ಕಾಯಿ ಹೋಳಿಗೆ
ಬೇಕಾಗುವ ಸಾಮಗ್ರಿಗಳು
ಬೆಳೆದ ತೆಂಗಿನ ಕಾಯಿ-1
ಬೆಲ್ಲ
ರವೆ 1 /2 ಕಪ್
ಮೈದಾ -1 ಕಪ್
ಮಾಡುವ ವಿಧಾನ
ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ಹಾಕಿ ಪುಡಿ ಮಾಡಿ
ಒಲೆ ಮೇಲೆ ಸಣ್ಣ ಉರಿಯಲ್ಲಿ ನಿಮ್ಮ ರುಚಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಬೆಲ್ಲ ಇಟ್ಟು ಮಗುಚಿ ನೀರಾದ ಬೆಲ್ಲ ಮತ್ತೆ ಅದು ಗಟ್ಟಿ ಆಗುವ ಹಂತದಲ್ಲಿ ಅರ್ಧ ಕಪ್ ರವೆ ಹಾಕಿ ಮಗುಚಿ ನಂತರ ಮಿಕ್ಸಿ ಮಡಿದ ಕಾಯಿ ಪುಡಿಯನ್ನ ಸೇರಿಸಿ ತಣಿಯಲು ಬಿಡಿ ಇದು ಹೊಲಿಗೆಯೊಳಗೆ ತುಂಬಿಸುವ ಹೂರಣ.. ಕನಿಕವನ್ನ ರೆಡಿ ಮಾಡಲು ನಾವು ಒಂದು ಪಾತ್ರೆಗೆ ಮೈದಾ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಬಿಸಿ ಮಾಡಿ ಹಿಟ್ಟಿಗೆ ಹಾಕಿ ಕಲಸಿ ಚೂರು ಉಪ್ಪು ಹಾಕಿ ಚಪಾತಿಗಿಂತ ಸ್ವಲ್ಪ ಮೆತ್ತಗೆ ಕಲಿಸಬೇಕು ಈ ಹಿಟ್ಟನ್ನು 1 ಗಂಟೆ ನೆನಯಲು ಬಿಡಬೇಕು ಈ ಕನಿಕ ಕ್ಕೆ ಹೂರಣ ತುಂಬಿಸಿ ಕೈ ಯಲ್ಲಿ ಎಣ್ಣೆಯನ್ನ ತಾಗಿಸಿಕೊಳ್ಳುತ್ತ ಕೈಯಿಂದಲೇ ತಟ್ಟಿ ಕಾವಲಿಯಲ್ಲಿ ಕಾಯಿಸುವುದು.ಬಂಗಾರ ಬಣ್ಣ ಬರುವವರೆಗೆ ಕಾಯಿಸಿ ತುಪ್ಪದ ಜೊತೆಗೆ ತಿನ್ನಲು ರುಚಿಯಾಗುತ್ತದ್ದೆ
ಲೀಲಾವತಿ ಐತಾಳ್
ವಕ್ವಾಡಿ