ಖಾಸಗಿ ಸರ್ವೇಯರ್ ಮನೆಯಲ್ಲಿ ಹಾಡುಹಗಲೇ ಕಳವು
ಬಂಟ್ವಾಳ: ಖಾಸಗಿ ಸರ್ವೇಯರ್ ಮನೆಗೆ ಹಾಡುಹಗಲೇ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿ ಪರಾರಿಯಾದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಎಸ್.ವಿ.ಎಸ್.ಕಾಲೇಜ್ ಬಳಿ ಸೋಮವಾರ ನಡೆದಿದೆ.
ಬಂಟ್ವಾಳ ಬಿ.ಕಸ್ಬಾ ಗ್ರಾಮದ ಎಸ್.ವಿ.ಎಸ್.ಕಾಲೇಜ್ ರಸ್ತೆಯಲ್ಲಿರುವ ಭದ್ರಕಾಳಿ ಕಟ್ಟೆಯ ಬಳಿಯಿರುವ ಖಾಸಗಿ ಸರ್ವೇಯರ್ ಲೋಹಿತ್.ಎನ್. ರವರ ಬಚ್ಚಲು ಮನೆಯ ಸಿಮೆಂಟ್ ಸೀಟ್ ತೆಗೆದು ಮನೆಯೊಳಗೆ ಪ್ರವೇಶಿಸಿರುವ ಕಳ್ಳರು ಬೆಡ್ ರೂಂನಲ್ಲಿದ್ದ ಗೊದ್ರೇಜ್ ಕಪಾಟಿನ ಬೀಗ ತೆರವುಗೈದು ನಗ,ನಗದನ್ನು ಕಳವುಗೈದಿದ್ದಾರೆ.
ಲೋಹಿತ್ ಅವರ ಪತ್ನಿ ವೀಣಾರವರು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಮನೆ ಸಾಮಾಗ್ರಿ ಖರೀದಿಸಲೆಂದು ಬಂಟ್ವಾಳ ಪೇಟೆಗೆ ತೆರಳಿದ ಸಂದರ್ಭ ವನ್ನು ಕಳ್ಳರು ಸದುಪಯೋಗಪಡಿಸಿ ಈ ಕಳವು ಕೃತ್ಯ ನಡೆಸಿರಬೇಕೆಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ. ವೀಣಾ ಅವರು ಪೇಟೆಗೆ ಹೋಗುವ ಸಂದರ್ಭ ಕಪಾಟಿಗೆ ಬೀಗ ಹಾಕಿ ಬೀಗದ ಕೀಯನ್ನು ಅಲ್ಲೇ ಇರಿಸಿದ್ದರೆನ್ನಲಾಗಿದೆ. ಸಂಜೆ ಇವರು ಮನೆಗೆ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಕಳ್ಳರು ಕಪಾಟಿನಲ್ಲಿದ್ದ 224 ಗ್ರಾಂ ಚಿನ್ನ, 1150 ಗ್ರಾಂ. ಬೆಳ್ಳಿಯ ಅಭರಣ ಹಾಗೂ 7,500 ರೂ. ನಗದನ್ನು ದೋಚಿ ಬಳಿಕ ಕಪಾಟಿಗೆ ಯಥಾಸ್ಥಿತಿ ಬೀಗ ಹಾಕಿ ಕೀಯನ್ನು ಜೊತೆಗೆ ಒಯ್ದಿದ್ದಾರೆ. ಕಳವಾದ ನಗದು ಸಹಿತ ಚಿನ್ನಾಭರಣದ ಮೌಲ್ಯ ರೂ.7,07,500 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂಟ್ವಾಳ ಉಪವಿಭಾಗದ ಎ.ಎಸ್.ಪಿ.ಸೈದುಲು ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್.ಐ.ಸುಧಾಕರ ತೋನ್ಸೆ, ನಗರ ಠಾಣಾ ಎಸ್. ಐ.ಚಂದ್ರಶೇಖರ್ ಮತ್ತವರ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶ್ವಾನದಳ,ಬೆರಳಚ್ಚು ತಜ್ಙರನ್ನು ಸ್ಥಳಕ್ಕೆ ಕರೆಸಲಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ ಮಧ್ಯರಾತ್ರಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.
ಈ ಕಳವು ಪ್ರಕರಣ ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಎಎಸ್ಪಿ ಸೈದುಲ್ ಅದಾವತ್ ತಿಳಿಸಿದ್ದಾರೆ.ಪರಿಣತ ಕಳ್ಳರೇ ಈ ಕೃತ್ಯ ನಡೆಸಿರುವ ಅನುಮಾನಗಳಿದ್ದು, ಸ್ಥಳೀಯರು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಯು ಇದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ರಚನೆ ಮಾಡಲಾಗಿದೆ ಎಂದು