ದಿವ್ ಹಲಸಿನ ದೋಸೆ

ದಿವ್ ಹಲಸು ಒಂದು ಬಗೆಯ ಹಲಸಿನ ಜಾತಿ. ತುಳು ಭಾಷೆಯಲ್ಲಿ ಇದನ್ನ ಜೀಗುಜ್ಜೆ ಎನ್ನುತ್ತಾರೆ . ಇದರಿಂದ ಸಾಂಬಾರ್ ,ಪಲ್ಯ , ದೋಸೆ, ಪೋಡಿ , ರಾವ ಫ್ರೈ ಮುಂತಾದ ತಿನಿಸುಗಳನ್ನು ಮಾಡುತ್ತಾರೆ . ದಿವ್ ಹಲಸಿನ ದೋಸೆ ರುಚಿಕರವಾಗಿದ್ದು ಅದನ್ನು ಮಾಡುವ ವಿಧಾನ ನಿಮಗಾಗಿ
ದಿವ್ ಹಲಸಿನ ದೋಸೆ –
ಬೇಕಾಗಿರುವ ಸಾಮಗ್ರಿಗಳು:
ದಿವ್ ಹಲಸು (ಹಲಸು)- 1
ಅಕ್ಕಿ- 1 ಕಪ್
ಜೀರಿಗೆ- 1 ಚಮಚ
ಹಸಿ ಮೆಣಸು- 4 – 5 , ಖಾರಕ್ಕೆ ತಕ್ಕಂತೆ
ಉಪ್ಪು- ರುಚಿಗೆ ತಕ್ಕಂತೆ

ಮಾಡುವ ವಿಧಾನ– ಮೊದಲು ಅಕ್ಕಿಯನ್ನು 4 ಗಂಟೆ ನೆನೆಹಾಕಿ. ನಂತರ ಅಕ್ಕಿ, ದಿವ್ ಹಲಸು, ಮೆಣಸಿನ ಕಾಯಿ, ಜೀರಿಗೆ, ಶುಂಠಿ ಹಾಕಿ ರುಬ್ಬಿ ಇದಕ್ಕೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಕಾವೇಲಿಯನ್ನು ಬಿಸಿಗೆ ಇಟ್ಟು ಬಿಸಿ ಆದನಂತರ ತೆಳುವಾಗಿ ಹರವಿ ಮೇಲಿಂದ ತುಪ್ಪ ಹಾಕಿ 2 ಕಡೆ ಬೇಯಿಸಿದರೆ ರುಚಿಕರವಾದ ದಿವಿ ಹಲಸಿನ ದೋಸೆ

ಪವಿತ್ರ ರಾವ್
ಬ್ರಹ್ಮಾವರ

Leave a Reply

Your email address will not be published. Required fields are marked *

error: Content is protected !!