ಫೇಸ್ಪುಕ್, ವಾಟ್ಸಪ್ ನಿಯಂತ್ರಣ ಅಗತ್ಯ: ಸುಪ್ರೀಂ’ಗೆ ಕೇಂದ್ರ

ನವದೆಹಲಿ: ಪ್ರಜಾಪ್ರಭುತ್ವ ರಾಜಕೀಯಕ್ಕೆ ಅಂತರ್ಜಾಲ ಊಹಿಸಲೂ ಆಗದಷ್ಟು ಹಾನಿಯುಂಟು ಮಾಡುತ್ತಿದ್ದು, ಫೇಸ್’ಬುಕ್, ವಾಟ್ಸಪ್, ಟ್ವಿಟರ್ ಅಂತಹ ಮಧ್ಯವರ್ತಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್’ಗೆ ತಿಳಿಸಿದೆ. 

ಸಾಮಾಜಿಕ ಮಾಧ್ಯಮಗಳಾದ ಫೇಸ್’ಬುಕ್, ಟ್ವಿಟರ್, ವಾಟ್ಸಪ್ ಮತ್ತು ಯೂಟ್ಯೂಬ್ ಹಾಗೂ ಅನ್ಯ ಮಧ್ಯವರ್ತಿಗಳ ಹೊಣೆಗಾರಿಕೆ ಮರು ಹಂಚಿಕೆ ಮಾಡಲು ಸರ್ಕಾರ ಒತ್ತು ನೀಡಿದೆ. 

ಈ ಸಂಬಂಧ 2011ರಲ್ಲಿ ರೂಪಿಸಿರುೋವ ನಿಯಮಗಳನ್ನು ಬದಲಾವಣೆ ಮಾಡುವ ಅಗತ್ಯವಿದೆ. ಅಂತರ್ಜಾಲದಲ್ಲಿ ಪ್ರಕಟವಾಗುವ ವಿಷಯಗಳಿಗೆ ವೇದಿಕೆ ಒದಗಿಸಿದ ಮಧ್ಯವರ್ತಿಗಳನ್ನೇ ಹೊಣೆಗಾರರನ್ನಾಗಿ  ಮಾಡಲು ಸರ್ಕಾರ ಬಯಸಿದೆ. 

 ಒಂದೆಡೆ ತಂತ್ರಜ್ಞಾನದ ಬಳಕೆ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗೆ ಕಾರಣವಾದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುವಿಕೆ, ದ್ವೇಷದ ಹೇಳಿಕೆ, ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂಬ ಕಾರಣಕ್ಕೆ ಸರ್ಕಾರ ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾಗಿದೆ

Leave a Reply

Your email address will not be published. Required fields are marked *

error: Content is protected !!