ವಿಚಾರಣೆಯ ಹೆಸರಿನಲ್ಲಿ ಕಿರುಕುಳ- ಇ.ಡಿ ವಿರುದ್ಧ ಡಿ.ಕೆ.ಶಿ ಆರೋಪ
ನವ ದೆಹಲಿ – “ರಕ್ತ ಸುರಿಯುತ್ತಿದ್ದರು ಲೆಕ್ಕಿಸದೆ ನನ್ನ ಆರೋಗ್ಯದಲ್ಲಿ ಏರು ಪೇರಾದರು ನನ್ನ ಆಸ್ಪತ್ರೆಯಲ್ಲಿ ಬಿಡದೆ ಅಧಿಕಾರಿಗಳು ನನ್ನ ವಿಚಾರಣೆಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ” ಎಂಬುದಾಗಿ ಡಿ ಕೆ ಶಿವಕುಮಾರ್ ಇ ಡಿ ಅಧಿಕಾರಿಗಳ ವಿರುದ್ಧ ದೂರಿದ್ದಾರೆ.
ಅಕ್ರಮ ಹಣ ವರ್ಗಾವಣೆಯ ಆರೋಪದಡಿ ಜಾರಿ ನಿರ್ದೇಶನಾಲಯ (ಇ ಡಿ) ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆಯಲ್ಲಿ ಡಿ ಕೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು
“ಆರೋಗ್ಯದಲ್ಲಿ ಸಮಸ್ಯೆ ಇರುವುದರಿಂದ ಆಸ್ಪತ್ರೆಯಲ್ಲಿ ತನ್ನ ಕೈಗೆ ಸೂಜಿ ಚುಚ್ಚಿದ್ದರು ಆಗ ಕೈಯಲ್ಲಿ ರಕ್ತ ಜಿನುಗುತ್ತಿತ್ತು ಆದರೂ ನನ್ನನು ಅಲ್ಲಿ ದಾಖಲಿಸದೆ ಕರೆದೊಯ್ಯಲಾಯಿತು ವಿಚಾರಣೆಯ ಹೆಸರಲ್ಲಿ ಹಿಂಸೆ ನೀಡುತ್ತಿದ್ದಾರೆ ” . ಎಂಬುದಾಗಿ ನ್ಯಾಯಾಲಯಕ್ಕೆ ದೂರಿದರು
“ಚುನಾವಣೆ ವೇಳೆಯಲ್ಲಿ ನನ್ನ ಆಸ್ತಿಯ ಬಗ್ಗೆ ಮಾಹಿತಿ ನೀಡಿದ್ದು ಈಗ ತನ್ನ ಹತ್ತಿರ 317 ಬ್ಯಾಂಕ್ ಖಾತೆಗಳಿವೆ ಎಂಬ ಆರೋಪ ಇದೆ ಅದು ಇರುವುದು ಸತ್ಯವಾದರೆ ಇ ಡಿ ಅಧಿಕಾರಿಗಳ ಹೆಸರಿಗೆ ಬರೆದು ಬಿಡುತ್ತೇನೆ” ಎಂಬುದಾಗಿ ಮಾಧ್ಯಮದವರಿಗೆ ತಿಳಿಸಿದರು