ಹಜ್ ಯಾತ್ರಿಗಳ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ: : ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ ವತಿಯಿಂದ ಮಜ್ಲಿಸುನ್ನೂರ್ ಹಾಗೂ ಹಜ್ ಯಾತ್ರಿಗಳ ಬೀಳ್ಕೊಡುಗೆ ಸಮಾರಂಭ ಆಲಡ್ಕದ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‌ನಲ್ಲಿ ನಡೆಯಿತು. ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಅಬೂಬಕರ್ ಎನ್.ಬಿ. ಅದ್ಯಕ್ಷತೆ ವಹಿಸಿದ್ದರು.

ಖಲೀಲ್ ದಾರಿಮಿ ಅವರು ಹಜ್ ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು. ತನ್ನ ಕುಟುಂಬದವರೊಂದಿಗೆ ಪವಿತ್ರ ಹಜ್ಜ್ ಯಾತ್ರೆ ಕೈಗೊಂಡೊರುವ ಉಸ್ತಾದ್ ಅಬೂಸ್ವಾಲಿಹ್ ಫೈಝಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಆಲಡ್ಕ ಶಾಖಾ ಉಪಾಧ್ಯಕ್ಷ ಮಜೀದ್ ಬೋಗಡಿ, ಕೋಶಾಧಿಕಾರಿ ಪಿ.ಬಿ.ಹಾಮದ್, ಅಬ್ದುಲ್ ಖಾದರ್ ಬೋಗಡಿ, ಹನೀಫ್ ಹಾಸ್ಕೊ, ಬಶೀರ್, ಮುಹಮ್ಮದ್ ಶಫೀಕ್, ಇಸಾಕ್, ಅಬ್ದುಲ್ ಅಝೀಝ್, ರಫೀಕ್, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!