ಹತಾಶರಾಗಬೇಡಿ: ಇಸ್ರೋ ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ: ನರೇಂದ್ರ ಮೋದಿ
ಬೆಂಗಳೂರು: ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ, ಹತಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಭಾರತವಿದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಆತ್ಮಸ್ಥೈರ್ಯ ತುಂಬಿದ್ದಾರೆ.
ನಗರದಲ್ಲಿರುವ ಇಸ್ರೋ ಕಂಟ್ರೋಲ್ ಸೆಂಟರ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಇಸ್ರೋ ವಿಜ್ಞಾನಿಗಳ ಕಾರ್ಯಕ್ಷಮತೆಯನ್ನು ಹಾಗೂ ಪರಿಶ್ರಮವನ್ನು ಕೊಂಡಾದಿದ್ದಾರೆ.
ನಿಮ್ಮ ಪ್ರಯತ್ನವನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ಅಡೆತಡೆಗಳಿಂದ ನಮ್ಮ ಉತ್ಸಾಹವೇನೂ ಕಡಿಮೆಯಾಗಲಿಲ್ಲ. ಬದಲಾಗಿ ಹೆಚ್ಚಾಗಿದೆ. ದೇಶದ ಪ್ರಗತಿಗೆ ಅತ್ಯಂತ ದೊಡ್ಡ ಕೊಡುಗೆಯನ್ನು ನೀಡಿದ್ದೀರ ಎಂದು ಹೇಳಿದ್ದಾರೆ.
ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ ನೀವು ಆಂತಕಗೊಂಡಿದ್ದೀರಿ. ಕಳೆದ ರಾತ್ರಿ ನಿಮ್ಮ ಮನಸ್ಥಿತಿ ನನಗೆ ಅರ್ಥವಾಗಿದೆ. ನಿಮ್ಮ ಕಣ್ಣುಗಳು ಹಾಗೂ ಮುಖದ ಭಾವನೆಗಳೇ ಎಲ್ಲವನ್ನೂ ಹೇಳುತ್ತಿತ್ತು. ಹೀಗಾಗಿಯೇ ಆ ಸಮಯದಲ್ಲಿ ನಿಮ್ಮೊಂದಿಗೆ ಹೆಚ್ಚು ಕಾಲ ಇರಲಿಲ್ಲ. ಭಾರತ ಮಾತೆ ಸದಾ ತಲೆ ಎತ್ತಿ ನಿಲ್ಲುವಂತೆ ಮಾಡುವ ಸಲುವಾಗಿ ನಿಮ್ಮ ಇಡೀ ಜೀವನವನ್ನು ಕಳೆಯುತ್ತೀರಿ. ನೀವು ಹಲವು ರಾತ್ರಿಗಳನ್ನು ನಿದ್ರೆಯಿಲ್ಲದಂತೆ ಕಳೆದಿದ್ದೀರಿ, ಕೆಲವು ಅಡೆತಡೆಗಳು ಎದುರಾಗಿದ್ದರೂ, ಅದು ನಮ್ಮ ಉತ್ಸಾಹವನ್ನು ಕಡಿಮೆ ಮಾಡಿಲ್ಲ. ಬದಲಾಗಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ನಮ್ಮ ವಿಜ್ಞಾನಿಗಳು ಹಾಗೂ ಬಾಹ್ಯಾಕಾಶಯಾನದ ಬಗ್ಗೆ ಬಹಳ ಹೆಮ್ಮೆಯಿದೆ. ನಿಮ್ಮ ಸಮರ್ಪಣೆಯಿಂದಾಗಿ ಅದು ಮುಂದುವರಿಯುತ್ತಿದೆ. ನಮ್ಮ ಸಂಕಲ್ಪವೂ ಬಲಗೊಂಡಿದೆ. ನಿಮ್ಮ ಈ ಕಾರ್ಯಕ್ಷಮತೆ ಚಂದ್ರನನ್ನು ಮುಟ್ಟುವ ಆಸೆ ಮತ್ತಷ್ಟು ಗಟ್ಟಿ ಮಾಡಿದೆ. ನಿಮ್ಮ ಕಠಿಣ ಪರಿಶ್ರಮ ಪ್ರತೀಯೊಬ್ಬ ಭಾರತೀಯನಿಗೂ ತಿಳಿದಿದೆ. ಇಡೀ ಭಾರತವೇ ನಿಮ್ಮೊಂದಿಗೆ. ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ.
ಮುಂಬರುವ ಮಿಷನ್ಗಾಗಿ ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ. ನಿಮ್ಮ ಮೇಲೆ ಹೆಮ್ಮೆಯಿದೆ. ನಿಮ್ಮ ನಿರ್ಣಯಗಳು ನನಗಿಂತ ಹೆಚ್ಚು ಆಳವಾಗಿವೆ. ನಿಮ್ಮಲ್ಲಿ ನೀವು ಸ್ಫೂರ್ತಿಯ ಸಮುದ್ರ. ನಾವು ಅಲ್ಲಿಗೆ ಹೋಗಿ ಹುಡುಕಬೇಕಾದ ಸಾಕಷ್ಟು ಹೊಸ ಸ್ಥಳಗಳಿವೆ. ಭಾರತ ಸದಾಕಾಲ ನಿಮ್ಮೊಂದಿಗೆದೆ. ಜ್ಞಾನ ಶ್ರೇಷ್ಠ ಶಿಕ್ಷಕರು ಇದ್ದರೆ ಅದು ವಿಜ್ಞಾನ. ಇದರಲ್ಲಿ ಯಾವುದೇ ವೈಫಲ್ಯವಿಲ್ಲ. ಇದು ಕೇಲವ ಉಪಯೋಗಗಳನ್ನು ಹೊಂದಿದೆ. ಚಂದ್ರಯಾನ-2 ಕಾರ್ಯಾಚರಣೆ ಕೊನೆಯ ನಿಲುಗಡೆ ಉತ್ತಮವಾಗಿಲ್ಲವಾದರೂ, ಚಂದ್ರಯಾನ-2 ಸಂಪೂರ್ಣ ಪ್ರಯಾಣ ಅದ್ಭುತವಾಗಿತ್ತು. ನಮ್ಮ ಕಕ್ಷಾಗಾರನು ಚಂದ್ರನನ್ನು ಮಚ್ಚೆ ಮಾಡುತ್ತಿದ್ದಾನೆ. ನಾನು ದೇಶದಲ್ಲಿಯೇ ಇರಲಿ ಅಥವಾ ವಿದೇಶದಲ್ಲಿಯೇ ಇರಲಿ, ನಾನು ಪ್ರತೀ ಬಾರೀ ಈ ಕಾರ್ಯಾಚರಣೆಯ ಮಾಹಿತಿಯನ್ನು ಪಡೆಯುತ್ತಿದ್ದೆ. ನೀವು ಈ ವರೆಗೂ ಮಾಡಿದ್ದನ್ನೂ ಇದೂ ವರೆಗೂ ಯಾರೂ ಮಾಡಿಲ್ಲ. ಹತಾಶರಾಗದಿರಿ ಎಂದು ತಿಳಿಸಿದ್ದಾರೆ.