ಡಿಕೆಶಿಯನ್ನು ಅಮಿತ್ ಶಾ, ಮೋದಿ ಪಿತೂರಿಯಿಂದ ಬಂಧನ : ಸೊರಕೆ
ಉಡುಪಿ : ಡಿಕೆಶಿಯನ್ನು ಅಮಿತ್ ಶಾ ,ಪ್ರಧಾನಿ ನರೇಂದ್ರ ಮೋದಿಯವರ ಪಿತೂರಿಯಿಂದ ಬಂಧನ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಡಿಕೆಶಿಗೆ ನಿರಂತರ ಕಿರುಕುಳ ನೀಡಿದ್ದಾರೆಂದು ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡ ಡಿಕೆಶಿ ಬಂಧನ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜೋಡುಕಟ್ಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಇವರ ವಿರುದ್ಧ ಇಡಿ ಇಲಾಖೆ ನಡೆದುಕೊಂಡ ರೀತಿ ನೋಡಿದರೆ ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾದಂತಿದೆ, ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಇಡಿ, ಐಟಿ, ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವಕ್ಕೆ ಮಾರಕವಾದ ರೀತಿಯ ಪ್ರಯತ್ನ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದ್ದಾರೆ.ಒಂದು ಸಾವಿರ ಕೋಟಿಕ್ಕಿಂತ ಮಿಕ್ಕಿ ಅನರ್ಹ ಶಾಸಕರ ಖರೀದಿಗೆ ಬಳಕೆ ಆಗಿದೆ. ಈ ಹಣದ ಮೂಲಕ್ಕೆ ಇಡಿ ಐಟಿ ಇಲ್ವಾ ಎಂದು ಪ್ರಶ್ನಿಸಿದರು.
ದೇಶವು ಸದ್ಯ ಆರ್ಥಿಕ ತುರ್ತು ಪರಿಸ್ಥಿತಿ ದೇಶದಲ್ಲಿದೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ವಿನಿಯೋಗಿಸಬೇಕಾದ ಹಣವನ್ನು ಕೇಂದ್ರ ಕಬಳಿಸಿದೆ. ಬ್ಯಾಕಿಂಗ್ ಕ್ಷೇತ್ರವನ್ನು ದುರ್ಬಳ ಗೊಳಿಸುವ ಪ್ರಯತ್ನ ಮಾಡುತ್ತಿದೆ. 50 ಸಾವಿರ ಮಿಕ್ಕಿ ಆರ್ಥಿಕ ಪರಿಸ್ಥಿಯನ್ನು ಸುಸ್ಥಿರಪರಿಸ್ಥಿತಿಗೆ ತರುವ ಭ್ರಮೆಯಲ್ಲಿ ಇದ್ದಾರೆ ಬಿಜೆಪಿ ಮುಖಂಡರು .ಡಿಕೆಶಿಯನ್ನು ಜೈಲುಗೆ ಕಳುಹಿಸಲು ಷಡ್ಯಂತ್ರ. ತಕ್ಷಣ ಡಿಕೆಶಿಯನ್ನು ಬಿಡುಗಡೆ ಮಾಡಬೇಕು . ದ್ವೇಷದ ರಾಜಕಾರಣ ನಿಲ್ಲಿಸಬೇಕು. ಡಿಕೆಶಿ ವಿರುದ್ಧ ಬಲಪ್ರಯೋಗಕ್ಕೆ ಖಂಡನೆ ವ್ಯಕ್ತ ಪಡಿಸಿದರು.
ಮಾಜಿ ಶಾಸಕ ಯು.ಆರ್ ಸಭಾಪತಿ ಮಾತನಾಡಿ ಯಡಿಯೂರಪ್ಪ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದರು. 20 ದಿನ ಜೈಲಿನಲ್ಲಿ ಇದ್ದರು. ಆ ಪ್ರಕರಣ ಏನಾಯಿತು. ಜನವಿರೋಧಿ ಧೋರಣೆ ಮಾಡುತ್ತಿದ್ದಾರೆ. ಸೋನಿಯಾ ರಾಹುಲ್ ಗಾಂಧಿಯನ್ನು ಜೈಲಿಗೆ ಹಾಕುತ್ತೇನೆ ಎಂದವರು ದೇಶದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ತಂದು ಇಟ್ಟಿದ್ದಾರೆಂದು ಜನತೆಗೆ ತಿಳಿದಿದೆ ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಜನ ಉತ್ತರ ಕೊಡುತ್ತಾರೆಂದರು. ಬ್ಯಾಂಕ್ ವಿಲೀನ ಮಾಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದುರ್ಬಲತೆಯನ್ನು ಪ್ರದರ್ಶಿಸುತ್ತಿದೆ. ಆಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬಂತು. ಇದರ ತನಿಖೆ ಸಿಬಿಐನಿಂದಾಗಬೇಕು ಎಂದು ಆಗ್ರಹಿಸಿದರು.
ಜೋಡುಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು 15 ನಿಮಿಷ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯದರ್ಶಿ ಪ್ರಖ್ಯಾತ್ ಶೆಟ್ಟಿ , ನಗರ ಸಭಾ ಸದಸ್ಯ , ಕಿಶನ್ ಹೆಗ್ಡೆ , ವೆರೊನಿಕ ಕರ್ನೇಲಿಯೋ , ಸುನೀತಾ ಶೆಟ್ಟಿ , ರಮೇಶ್ ಕಾಂಚನ್, ಸತೀಶ ಅಮೀನ್, ದಿನೇಶ್ ಪುತ್ರನ್, ಮೀನಾಕ್ಷಿ ಮಾಧವ ಬನ್ನಂಜೆ ,ಯುವರಾಜ್, ಇಸ್ಮಾಯಿಲ್ ಆತ್ರಾಡಿ, ದಿವಾಕರ್ ಕುಂದರ್, ಶಿವಾಜಿ ಸುವರ್ಣ, ಗಣೇಶ್ ನೆರ್ಗಿ, ಯತೀಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು .