ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹ

ಉಡುಪಿ :ಮಣಿಪಾಲ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದು ಇದರ ಗುತ್ತಿಗೆದಾರರು ಮತ್ತು ಇಲಾಖೆಯ ಎಂಜಿನಿಯರ್ಗಳು ಜನರ ಪ್ರಾಣಗಳ ಜೊತೆ ಚೆಲ್ಲಾಟವಾಡಿ  ಅನೇಕರು ಪ್ರಾಣವನ್ನು  ಕಳೆದುಹೋಗುವಂತೆ ಮಾಡಿದ ಗುತ್ತಿಗೆ ದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಎಸ್ಪಿ ಮತ್ತು   ಜಿಲ್ಲಾಧಿಕಾರಿಗೆ  ಭಾರತೀಯ ಸಹಾಯ ಸೇವಾ ಸಂಸ್ಥೆ ವತಿಯಿಂದ ಮನವಿ.

ಈಗಾಗಲೇ ಇವರ ನಿರ್ಲಕ್ಷದ ಕಾಮಗಾರಿಯಿಂದಾಗಿ ವಾಹನ ಅಪಘಾತಕ್ಕೀಡಾಗಿ ಏಳು ಜನ ಮೃತಪಟ್ಟಿದ್ದಾರೆ ಹಾಗೂ ದಿನನಿತ್ಯವೆಂಬಂತೆ ಅಪಘಾತಗಳ ಸರಮಾಲೆ ಮುಂದುವರೆಯುತ್ತಲೇ ಇದೆ ಇದಕ್ಕೆಲ್ಲ ಗುತ್ತಿಗೆದಾರರ ಕಾರಣ ಆಗಿದೆ ಕಾಮಗಾರಿ ನಡೆಸದ ನಿಧಾನವಾಗಿ ಸಂಚರಿಸುವ ನಾಮಫಲಕ ವಾಗಲಿ ಅಥವಾ ಸಂಚಾರವು ಬದಲಿ ಸಾಗಿ ಎನ್ನುವ ಸೂಚನೆಯೂ ನೀಡುವುದಿಲ್ಲ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಕಾರ್ಯ ನಿರ್ವಹಿಸಿರುವ ಕಾರ್ಮಿಕರು ಯಾವುದೇ ವಿಶೇಷ ಜಾಕೆಟ್ ವ್ಯವಸ್ಥೆ ಧರಿಸಿಕೊಂಡು ಕಾರ್ಯ ನಿರ್ವಹಿಸದೆ ಇರುವುದರಿಂದ ವಾಹನ ಸವಾರರಿಗೆ ಕಾರ್ಮಿಕರ ರಸ್ತೆ ಬದಿಯಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಅಪಘಾತಕ್ಕೆ ಕಾರಣವಾಗಿದ್ದಾರೆ.

ಎಂಐಟಿ ಜಂಕ್ಷನ್ ನಲ್ಲಂತೂ ರಾಷ್ಟ್ರೀಯ ಹೆದ್ದಾರಿ ಎಂದು ಹೇಳುವವರು ಬೃಹತ್ ತಿರುವನ್ನು ನಿರ್ಮಿಸಿ ವಾಹನ ಸಂಚಾರ ರಿಗೆ ಗೊಂದಲದ ವಾತಾವರಣ ನಿರ್ಮಾಣ ಮಾಡಿದ್ದಾರೆ ಇನ್ನಾದರೂ ಗುತ್ತಿಗೆದಾರರು ಕಾಮಗಾರಿ ಸಂದರ್ಭ ಹಾಗೂ ಅಪಘಾತ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಂಡು ಹೆದ್ದಾರಿ ಕೆಲಸ‌ನಿರ್ವಹಿಸಯತ್ತರಾ ಅಥವಾ ಇನ್ನಷ್ಟು ಪ್ರಾಣ ಹಾನಿ‌ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಾಬೇಕಾಗಿದೆ.ಈ ಸಂದರ್ಭದಲ್ಲಿ ಭಾರತೀಯ ಸಹಾಯ ಸೇವಾ ಇದರ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಉಪಾಧ್ಯಕ್ಷರಾದ ರಮೇಶ್ ಕಾಂಚನ್ ಕಾರ್ಯದರ್ಶಿಗಳಾದ ಅಸದುಲ್ಲಾ, ಸಂತೋಷ್ ಜಿ, ಸುನೀಲ್ ಡಿ ಬಂಗೇರ , ಪ್ರಮೀಳಾ ಜತ್ತನ್ನ ಮುಂತಾದವರು  ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!