ಮಂಗಳೂರು : ಅಲಂಕಾರಿಕ ದೀಪಗಳ ನೂತನ ಮಳಿಗೆ “ವಿ ಲೈಟ್ಸ್ ಡೆಕೋರ್” ಲೋಕಾರ್ಪಣೆ

ಮಂಗಳೂರು : ಉಡುಪಿ ಕುಂದಾಪುರದಲ್ಲಿ ಈಗಾಗಲೇ ಅಲಂಕಾರಿಕ ಶೋ ಲೈಟ್ಸ್ ಗಳಲ್ಲಿ ಪ್ರಸಿದ್ಧಿ ಪಡೆದಿರುವ ವಿ ಲೈಟ್ ಸಂಸ್ಥೆಯ ನೂತನ ಶಾಖೆ ವಿ ಲೈಟ್ಸ್ ಡೆಕೋರ್ ಮಂಗಳೂರಿನ ಕುದ್ರೋಳಿ ದೇವಸ್ಥಾನದ ರಸ್ತೆಯ ಮ್ಯಾಟ್ರಿಕ್ಸ್ ಮೆಹುಲ್ ನಲ್ಲಿ ಸೋಮವಾರ ಉದ್ಘಾಟನೆಗೊಂಡಿತು.

ವಿ ಲೈಟ್ಸ್ ಡೆಕೋರ್ ನೂತನ ಮಳಿಗೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ  ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರು ರಾಜ್ಯದಲ್ಲೇ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರುವ ನಗರ. ಜೊತೆಗೆ ಸ್ಮಾರ್ಟ್ ಸಿಟಿಯಾಗುತ್ತಿದೆ. ಹಲವಾರು ಉದ್ಯಮಗಳು ಇಲ್ಲಿ ಬೆಳೆಯುತ್ತಿವೆ. ಮಾತ್ರವಲ್ಲದೆ ಇಲ್ಲಿಯ ಜನರು ಉದ್ಯಮಕ್ಕೆ ಬೆಂಬಲವನ್ನು ನೀಡುತ್ತಿದ್ದಾರೆ.

ಮಾಲ್ ಮತ್ತು ಕಂಪೆನಿಗಳನ್ನು ಬೆಳೆಸಿದ ನಗರದಲ್ಲಿ ವಿ ಲೈಟ್ಸ್  ಡೆಕೋರ್ ನಂತಹ ಮಳಿಗೆಗಳು ನಗರದ ಬೆಳವಣಿಗೆಗೆ ಮತ್ತು  ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವಂತಾಗಲಿ ಎಂದರು.

ವಿ ಲೈಟ್ಸ್ ಡೆಕೋರ್ ನ ಆಡಳಿತ ಮಂಡಳಿಯ ನಿರ್ದೇಶಕ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಉಡುಪಿಯಲ್ಲಿ ಈಗಾಗಲೇ ಎರಡು ಮಳಿಗೆಗಳನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದೇವೆ.

ಗ್ರಾಹಕರಿಗೆ ಸುಲಭವಾಗಿ ತಲುಪಲು ಮಂಗಳೂರಿನಲ್ಲಿ ನೂತನವಾಗಿ ಮಳಿಗೆಯನ್ನು ಆರಂಭಿಸಲಾಗಿದ್ದು, ಆಕರ್ಷಕ ವೈವಿಧ್ಯಮಯ ಲೈಟಿಂಗ್ಸ್ ಹಾಗೂ ಅಲಂಕಾರಿಕ ಉತ್ಪನ್ನಗಳನ್ನು ಇರಿಸಲಾಗಿದೆ. ಮಂಗಳೂರಿನ ಗ್ರಾಹಕರು ವಿ ಲೈಟ್ಸ್ ಡೆಕೋರ್ ಸಂಸ್ಥೆಗೆ ಉತ್ತಮ ಸ್ಪಂದನೆ ನೀಡುವ ಭರವಸೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಕ್ರೆಡೈ ಚೇರ್ಮನ್ ಡಿ.ಬಿ ಮೆಹ್ತಾ, ಆರ್ಕಿಟೆಕ್ ಸುಪ್ರೀತ್ ಆಳ್ವ, ಉದ್ಯಮಿ ಡಿ ರಾಜೇಂದ್ರ ಕುಮಾರ್, ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ರಾಜ್ಯ ಪರವಾನಗಿ ಪಡೆದಿರುವ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶಿವಕುಮಾರ್, ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ಅರುಣ್ ಪ್ರಭಾ, ಕೆ ಕೃಷ್ಣ ಕುಡ್ವ, ಗೀತಾ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು. ಖ್ಯಾತ ರೇಡಿಯೊ ಜಾಕಿ ಆರ್ ಜೆ ಎರೋಲ್ ಕಾರ್ಯಕ್ರಮ ನಿರೂಪಿಸಿದರು.

“ವಿ ಲೈಟ್ಸ್ ಡೆಕೋರ್” ನ ನೂತನ ಮಳಿಗೆಯಲ್ಲಿ ವಿಶಾಲವಾದ ಸ್ಥಳವಿದ್ದು, ವೈವಿಧ್ಯಮಯ ಅಲಂಕಾರಿಕ ವಿದ್ಯುತ್ ದೀಪಗಳು, ವಯರ್ ಗಳು, ಕಮರ್ಷಿಯಲ್ ಲೈಟ್ಸ್ ಫ್ಯಾನ್ಸ್, ಸ್ವಿಚ್ಗಳ ಅಪಾರ ಸಂಗ್ರಹವಿದೆ. ದೇಶ ವಿದೇಶಗಳ ಖ್ಯಾತ ಕಂಪೆನಿಗಳ ಉತ್ಪನ್ನಗಳಲ್ಲದೆ ಟ್ಯೂಬ್ ಫಿಟ್ಟಿಂಗ್, ಫ್ಯಾನ್, ವಾಟರ್ ಹೀಟರ್, ಎಲೆಕ್ಟ್ರಾನಿಕ್ಸ್ ಸಾಧನಗಳ ಮತ್ತು ಎಲ್ಇಡಿಗಳ ಸಂಗ್ರಹ ಗ್ರಾಹಕರಿಗಾಗಿ ಮಾಡಲಾಗಿದೆ. ಎಲ್ಇಡಿ ಬಲ್ಬ್ ಎಲ್ಇಡಿ ಪ್ಯಾನೆಲ್ ಮತ್ತು ಟ್ಯೂಬ್ ಸೆಟ್ಟುಗಳು ಅತಿ ಕಡಿಮೆ ದರದಲ್ಲಿ ವಿ ಲೈಟ್ಸ್ ಡೆಕೋರ್ ನಲ್ಲಿ ಲಭ್ಯವಿದೆ.

ಗ್ಲಾಸ್ ಫೈಬರ್ ಮತ್ತು ಮರದಿಂದ ತಯಾರಿಸಲ್ಪಟ್ಟ ಆಕರ್ಷಕ ಡಿಸೈನ್ ವಸ್ತುಗಳು, ಬ್ಯಾಂಬು ಟ್ರಿ, ಆರ್ಟಿಫಿಷಲ್ ಫ್ಲವರ್ಸ್, ಮಿರರ್ಸ್, ಬುದ್ಧ ಸ್ಟ್ಯಾಚ್ಯೂ, ಗಣೇಶ್ ಸ್ಟ್ಯಾಚ್ಯೂ ಸಹಿತ ವಿವಿಧ ವಸ್ತುಗಳ ಸಂಗ್ರಹವಿದೆ.

Leave a Reply

Your email address will not be published. Required fields are marked *

error: Content is protected !!