ಭಾರತದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 3,390 ಮಂದಿಯಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 56342ಕ್ಕೆ ಏರಿಕೆ, 1886 ಜನರು ಬಲಿ

ನವದೆಹಲಿ: ಮೇ.1 ಬಳಿಕ ನಿತ್ಯ 2000ಕ್ಕಿಂತ ಹೆಚ್ಚಿನ ಹೊಸ ಪ್ರಕರಣ ದಾಖಲಾಗುವ ಸಂಪ್ರದಾಯ ಮುಂದುವರೆದಿದ್ದು, ನಿನ್ನೆ ಒಂದೇ ದಿನ ದೇಶದಾದ್ಯಂತ 3,390 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 56342ಕ್ಕೆ ತಲುಪಿದೆ. 

ಜೊತೆಗೆ ಮತ್ತೆ 83 ಮಂದಿ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ ಕೂಡ 1886ಕ್ಕೆ ಏರಿಕೆಯಾಗಿದೆ. ಈ ನಡುವೆ 56342 ಮಂದಿ ಸೋಂಕಿತರ ಪೈಕಿ 16,539 ಮಂದಿ ವೈರಸ್’ನಿಂದ ಗುಣಮುಖರಾಗಿದ್ದು, ಇದರೊಂದಿಗೆ ಗುಣಮುಖರಾಗುತ್ತಿರುವ ಶೇಕಡವಾರು 28.83ರಷ್ಟಿದೆ. 

ದೇಶಗಲ್ಲಿಯೇ ಅತೀ ಹೆಚ್ಚು ಸೋಂಕಿತರು ಇರುವ ಮಹಾರಾಷ್ಟ್ರ ರಾಜ್ಯದಲ್ಲಿ ಗುರುವಾರ 1216 ಹೊಸ ಕೊರೋನಾ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 17,974ಕ್ಕೆ ತಲುಪಿದೆ. ಅಲ್ಲದೆ. ಧಾರಾವಿ, ಕೊಳಗೇರಿ ಪ್ರದೇಶಗಳಲ್ಲಿ ಗುರುವಾರ ಮತ್ತೆ 50 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 783ಕ್ಕೆ ತಲುಪಿದೆ. 

ಇನ್ನು ತಮಿಳುನಾಡಿನಲ್ಲಿ 580, ದೆಹಲಿ 448, ಗುಜರಾತ್ ನಲ್ಲಿ 388, ಮಧ್ಯಪ್ರದೇಶದಲ್ಲಿ 114 ಹೊಸ ಪ್ರಕರಣಗಳು ದೃಢಪಟ್ಟಿವೆ. 

ಮಹಾರಾಷ್ಚ್ರದ ಅತೀದೊಡ್ಡ ಜೈಲು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 72 ಕೈದಿಗಳು ಮತ್ತು 7 ಜೈಲಾಧಿಕಾರಿಗಳಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಜೈಲಿನ ಬಾಣಸಿಗರೊಬ್ಬರಿಂದ ಇವರೆಲ್ಲರಿಗೂ ಸೋಂಕು ತಗುಲಿದ್ದು ಖಚಿತಪಟ್ಟಿದೆ. 

2 thoughts on “ಭಾರತದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 3,390 ಮಂದಿಯಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 56342ಕ್ಕೆ ಏರಿಕೆ, 1886 ಜನರು ಬಲಿ

  1. I feel this is certainly one of the most vital information for me personally. And i am glad reading your article. But wanna remark on some general things, The site style is perfect, the articles is actually nice : D. Good job, cheers

Leave a Reply

Your email address will not be published. Required fields are marked *

error: Content is protected !!