ಕೋವಿಡ್ 19: ಮಾಸ್ಕ್ ಕಡ್ಡಾಯ ಯಾಕೆ ಗೊತ್ತಾ?

ಮೂಲ ಲೇಖನ – ಅಮಿತೇಶ್ , – ಸಹ ಪ್ರಾಧ್ಯಾಪಕರು, ಶ್ವಾಸಕೋಶ ವಿಭಾಗ , ಕೆ. ಎಂ. ಸಿ. ಆಸ್ಪತ್ರೆ ಮಣಿಪಾಲ
ಕನ್ನಡಕ್ಕೆ –
ಮನೋಜ್ ಕಡಬ– ನಿರ್ದೇಶಕರು, ಶೆಫಿನ್ಸ್ ಗ್ರೂಪ್, ಮಣಿಪಾಲ

COVID 19 ವೈರಾಣುವಿನ ದಾಳಿಯಿಂದ ಪ್ರಪಂಚವೇ ತತ್ತರಿಸಿದೆ ಈ ವೈರಾಣುವಿನ ದಾಳಿಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ತುಂಬಾ ಉಪಕಾರಿ, ಮಾಸ್ಕ್ ಬಗ್ಗೆ ಅನೇಕ ಜನಕ್ಕೆ ಸಂಶಯಗಳಿವೆ ,ಮಾಸ್ಕ್ ಅಥವಾ ಮುಖಕವಚ ಇಂದಿನ ದಿನಗಳಲ್ಲಿ ಎಲ್ಲರಿಗೂ ಅವಶ್ಯಕ. ಅದರ ಬಳಕೆಯ ಬಗ್ಗೆ   ಕೆಲವೊಂದು ಪ್ರಶ್ನೋತ್ತರಗಳು ಇಲ್ಲಿವೆ.
1. ಮಾಸ್ಕ್ ಯಾಕೆ ಧರಿಸಬೇಕು? ಬಾಯಿ ಮತ್ತು ಮೂಗಿನ ಮೂಲಕ ಖಾಯಿಲೆ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಧರಿಸಬೇಕು.
2. ಯಾರು ಧರಿಸಬೇಕು? ಯಾವುದೇ ವ್ಯಕ್ತಿಯ ಜೊತೆಗೆ ಸಂಪರ್ಕದಲ್ಲಿರುವ ಪ್ರತಿಯೊಬ್ಭರೂ ಈ ದಿನಗಳಲ್ಲಿ ಮಾಸ್ಕ್ ಧರಿಸಬೇಕು.
3. ಮನೆಯವರೆಲ್ಲರಿಗಾಗಿಯೂ  ಒಂದೇ ಮಾಸ್ಕ್ ಸಾಕಲ್ಲವೇ? ಇಲ್ಲ. ಓರ್ವ ವ್ಯಕ್ತಿ ಬಳಸಿದ ಮಾಸ್ಕನ್ನು ಅವನ ರಕ್ತ ಸಂಬಂಧಿಗಳೂ ಸೇರಿದಂತೆ ಇತರರು ಬಳಸುವಂತಿಲ್ಲ.
4. ಜನಸಾಮಾನ್ಯರು ಯಾವ ರೀತಿಯ ಮಾಸ್ಕ್ ಧರಿಸಬೇಕು? ಹತ್ತಿ ಬಟ್ಟೆಯಿಂದ ತಯಾರಿಸಿದ ತೊಳೆಯ ಬಹುದಾದ ಮಾಸ್ಕ್ ಗಳನ್ನು ಬಳಸಬಹುದು. 
5. ಹಾಗಾದರೆ ಮೆಡಿಕಲ್ ಗಳಲ್ಲಿ ಸಾಧಾರಣವಾಗಿ ಸಿಗುವ ಮಾಸ್ಕ್? ಇದು ಮೂರು ಲೇಯರ್ ಗಳ ವಿಶೇಷ ಮಾಸ್ಕ್ ಆಗಿದ್ದು, ವೈದ್ಯಕೀಯ ಸಿಬ್ಬಂದಿಯ ಉಪಯೋಗಕ್ಕೆ ಮಾತ್ರ.
6. ನಾವು ಇದನ್ನು ಬಳಸಿದರೆ ಏನಾಗುತ್ತದೆ? ಈ ಮಾಸ್ಕ್ ಕೇವಲ ಕೇವಲ 6 ಗಂಟೆಗಳ ಉಪಯೋಗಕ್ಕೆ ಮಾತ್ರ. ಆ ಬಳಿಕ ಎಸೆಯಬೇಕಾಗುತ್ತದೆ. ಹೀಗೆ ಎಸೆದಾಗ ಅದರಲ್ಲಿರ ಬಹುದಾದ ರೋಗಾಣುಗಳು ಇತರರ ನೇರ ಸಂಪರ್ಕಕ್ಕೆ ಬರಬಹುದಾದ್ದರಿಂದ ಕೋವಿಡ್ ಮಾತ್ರವಲ್ಲದೆ ಇತರ ಖಾಯಿಲೆಗಳೂ ಹರಡುವ ಸಾಧ್ಯತೆಯಿರುತ್ತದೆ. ಆದರೆ ವೈದ್ಯಕೀಯ ಸಿಬ್ಬಂದಿ ಇದನ್ನು ಬಳಸಿ ಎಸೆಯಲು ಸೂಕ್ತ ರಕ್ಷಣಾ ವಿಧಾನವನ್ನು ಬಳಸುತ್ತಾರೆ.
ಅಷ್ಟೇ ಅಲ್ಲ, ಇಂತಹ ಮಾಸ್ಕ್ ಗಳನ್ನು ಜನಸಾಮಾನ್ಯರು ಖರೀದಿಸುವುದರಿಂದಾಗಿ ವೈದ್ಯಕೀಯ ಸಿಬ್ಬಂದಿಗೆ ಇದರ ಕೊರತೆಯುಂಟಾಗಿ ಅವರ ಆರೋಗ್ಯಕ್ಕೆ ಹಾಗೂ ಅವರು ನೇರವಾಗಿ ಚಿಕಿತ್ಸೆ ಕೊಡುವ ರೋಗಿಗಳ ಆರೋಗ್ಯಕ್ಕೆ ಹಾನಿಯುಂಟಾಗುವ ಸಾಧ್ಯತೆಯಿದೆ.
7. ನಾವು ಮನೆಯಲ್ಲಿಯೇ ಮಾಸ್ಕ್ ತಯಾರಿಸಬಹುದೇ? ಖಂಡಿತವಾಗಿ. ಶುಭ್ರವಾದ ಹತ್ತಿ ಬಟ್ಟೆಯಿಂದ ಮಾಸ್ಕನ್ನು  ತಯಾರಿಸಿ ಬಳಸ ಬಹುದು. ಇದಕ್ಕೆ ದುಬಾರಿ ಹಣ ತೆರಬೇಕಾಗಿಲ್ಲ. ಬಳಸಿದ ಬಳಿಕ ಸೋಪ್ ಅಥವಾ ಡಿಟರ್ಜೆಂಟ್ ನಿಂದ ಚೆನ್ನಾಗಿ ತೊಳೆದು, ಇಸ್ತ್ರಿ ಹಾಕಿ ಬಳಸಬಹುದು.

8. ಕೇವಲ ಮಾಸ್ಕ್ ಧರಿಸಿದರೆ ಕೋವಿಡ್ 19 ರಿಂದ ರಕ್ಷಣೆ ಸಾಧ್ಯವೇ? ಮಾಸ್ಕ್ ನ ಜೊತೆಗೆ ಸಾಮಾಜಿಕ ಅಂತರವನ್ನೂ ಕಾಯ್ದು ಕೊಳ್ಳಬೇಕು. ಅಂದರೆ ಪ್ರತೀ ವ್ಯಕ್ತಿಗಳ ನಡುವೆ ಪ್ರತೀ ಸಂದರ್ಭದಲ್ಲೂ ಕನಿಷ್ಠ 1  ಮೀ. ದೂರವಿರಬೇಕು.
ಪ್ರತೀ ಬಾರಿ ಇತರರೊಡನೆ ವ್ಯವಹರಿಸಿದಾಗ ಅಥವಾ ಇತರರಿಂದ ಯಾವುದೇ ವಸ್ತುವನ್ನು ಸ್ವೀಕರಿಸಿದಾದ ಸಾಬೂನು ಬಳಸಿ ಚೆನ್ನಾಗಿ ಕೈ ತೊಳೆಯಬೇಕು.ಮನೆಯಿಂದ ಹೊರಗೆ ಹೋಗಿ ಬಂದಾಗ ನಮ್ಮ ಜೊತೆ ತಂದ ಎಲ್ಲಾ ವಸ್ತುಗಳನ್ನು ಸಹ ಸ್ಯಾನಿಟೈಸರ್ ಬಳಸಿ ಶುದ್ಧಮಾಡಬೇಕು. ತರಕಾರಿ ಇತ್ಯಾದಿಗಳನ್ನು ಉಪ್ಪು ನೀರಿನಲ್ಲಿ ತೊಳೆಯಬೇಕು.ಹೊರಗೆ ಹೋಗಿ ಬಂದಾಗ ಖಡ್ಡಾಯವಾಗಿ ಸ್ನಾನ ಮಾಡಬೇಕು

ಡಾ. ಅಮಿತೇಶ್ ———– — ಮನೋಜ್ ಕಡಬ

Leave a Reply

Your email address will not be published. Required fields are marked *

error: Content is protected !!