ಕಿಸಾಸ್ ಸಮ್ಮಾನ್ ಯೋಜನೆ ಅರ್ಜಿ ನೀಡಲು ಮುಗಿಬಿದ್ದ ರೈತರು
ಕಾರ್ಕಳ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಯಾದ ‘ ಕಿಸಾನ್ ಸಮ್ಮಾನ್’ ಯೋಜನೆಯಡಿ ವಾರ್ಷಿಕ 6 ಸಾವಿರ ಪ್ರೋತ್ಸಾಹಧನ ನೀಡುವ ಕೇಂದ್ರ ಸರಕಾರದ ಯೋಜನೆಗೆ ರೈತರು ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾದ್ದರಿಂದ ಗ್ರಾಮ ಪಂಚಾಯತ್, ಕೃಷಿ ಇಲಾಖೆಗಳ ಕಚೇರಿಗೆ ರೈತರ ದೌಡು.
ಪ್ರಥಮ ಕಂತಿನ ಹಣ ರೈತರ ಖಾತೆಗೆ ಜಮೆಯಾಗಬೇಕಿದ್ದರೆ ಜೂನ್ ೨೬ ಕೊನೆ ದಿನವಾಗಿದ್ದು ಈ ದಿನಾಂಕದೊಳಗೆ ರೈತರ ಅರ್ಜಿಗಳು ಕಂಪ್ಯೂಟರ್‌ನಲ್ಲಿ ಡಾಟಾ ಎಂಟ್ರಿಯಾಗಬೇಕಿದೆ. ಈ ಕುರಿತು ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಕೃಷಿ ಇಲಾಖೆಗಳಲ್ಲಿನ ಬಹುತೇಕ ಎಲ್ಲಾ ಸಿಬ್ಬಂದಿಗಳು ಅರ್ಜಿಗಳ ಡಾಟಾ ಎಂಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ.
ಕಾರ್ಕಳ(ಹೆಬ್ರಿ ತಾಲೂಕು ಸೇರಿ) ತಾಲೂಕಿನಿಂದ ಸುಮಾರು ೧೦ ಸಾವಿರ ಮೇಲ್ಪಟ್ಟು ರೈತರು ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಕೃಷಿ ಇಲಾಖೆಯಿಂದ ಆಯಾ ಗ್ರಾಮ ಪಂಚಾಯತಿಗಳಿಗೆ ರವಾನಿಸಲಾಗಿದೆ.
ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿಗಳು ತಮ್ಮ ದೈನಂದಿನ ಕಚೇರಿ ಕೆಲಸಗಳನ್ನು ಬದಿಗಿರಿಸಿ ಕಿಸಾನ್ ಸಮ್ಮಾನ್ ಅರ್ಜಿಗಳನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ದೇಶದಾದ್ಯಂತ ಎಲ್ಲೆಡೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಇದರಿಂದ ಸರ್ವರ್ ಸಮಸ್ಯೆ ಉಂಟಾಗಿದೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಡಾಟಾ ಎಂಟ್ರಿಗಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸರ್ವರ್ ಡೌನ್ ಸಮಸ್ಯೆಯಿಂದಾಗಿ ನಿತ್ಯ 40 ರಿಂದ 50 ಅರ್ಜಿಗಳನ್ನಷ್ಟೇ ವಿಲೇವಾರಿ ಮಾಡಲು ಸಾಧ್ಯವಾಗುತ್ತಿದೆ.
ಈ ಎಲ್ಲಾ ಸಮ್ಯಸ್ಯೆಗಳ ಹಿನ್ನಲೆಯಲ್ಲಿ ಜೂನ್ 30 ರ ತನಕವೂ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಿಸುವ ಸಾಧ್ಯತೆಗಳಿವೆ