ಉಡುಪಿಯ ‘ಮಾಂಡವಿ ಟೈಮ್ಸ್ ಸ್ಕ್ವೇರ್’ ಗೆ ಶಂಕು ಸ್ಥಾಪನೆ

ಉಡುಪಿ – “ಎಲ್ಲಾ ವೃತ್ತಿಗಳಲ್ಲಿ ಪ್ರಮಾಣಿಕತನ ರೂಡಿಸಿಕೊಂಡರೆ ಅದುವೆ ನಿಜವಾದ ಧರ್ಮ” ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು. ಪ್ರತಿಷ್ಠಿತ ಸಂಸ್ಥೆ ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್‌ ಅವರಿಂದ ಕಲ್ಸಂಕದಲ್ಲಿ ನಿರ್ಮಾಣಗೊಳ್ಳಲಿರುವ ‘ಮಾಂಡವಿ ಟೈಮ್ಸ್ ಸ್ಕ್ವೇರ್’ ಇಂಟಿಗ್ರೇಟೆಡ್ ಬಿಸಿನೆಸ್ ಆ್ಯಂಡ್ ಶಾಪಿಂಗ್ ಸೆಂಟರ್ ನೂತನ ಯೋಜನೆಯನ್ನು ಶನಿವಾರ ಅನಾವರಣಗೊಳಿಸಿ ಅವರು ಮಾತನಾಡಿದರು. ನಮ್ಮ, ವೃತ್ತಿ ವ್ಯಪಾರಗಳಲ್ಲಿ ಸೇವನಿಷ್ಠೆ, ಪ್ರಮಾಣಿಕತನ ಮೈಗೂಡಿಸಿಕೊಂಡಿದ್ದರೆ ಅದು ಭಗವಂತನ ಪೂಜೆಗೆ ಸಮನಾಗಿರುತ್ತದೆ. ವ್ಯಪಾರದಲ್ಲಿ ಧರ್ಮ ಸೇರಬೇಕು, ಧರ್ಮದಲ್ಲಿ ವ್ಯಪಾರ ಮನೋಭಾವ ಇರಬಾರದು, ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಕೂಡದು ಎಂದು ಪೇಜಾವರ ಶ್ರೀಗಳು ಹೇಳಿದರು. 

ಗೃಹ ನಿರ್ಮಾಣ ಕಾರ್ಯದಲ್ಲಿ ಉದ್ಯೋಗ ಸೃಷ್ಟಿಯ ಜತೆಗೆ ಮಾಂಡವಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆ ದೊಡ್ಡಮಟ್ಟದಲ್ಲಿ ಕೊಡುಗೆ ನೀಡುತ್ತಿದೆ. ಇದೀಗ ಮಾದರಿ ಮತ್ತು ಬೃಹತ್ ವಾಣಿಜ್ಯ ಸಂಕೀರ್ಣ ಯೋಜನೆ ಹಮ್ಮಿಕೊಳ್ಳುವ ಮೂಲಕ ಎಲ್ಲಾ ವಸ್ತು, ಸಮಾಗ್ರಿಗಳು ಜನರಿಗೆ ಒಂದೆಡೆ ಸಿಗಬೇಕು ಎಂಬ ಆಶಯ, ದೂರದೃಷ್ಟಿ ಯೋಜನೆ ಶ್ಲಾಘನೀಯ ಎಂದು ಶುಭಹಾರೈಸಿದರು. 

ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಮಂಗಳೂರಿನ ರೆ.ಗಾಡ್ಫ್ರೇ ಸಲ್ದಾನಾ, ಉಡುಪಿ ಶೋಕಾಮಾತಾ ಚರ್ಚ್‌ನ ಧರ್ಮಗುರು ವಲೇರಿಯನ್ ಮೆಂಡೋನ್ಸಾ, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಧರ್ಮಗುರು ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ  ಆಶಿರ್ವಚಿಸಿ, ಶುಭ ಹಾರೈಸಿದರು. 

ಮುಖ್ಯ ಅತಿಥಿಗಳಾಗಿ ಶಾಸಕ ಕೆ. ರಘುಪತಿ ಭಟ್,  ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಸದಸ್ಯೆ ಗೀತಾ ಶೇಟ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ.ನ ಎಂಡಿ ಟಿ. ಸತೀಶ್ ಯು. ಪೈ, ಲೇಖಕಿ ಡಾ.ಸಂಧ್ಯಾ ಎಸ್. ಪೈ, ಉದ್ಯಮಿಗಳಾದ ರತ್ನಾಕರ್ ಶೆಟ್ಟಿ, ಸಾರಿಕಾ ರತ್ನಾಕರ್ ಶೆಟ್ಟಿ,  ಪುರುಷೋತ್ತಮ ಪಿ. ಶೆಟ್ಟಿ, ಭುವನೇಂದ್ರ ಕಿದಿಯೂರು, ಮಾಂಡವಿ ರಿಯಲ್ ಎಸ್ಟೇಟ್ ಆಂಡ್ ಡೆವಲಪರ್ಸ್ ಸಂಸ್ಥೆಯ ಮೆರ್ಸಿ ಮೆರ‌್ಲಿನ್ ಡಯಾಸ್, ಗ್ಲೆನ್ ಡಯಾಸ್, ಜಾಸನ್ ಡಯಾಸ್, ಡಾ.ಲಾರ ಡಯಾಸ್ ಉಪಸ್ಥಿತರಿದ್ದರು, ಸಂಸ್ಥೆಯ ಪ್ರದಾನ ಮುಖ್ಯಸ್ಥ ಜೆರ‌್ ವಿನ್ಸೆಂಟ್ ಡಯಾಸ್ ಸ್ವಾಗತಿಸಿದರು. 

* ಮಾಂಡವಿ ಟೈಮ್ಸ್ ಸ್ಕ್ವೇರ್’ ವೈಶಿಷ್ಟೃತೆ 
ಮಾಂಡವಿ ಟೈಮ್ಸ್ ಸ್ಕ್ವೇರ್’ ಇಂಟಿಗ್ರೇಟೆಡ್ ಬಿಸಿನೆಸ್ ಆ್ಯಂಡ್ ಶಾಪಿಂಗ್ ಸೆಂಟರ್ ರೇರ ಸಂಸ್ಥೆಯಿಂದ ಅಂಗೀಕರಿಸಲ್ಪಟ್ಟಿದ್ದು, 2.5 ಎಕರೆ ಜಾಗದಲ್ಲಿ  ನಿರ್ಮಾಣವಾಗಲಿದೆ. 300ಕ್ಕೂ ಹೆಚ್ಚು ಕಾರುಗಳ ವ್ಯವಸ್ಥಿತ ಪಾರ್ಕಿಂಗ್. ಆತ್ಯಾಧುನಿಕ ಸೌಲಭ್ಯಗಳೊಂದಿಗೆ 600 ಚ.ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣವುಳ್ಳ 203 ಮಳಿಗೆ ಇರಲಿದೆ. ಶಾಪಿಂಗ್ ಮಾಲ್, ಹೊಟೇಲ್, ಬ್ಯಾಂಕ್ವೇಟ್, ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಇನ್ನಿತರ ಎಲ್ಲ ಕ್ಷೇತ್ರಗಳ ಮಳಿಗೆಗಳು ಇಲ್ಲಿ ನಿರ್ಮಾಣಗೊಳ್ಳಲಿವೆ.

Leave a Reply

Your email address will not be published. Required fields are marked *

error: Content is protected !!