ಸಂತೆಕಟ್ಟೆ ಹುಲಿ ವೇಷಧಾರಿಗಳ ವಾಹನ ಪಲ್ಟಿ ಓರ್ವ ವೇಷಧಾರಿ ಸಾವು, 2 ಚಿಂತಾಜನಕ

ಸಂತೆಕಟ್ಟೆ: ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯ ಹುಲಿ ವೇಷ ತಂಡದ ವಾಹನ ಪಲ್ಟಿಯಾಗಿ ಓರ್ವ ಹುಲಿವೇಷಧಾರಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನೇಜಾರಿನಲ್ಲಿ ನಡೆದಿದೆ . ಟೆಂಪೊವೊಂದರಲ್ಲಿ ಹದಿನೈದು ಕ್ಕೂ ಹೆಚ್ಚು ಹುಲಿ ವೇಷಧಾರಿಗಳು ನೇಜಾರಿನಿಂದ ಸಂತೆ ಕಟ್ಟೆಗೆ ಬರುವ ಸಂದರ್ಭ ನೇಜಾರಿನ ಆಟದ ಮೈದಾನದ ಬಳಿ  ಈ ದುರ್ಘಟನೆ ನಡೆದಿದೆ.

ಮ್ರತ ಯುವಕ ಸುಮಂತ್  ಪಡುಬಿದ್ರೆ(21). ಹುಲಿವೇಷದ ತಂಡದಲ್ಲಿ ಹನ್ನೆರಡು ಜನ ವೇಷಧಾರಿಗಳು ಇದ್ದರೆಂದು ತಿಳಿದು ಬಂದಿದೆ . 5 ವೇಷಧಾರಿಗಳಿಗೆ ಸಣ್ಣಪುಟ್ಟ ಗಾಯಗಳಾದರೆ ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಮಣಿಪಾಲ ಕೆಎಮ್ ಸಿ ಆಸ್ಪತ್ರೆಗೆ  ದಾಖಲಿಸಲಾಗಿದೆಂದು ತಿಳಿದು ಬಂದಿದೆ .

1 thought on “ಸಂತೆಕಟ್ಟೆ ಹುಲಿ ವೇಷಧಾರಿಗಳ ವಾಹನ ಪಲ್ಟಿ ಓರ್ವ ವೇಷಧಾರಿ ಸಾವು, 2 ಚಿಂತಾಜನಕ

Leave a Reply

Your email address will not be published. Required fields are marked *

error: Content is protected !!