ಎಗ್ ಪರೋಟ

ಬೇಕಾಗುವ ಪದಾರ್ಥಗಳು

ಎಣ್ಣೆ- ಅಗತ್ಯಕ್ಕನುಗುಣವಾಗಿ,ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ಮುಕ್ಕಾಲು ಬಟ್ಟಲುಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು 2 ಚಮಚಶುಂಠಿ- ಸಣ್ಣಗೆ ಹೆಚ್ಚಿದ್ದು 2 ಚಮಚಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 2-3ಅಚ್ಚ ಖಾರದ ಪುಡಿ- 1 ಚಮಚಅರಿಶಿನ ಪುಡಿ- ಕಾಲು ಚಮಚಮೊಟ್ಟೆ- 4ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಮುಕ್ಕಾಲು ಬಟ್ಟಲುಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪಗೋದಿ ಹಿಟ್ಟು- 1 ಬಟ್ಟಲುಮೈದಾ ಹಿಟ್ಟು- ಅರ್ಧ ಬಟ್ಟಲುಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ…ಒಲೆಯ ಮೇಲೆ ಬಾಣಲೆ ಇಟ್ಟು 2-3 ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಕಾಯಿ, ಅಚ್ಚ ಖಾರದ ಪುಡಿ, ಅರಿಶಿನ ಪುಡಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಮೊಟ್ಟೆಗಳನ್ನು ಒಡೆದು ಹಾಕಬೇಕು, ಬಳಿಕ ಟೊಮೆಟೋ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ಪಾತ್ರೆಯೊಂದನ್ನು ತೆಗೆದುಕೊಂಡು ಗೋಧಿ, ಮೈದಾ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ನೀರು ಮತ್ತು ಎಣ್ಣೆ ಹಾಕಿ ಚಪಾತಿ ಹಿಟ್ಟನ್ನು ತಯಾರು ಮಾಡಿಕೊಳ್ಳಬೇಕು. ಹಿಟ್ಟನ್ನು ಚಪಾತಿಯಂತೆ ಒತ್ತಿ ಮಧ್ಯೆ ಈಗಾಗಲೇ ಮಾಡಿಕೊಂಡ ಮೊಟ್ಟೆ ಮಸಾಲೆಯನ್ನು ಮಧ್ಯೆ ಇಟ್ಟು, ಹೊರಗೆ ಬಾರದಂತೆ ಮುಚ್ಚಿ ಮತ್ತೆ ಪರೋಟ ರೀತಿಯಲ್ಲಿ ಲಟ್ಟಿಸಿ, ಎರಡೂ ಬದಿಯಲ್ಲೂ ಸುಟ್ಟರೆ, ರುಚಿಕರವಾದ ಎಗ್ ಪರೋಟ ಸವಿಯಲು ಸಿದ್ಧ. 

Leave a Reply

Your email address will not be published. Required fields are marked *

error: Content is protected !!