ದಿನೇಶ್ ಅಮೀನ್ ಮಟ್ಟು ಹೇಳಿಕೆ ಅತ್ಯಂತ ನೋವಿನ ಸಂಗತಿ : ಶ್ರೀನಿವಾಸ ಪೂಜಾರಿ
ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರಾಗಿದ್ದ ದಿನೇಶ್ ಅಮೀನ್ ಮಟ್ಟು ವಿರುದ್ಧ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. ಕೃಷ್ಣಮಠ, ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಟೀಕಿಸಿದ್ದಾರೆ.ಮಂಗಳೂರಲ್ಲಿ ಮಾತನಾಡಿದ್ದ ಅಮಿನ್ ಮಟ್ಟು ಅವರು, ಕೃಷ್ಣಮಠ ಕೋಮುವಾದದ ಕೇಂದ್ರ.
ಪೇಜಾವರ ಸ್ವಾಮೀಜಿ ಅದರ ಮುಖಂಡ ಎಂದು ಹೇಳಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ಮಟ್ಟು ಹೇಳಿಕೆ ಅತ್ಯಂತ ನೋವಿನ ಸಂಗತಿ. ಪೇಜಾವರ ಸ್ವಾಮೀಜಿ ವಯೋವೃದ್ಧರು, ಜ್ಞಾನ ವಂತರು. ಪೇಜಾವರ ಶ್ರೀಗಳು ಇಫ್ತಾರ್ ಕೂಟ ಮಾಡಿದ್ದರು. ಆಗ ನಿಮ್ಮಂತೆ ಯೋಚಿಸುವವರು ಸ್ವಾಗತಿಸಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕು ಅಂದರೆ ಪೇಜಾವರ ಶ್ರೀ ಕೋಮುವಾದಿ ಹೇಗಾಗ್ತಾರೆ? ಮಠ ಕೋಮುವಾದಿಗಳ ಕೇಂದ್ರ ಎಂದು ಹೇಗೆ ಹೇಳುತ್ತೀರಿ? ಕೃಷ್ಣಮಠ ಹಿಂದೂ ಧರ್ಮದ ಸರ್ವಶ್ರೇಷ್ಟ ದೇವಾಲಯ. ಪೇಜಾವರ ಶ್ರೀ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಚುನಾವಣೋತ್ತರ ಸಮೀಕ್ಷೆಯಿಂದ ರಾಷ್ಟ್ರಾದ್ಯಂತ ಸಂಚಲನ 350 ಕ್ಕೂ ಅಧಿಕ ಸ್ಥಾನ ಪಡೆಯುವ ನಮ್ಮ ನಿರೀಕ್ಷೆ ನಿಜವಾಗಿದೆದೇಶದಲ್ಲಿ ಘಟಬಂಧನ್ ನುಚ್ಚುನೂರಾಗಲಿದೆ, ಕರ್ನಾಟಕದಲ್ಲಿ 22 ಕ್ಕೂ ಅಧಿಕ ಸ್ಥಾನ ಗೆಲ್ತೇವೆ ಮೈತ್ರಿ ಕೂಟದಲ್ಲಿ ಚುನಾವಣೆ ಸಂದರ್ಭದಲ್ಲೇ ಬಿರುಕಾಗಿದೆಆಂತರಿಕ ಭಿನ್ನಾಭಿಪ್ರಾಯ ಪರಾಕಾಷ್ಟೆಗೆ ಮುಟ್ಟುತ್ತೆ
ರಾಜ್ಯದಲ್ಲಿ ಮೈತ್ರಿಕೂಟ ಛಿದ್ರವಾಗಲಿದೆಂದರು,ಹೊರಟ್ಟಿಯವರು ರಾಜಕೀಯದಲ್ಲಿ ಹಿರಿಯರು ಮೈತ್ರಿ ಕೂಟ ಬದುಕಲ್ಲ ಅನ್ನೋದು ಅವರಿಗೆ ಅರ್ಥ ಆಗಿದೆಜನರ ಅಭಿಪ್ರಾಯ ಹೊರಟ್ಟಿಯವರ ಬಾಯಲ್ಲಿ ಬಂದಿದೆ , ದೇಶದಲ್ಲಿ
ಬಿಜೆಪಿ ಸ್ವಂತಶಕ್ತಿಯ ಮೇಲೆ 300 ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಮಮತಾ ಬ್ಯಾನರ್ಜಿ ಅವರಿಗೆ ಈ ದೇಶದ ಮತದಾರರ ಮೇಲೆಯೇ ನಂಬಿಕೆ ಇಲ್ಲ ಹಾಗಾಗಿ ಮತಯಂತ್ರದ ಮೇಲೂ ನಂಬಿಕೆ ಇಲ್ಲಆದರೆ ಅವರು ಗೆದ್ರೆ ಎಲ್ಲವೂ ಸರಿಯುಂಟು ಅಂತಾರೆ ಸೋಲಿನಭೀತಿಯಿಂದ ಮಮತಾ ಬ್ಯಾನರ್ಜಿಗೆ ಈ ಅಪನಂಬಿಕೆ ಮೂಡಿದೆಇದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದರು.
ಮಾದ್ಯಮಗಳಿಗೆ ಕಡಿವಾಣ ಹಾಕೋದಾಗಿ ಸಿಎಂ ಹೇಳಿಕೆ ತುರ್ತು ಪರಿಸ್ಥಿತಿ ಕಾಲದಲ್ಲೇ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲು ಆಗಿರಲಿಲ್ಲ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹಾ ಚಿಲ್ಲರೆ ಆಟಗಳು ನಡೆಯಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ