿತೈಷಿಗಳು ಮತ್ತು ನಾಗರಿಕರಿಂದ ಸಂಗ್ರಹಿಸಲಾದ ಸಾಮಗ್ರಿಗಳನ್ನು ಇಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಕೆ ಭಾನುವಾರಕಳುಹಿಸಲಾಯಿತು.
ಸುಮಾರು ರೂ 3000 ಮೌಲ್ಯದ ಬಟ್ಟೆ , ಪಾತ್ರೆಗಳನ್ನೊಳಗೊಂಡ 450 ಕಿಟ್ ಗಳು ಮತ್ತು ಎರಡು ಟನ್ ಗೋವಿನಹಿಂಡಿಯನ್ನು ಮುದ್ದೇಬಿಹಾಳ ಎರಡು ತೀವ್ರ ಸಂತ್ರಸ್ತ ಗ್ರಾಮಗಳಿಗೆ ತೆರಳಿ ವಿತರಿಸಲಾಗುತ್ತದೆ.
ಮಠದ ದಿವಾನರಾದ ಎಂ ರಘುರಾಮಾಚಾರ್ಯ , ಶ್ರೀಗಳ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ ಎಸ್ ವಿ ಭಟ್ , ವಾಸುದೇವ ಭಟ್ ಪೆರಂಪಳ್ಳಿ ಹಾಗೂ ಯಕ್ಷಗಾನ ಕಲಾರಂಗದ ಸಹಯೋಗದಲ್ಲಿ ಈ ಸಾಮಗ್ರಿಗಳು ಸಂಗ್ರಹವಾಗಿವೆ.
ಸಾಮಾಜಿಕ ಕಾರ್ಯಕರ್ತರುಗಳಾದ ಪ್ರಶಾಂತ್ ಶೆಟ್ಟಿ ಅಂಜಾರು , ಸತೀಶ್ ಕುಮಾರ್ , ವಾಸುದೇವ ಅಡಿಗ ಸಂತೋಷ್ ,ಮಹೇಶ ಕುಲಕರ್ಣಿಹಾಗೂ ಕಡಿಯಾಳಿ ಮಾತೃಮಂಡಳಿ ,ಯುವಬ್ರಾಹ್ಮಣ ಪರಿಷತ್ ನ ಮಹಿಳೆಯರು ಹಾಗೂ ಮಠದಲ್ಲಿನ ವಿದ್ಯಾರ್ಥಿಗಳು ಈ ಕಿಟ್ ಗಳನ್ನು ತಯಾರಿಸಲು ವಿಶೇಷ ಸಹಕಾರ ನೀಡಿದ್ದಾರೆ.
ಪರಿಹಾರ ಸಾಮಗ್ರಿಗಳೊಂದಿಗೆ ವಾಸುದೇವ ಭಟ್ ಪ್ರಶಾಂತ್ , ಸತೀಶ್ ತೆರಳಿದ್ದಾರೆ.