ಉಡುಪಿ: ಶಿರೂರು ಶ್ರೀಗಳ ಸವಿ ನೆನಪಿಗಾಗಿ ಉಚಿತ ಉಂಡೆ, ಚಕ್ಕುಲಿ ವಿತರಣೆ

ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಲಯನ್ಸ್ ಕ್ಲಬ್ ಬ್ರಹ್ಮಗಿರಿ ಹಾಗೂ ಶಿರೂರು ಶ್ರೀಗಳ ಅಭಿಮಾನಿಗಳ ಸಹಕಾರದೊಂದಿಗೆ ಶಿರೂರು ಮಠದ ಶ್ರೀ ಶ್ರೀ ಲಕ್ಷ್ಮಿ ವರ ತೀರ್ಥ ಶ್ರೀಪಾದರ  ವಿಶಿಷ್ಟ ರೀತಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸವಿ ನೆನಪಿಗಾಗಿ ಎರಡನೇ ವರ್ಷದ ಉಚಿತ ಉಂಡೆ, ಚಕ್ಕುಲಿ ವಿತರಣೆ ನಡೆಯಿತು.

ಉಡುಪಿ ಚಿತ್ತರಂಜನ್ ಸರ್ಕಲ್ ನ ಮಾರುತಿ ವಿಥಿಕಾದ ಬಳಿಯ ಕಾಮತ್  ಆಂಡ್ ಕೋ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಮದರ್ ಆಫ್ ಸಾರೋಸ್ ಚರ್ಚ್ ನ ಧರ್ಮಗುರುಗಳಾದ ವಂ.ವೆಲೇರಿಯನ್ ಮಂಡೋನ್ಸಾ ಉದ್ಘಾಟಿಸಿದರು.

ಈ ಸಂದರ್ಬದಲ್ಲಿ ಮಾತನಾಡಿದ ಅವರು ಅಷ್ಟಮಿಯ ಶುಭ ಸಂದರ್ಬದಲ್ಲಿ ಉಚಿತವಾಗಿ ಉಂಡೆ ಚಕ್ಕುಲಿ ವಿತರಿಸುವ ಮೂಲಕ ನಾಗರೀಕ ಸಮಿತಿ ಹಾಗೂ ನಿತ್ಯಾನಂದ ಒಳಕಾಡು ಅವರು ಸಮಾಜದಲ್ಲಿ ಪ್ರೀತಿ ಹಾಗೂ ಸಹೋದರತೆಯ ಸಂದೇಶವನ್ನು ಪಸರಿಸಿದ್ದಾರೆ.

ಹಬ್ಬದ ಮೂಲಕ ಸಮಾಜದ ಎಲ್ಲಾ ಜನರಿಗೆ ಒಳಿತಾಗಲಿ ಎಂದರು. ಕಲ್ಕೂರ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ನ ಪ್ರವರ್ತಕರಾದ ರಂಜನ್ ಕಲ್ಕೂರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದಲ್ಲಿ ಶಿರೂರು ಶ್ರೀಗಳ ಸಹೋದರ ಲಾತವ್ಯ ಆಚಾರ್ಯ, ಮಹಿಷಮರ್ದಿನಿ ಲ್ಯಾಂಡ್ ಲಿಂಕ್ಸ್ ನ ಭಾಸ್ಕರ್ ಶೇರಿಗಾರ್, ಲಯನ್ಸ್ ಕ್ಲಬ್ ಬ್ರಹ್ಮಗಿರಿ ಇದರ ಕಾರ್ಯದರ್ಶಿ ಉಮೇಶ್ ನಾಯ್ಕ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಮ್ಯಾನೇಜರ್ ಹಫೀಜ್ ರೆಹಮಾನ್, ಮಾರ್ಕೆಟಿಂಗ್ ಮ್ಯಾನೇಜರ್ ರಾಘವೇಂದ್ರ ಅಜೆಕಾರ್, ಜೋಸ್ ಅಲುಕಾಸ್ ನ ಮ್ಯಾನೇಜರ್ ರಾಜೇಶ್ ಎನ್.ಆರ್ , ಸುಧಾಕರ ಪಾಣರ ಮೂಡುಬೆಳ್ಳೆ,ಹಿರಿಯ ನಾಗರೀಕರ ವೇದಿಕೆಯ ಅದ್ಯಕ್ಷ ಸಿ.ಎಸ್ ರಾವ್ , ಚಕ್ಕುಲಿ ಉಂಡೆ ತಯಾರಿಕರಾದ ಶಂಕರ್ ನಾಯ್ಕ್ ಎಲ್.ವಿ.ಟಿ., ಲಯನ್ಸ್ ಕ್ಲಬ್ ನ ವಾಸುದೇವ, ನಾಗರೀಕ ಸಮಿತಿಯ ನಿತ್ಯಾನಂದ ಒಳಕಾಡು ಮುಂತಾದವರು ಉಪಸ್ಥಿತರಿದ್ದರು.

ಬಳಿಕ ಸಾರ್ವಜನಿಕರಿಗೆ ಉಚಿತ ಲಡ್ಡು, ಚಕ್ಕುಲಿ ವಿತರಣೆ ನಡೆಯಿತು. ಒಟ್ಟು 5 ಸಾವಿರ ಉಂಡೆ ಹಾಗೂ 5 ಸಾವಿರ ಚಕ್ಕುಲಿಯನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!