ಕೊರೊನಾ: ಕಿಟ್ ಪರ್ಚೇಸ್ ನಲ್ಲಿ ಸಿಕ್ಕಿಬಿದ್ದವರು ಯಾರು ಗೊತ್ತೆ?

(ಎಕ್ಸ್‌ಕ್ಲೂಸಿವ್ ರಿಪೋರ್ಟ್ – ಕುಂಜಾಲ್)

ಯಸ್. ನಾವೆಲ್ರೂ ಒಂದು ಸಂಗತಿಯನ್ನು ಒಪ್ಕೊಳ್ಳಬೇಕು. ಇಟ್ಸ್ ರಿಗಾರ್ಡಿಂಗ್ ನೇಚರ್. ಪ್ರಕೃತಿ ಅದಾಗಿಯೇ ಕೋಪಗೊಂಡಿದೆ. ನಮ್ಮ ನಿಸರ್ಗವೇ ಮುನಿದಿದೆ. ಹಾಗಿದ್ದಾಗ ಈ ಬಡಪಾಯಿ ಮಾನವ ಶರೀರ ಏನ್ಮಾಡಲು ಸಾಧ್ಯ? ನೀವೇ ಹೇಳಿ. ಹಾಗಂತ ಮುನಿದ ‘ನಿಸರ್ಗ’ದಲ್ಲಿ ‘ಸ್ವರ್ಗ’ ಕಾಣಲು ಹೊರಟಿದ್ದಾನಲ್ಲಾ.. ಅವನನ್ನ ಯಾವ ಶಿಕ್ಷೆಗೆ ಒಳಪಡಿಸಬೇಕು? ಅದ್ಯಾವ ಜೈಲಲ್ಲಿರಿಸಬೇಕು? ಅದೆಲ್ಲಿ ಗಲ್ಲಿಗೇರಿಸಬೇಕು? ಎಂಬುದೇ ಬಹುಪಾಲು ಜನರ ಮನದಾಳದಲ್ಲಿ ಮೂಡುತ್ತಿರುವ ಪ್ರಶ್ನೆ. ಇಷ್ಟಕ್ಕೂ ಈ ಮನುಷ್ಯ ಮಾಡಿದ್ದಾದರೂ ಏನು? ಎಂಬುದನ್ನು ನಿಮ್ಮ ಮುಂದಿಡುತ್ತಿದ್ದೇನೆ; ಇವತ್ತಿನ ಅಂಕಣದಲ್ಲಿ.

ನೀವ್ ನಂಬ್ತೀರಾ? ಬಿಡ್ತೀರಾ? ಗೊತ್ತಿಲ್ಲ. ಆದರೆ ರೂಲಿಂಗ್ ಗವರ್ನ್‌ಮೆಂಟ್‌ಗೆ ನೆರೆ-ಬರ-ಕ್ಷಾಮ-ಬರಗಾಲ ಅಂದರೆ ಹಬ್ಬ-ಸಂಭ್ರಮ-ಸಡಗರ. ಇದಕ್ಕೆ ಯಾವನೇ ಒಬ್ಬ ಎಮ್ಮೆಲ್ಲೆ, ಎಂಪಿ ಹೊರತಲ್ಲ. ದೇಶವನ್ನು ಸುದೀರ್ಘವಾಳಿದ ಕಾಂಗ್ರೆಸ್ಸಿರಲಿ, ಇದೀಗ ನಮ್ಮನ್ನಾಳುತ್ತಿರುವ ಬಿಜೆಪಿ, ಮೊನ್ನೆ ಮೊನ್ನೆ ಗಾದಿಯಿಂದ ಇಳಿದ ಜನತಾದಳ, ಅತ್ಲಾಗಿನ ಶಿವಸೇನೆ, ಇತ್ಲಾಗಿನ ಕಮ್ಯುನಿಸ್ಟು, ದೂರದ ಮಾಯವತಿಯ ಬಹುಜನ, ಮಮತಾಳ ತೃಣಮೂಲ, ಕೇಜ್ರಿವಾಲನ ಆಪ್, ಜಯಲಲಿತಾಳ ಎಐಡಿಎಂಕೆ, ಜಗನ್‌ನ ವೈಎಸ್‌ಆರ್ ಇವರಲ್ಲಿ ಒಬ್ಬನೇ ಒಬ್ಬ ಸಮಾಜೋದ್ಧಾರಕ ಇದ್ದಾನೆ ಅಂದ್ಕೊಂಡಿದ್ದೀರಾ? ಯು ಆರ್ ರಾಂಗ್!

ಎಲ್ಲರಿಗೂ ಆತಂಕ ಸ್ಥಿತಿ: ಸಚಿವರಿಗೆ ಮಾತ್ರ ಸಂಕ್ರಾಂತಿ!

ಮೊನ್ನೆಯಷ್ಟೇ ಇದೇ ಅಂಕಣದಲ್ಲಿ ‘ಕೊರೋನಾದಿಂದ ಶ್ರೀಮಂತರಾದವರು ಯಾರು ಗೊತ್ತೇ..’ ಅಂತ ಬರೆದದ್ದನ್ನು ನೀವೆಲ್ಲಾ ಓದಿರುತ್ತೀರಾ. ಅದರಲ್ಲಿ ಬಹಳಷ್ಟೇನನ್ನು ಹೇಳಿರಲಿಲ್ಲ. ಸಿಂಪಲ್ಲಾಗಿ ರೆಡ್ ಶರ್ಟ್‌ಧಾರಿ ಒಬ್ಬನ ಫೋಟೋ ಹಾಕಿದ್ದು ನೀವು ಗಮನಿಸಿರಬಹುದು. ವರದಿಯಲ್ಲಿ ಒಂದಂಶವನ್ನು ಸ್ಟಷ್ಟವಾಗಿ ಬರೆದಿದ್ದನ್ನ ನಿಮಗೆಲ್ಲಾ ಗೊತ್ತಿಲ್ಲದ್ದೇನಲ್ಲ. ಅದುವೇ ಶ್ರೀರಾಮುಲು ಸಂಬಂಧಿ ತಿಮ್ಮಪ್ಪನ ಓನ್ಲಿ ಒನ್ ಸೆಂಟೆನ್ಸ್! ಇಟ್ಸ್ ಇನಫ್.ಅದುವೇ ಸಾಕಾಗಿತ್ತು. ನೀವೆಲ್ಲಾ ಅನುಭವಿಸಿರುವಂಥದ್ದೇ. ಮನೇಲಿ, ಆಫೀಸಲ್ಲಿ, ಫ್ಯಾಕ್ಟರಿಯಲ್ಲಿ, ಶೋರೂಮಲ್ಲಿ ಕರೆಂಟು ಸಣ್ಣಗೆ ಶಾಕ್ ಕೊಟ್ಟರೆ ನೀವೆನ್ ಮಾಡ್ತೀರಾ? ಅಲ್ಲಲ್ಲಿನ ಸ್ವಿಚ್ಚಾಫ್ ಮಾಡುವಂಥ ದಡ್ಡತನಕ್ಕೆ ನೀವ್ಯಾರು ಕೈಹಾಕಲಾರಿರಿ. ಇಮ್ಮೀಡಿಯೇಟ್ ಆಗಿ ಮೈನ್ ಫ್ಯೂಸ್ ಆಫ್ ಮಾಡ್ತೀರಾ. ಕೊರೋನಾದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲೂ ಇದಕ್ಕಿಂತ ವಿಭಿನ್ನವಾದ ರೀತಿಯಲ್ಲಿ ಬೇರೇನನ್ನೂ ಮಾಡುವ ಅವಶ್ಯಕತೆ ಇರಲೇ ಇಲ್ಲ.

ರೋಗ ಯಾರಿಗ್ರೀ… ಕಾಂಗ್ರೆಸ್‌ಗಾ.., ಬಿಜೆಪಿಗಾ.., ಜೆಡಿಎಸ್‌ಗಾ..

ಮುಂದೇನಾಯ್ತು ನೋಡಿ; ರೀಡರ್‍ಸ್ ಸಖತ್ತಾಗಿ ಕಮೆಂಟ್ ಮಾಡಿದ್ದಾರೆ. ‘ಥಮ್ಸ್ ಅಪ್’ ಸಿಂಬಲ್ ಸೆಂಡ್ ಮಾಡಿದ ಬಹುತೇಕ ರೀಡರ್‍ಸುಗಳು ‘ಸ್ಟಿಲ್ ಮೋರ್’ ಅಂದದ್ದಂತೂ ಸುಳ್ಳೇನಲ್ಲ. ಕೆಲವರಂತೂ ಚೆನ್ನಾಗಿ ಬುರುಡೆ ಬಿಡ್ತೀರಾ’ ‘ಲೇಖನಿಯ ದಿಕ್ಕು ಬದಲಿಸಿ’ ಅಂತ ಸಜೆಸ್ಟ್ ಮಾಡಿದ್ದರು. ಅಲ್ಲಲ್ಲಿ ಕೆಲವರು ‘ವಾರೆವ್ಹಾ.. ಇಟ್ಸ್ ಸೂಪರ್’ ಅಂತ ಪ್ರತಿಕ್ರಿಯಿಸಿದ್ದಾರೆ, ಒಂದಷ್ಟೂ ವ್ಯೂವರ್‍ಸ್ ಅಂತೂ ‘ನೀವು ಬಿಜೆಪಿ ಅಗೈಂಸ್ಟಾ…? ನೀವು ಕಾಂಗ್ರೆಸ್ ಏಜೆಂಟಾ? ಜೆಡಿಎಸ್ಸಿನ ಫೇವರಾ? ಅಂತ ಪ್ರಶ್ನೆಗಳ ಸುರಿಮಳೆಗೈದೇ ಬಿಟ್ಟಿದ್ದರು. ಹೀಗೆ ಕಾಮೆಂಟ್ ಮಾಡಿದವರಿಗೆಲ್ಲಾ ಒಂದು ಮಾತನ್ನು ಹೇಳಲೇಬೇಕಾಗಿದೆ. ಅದುವೇ ನಾವು ಯಾವ ಕಾಂಗ್ರೆಸ್ ವಕ್ತಾರರು ಅಲ್ಲ. ಬಿಜೆಪಿ ವಕ್ತಾರರೂ ಅಲ್ಲ. ಇದ್ದದ್ದನ್ನು ಇದ್ದಂಗೆ ಹೇಳುವ, ಮುಲಾಜಿಲ್ಲದೇ ಖಡಕ್ಕಾಗಿ ವಿಷ್ಯವನ್ನು ನಿಮ್ಮ ಮುಂದೆ ಹೇಳುವ ಜನಪರ ವಕ್ತಾರ.

ಸೆಂಟ್ರಲ್ ಹೆಲ್ತ್ ಮಿನಿಸ್ಟರ್ ಹರ್ಷ್‌ವರ್ಧನ್ ಮೇಲ್…

ಹೀಗಂತ ಹೇಳುವುದಷ್ಟೇ ಅಲ್ಲ; ಸಾಕ್ಷ್ಯವನ್ನು ಇಲ್ಲಿ ಕೊಡುತ್ತಿದ್ದೇನೆ. ‘ಕೊರೊನಾದಿಂದ ಶ್ರೀಮಂತರಾದವರು ಯಾರ್‍ಯಾರು?’ ಎಂಬ ವರದಿ ಪ್ರಕಟಗೊಂಡದ್ದು ಇಪ್ಪತ್ತನೇ ತಾರೀಕಿನಂದು. ಇದನ್ನು ಅದ್ಯಾವನೋ ಪುಣ್ಯಾತ್ಮ ಯಡಿಯೂರಪ್ಪಾಜಿಯವರ ಈ-ಮೇಲ್‌ಗೆ ಫಾರ್ವರ್ಡ್ ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆ ಮನಸ್ಸು, ಕಂಪ್ಯೂಟರ್ ಸ್ಕ್ರೀನಿನ ಮುಂದೆ ಕೀಬೋರ್ಡನ್ನು ಅದುಮುತ್ತಾ, ಮೌಸನ್ನು ಓಡಾಡಿಸುತ್ತಾ ನಮ್ಮ ಮೋದಿಜಿಗೂ, ಸೆಂಟ್ರಲ್ ಹೆಲ್ತ್ ಮಿನಿಸ್ಟರ್ ಹರ್ಷ್‌ವರ್ಧನ್ ಮೇಲ್‌ಗೂ ಸೆಂಡ್ ಮಾಡಿಬಿಟ್ಟಿದೆ. ಮುಂದಾದ್ದೆಲ್ಲಾ ರಣರೋಚಕ. ನಮ್ಮ ಮುಗ್ಧ ಕೊರೊನಾ ವಾರಿಯರ್‍ಸ್, ವರ್ಕರ್‍ಸ್‌ಗಳು ಕೊಂಚ ಮಟ್ಟಿನ ನಿಟ್ಟುಸಿರು ಬಿಡುವಂತೆಯೂ ಆದದ್ದಂತೂ ರಹಸ್ಯವೇನಲ್ಲ.

ಗರ್‍ಮಾ ಗರಂ ಆದ್ರೆ ಏನೇನಾಗ್ಬಿಡುತ್ತೋ…

ಮರುದಿನವೇ ವಿಧಾನಸೌಧದಲ್ಲಿ ಹೆಲ್ತ್ ಮಿನಿಸ್ಟರ್ ಶ್ರೀರಾಮುಲು ಸೇರಿದಂತೆ ಇತರೇ ಅಧಿಕಾರಸ್ಥರ ಮೀಟಿಂಗೂ ಕರೆದ ಯಡಿಯೂರಪ್ಪಾಜಿ ‘ಅವನ್ಯಾರೀ ರೆಡ್‌ಶರ್ಟ್ ತಿಮ್ಮಪ್ಪಾ…. ಕರೀರೀ ಅವನ್ನಾ… ಅವ್ನ್ ಮೇಲೆ ಕೇಸ್ ಫಿಕ್ಸ್ ಮಾಡಿ’ ಅನ್‌ಬೇಕಾ? ಈ ಮೀಟಿಂಗು ನಡೆದದ್ದು ಬೆಳಿಗ್ಗೆ ಹನ್ನೊಂದು ಗಂಟೆಗೆ. ಈ ಹೊತ್ತಲ್ಲಿ ‘ಕೊರೊನಾದಲ್ಲಿ ಶ್ರೀಮಂತರಾದವರು ಯಾರು?’ ಎಂಬ ವರದಿ ಅವರ ಟೇಬಲ್ ಮೇಲಿತ್ತು. ನಮ್ಮ ಸಿಎಂರ ಕೋಪ ತಣಿಯಲೇ ಇಲ್ಲ. ಪರ್ಚೆಸ್ ಕಮಿಟಿ ಚೆಯರ್‌ಮ್ಯಾನ್ ಆದ ಸೀನಿಯರ್ ಐಎಎಸ್ ಅಧಿಕಾರಿ ಗೌರವ ಗುಪ್ತಾ, ಹೆಲ್ತ್ ಪ್ರಿನ್ಸಿಪಲ್ ಸೆಕ್ರೆಟರಿ ಜಾವೇದ್ ಅಖ್ತರ್, ಕಮಿಷನರ್ ಪಂಕಜ್ ಕುಮಾರ್ ಪಾಂಡೆ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡೇ ಬಿಟ್ಟರು.


ಬೊಂಬೆಯಾಟವಯ್ಯಾ… ನೀ ಸೂತ್ರಧಾರೀ… ನಾ ಪಾತ್ರಧಾರೀ…

ಅಯ್ಯೋ ಪಾಪ ಅವರೇನೂ ಮಾಡಲು ಸಾಧ್ಯ? ನೀವೇ ಹೇಳಿ; ಅವರೆಲ್ಲಾ ಶ್ರೀರಾಮುಲು ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕು. ಅವರ ಬಾಮೈದ ತಿಮ್ಮಪ್ಪ ಅಂದಂತೆ ಪೆನ್ನು ರೋಲ್ ಮಾಡಲೇಬೇಕು. ಈ ಮನುಷ್ಯನಿಂದ ಹುಕುಂ ಕೊಟ್ಟವರಿಗೆ ಆರ್ಡರ್ ನೀಡಲೇಬೇಕು. ದೆರ್ ಈಸ್ ನೋ ಚಾಯ್ಸ್! ಜಸ್ಟ್ ರಬ್ಬರ್ ಸ್ಟ್ಯಾಂಪಿನಂತಿದೆ ಈ ಐಎಎಸ್‌ಗಳ ಸ್ಥಿತಿ. ತಿಮ್ಮಪ್ಪ ಹೇಳಿದ್ದನ್ನ ‘ಮಾಡೊಲ್ಲಾ’ ಅಂದರೆ ಟಿಕೆಟ್ ಗ್ಯಾರಂಟಿ! ಅದ್ಯಾವುದಾ ಡಬ್ಬಾ ಡಿಪಾರ್ಟ್‌ಮೆಂಟಿಗೆ ಟ್ರಾನ್ಸ್‌ಫರ್ ಖಾತರಿ! ಅದ್ಕೇನೇ ಟಾಪ್‌ಲೆವೆಲ್ ಆಫೀಸರ್‍ಸು ಕೈಬಾಯಿ ಕಟ್ಕೊಂಡಿರ್‍ತಾರೆ.

ಆಂಬುಲೆನ್ಸ್‌ನಲ್ಲೇ ಇತ್ತಂತೆ ಕೋಟಿ ಕೋಟಿ ನೋಟಿನ ಕಟ್ಟು!

ಅಂದ ಹಾಗೇ, ಶ್ರೀರಾಮುಲು ಕೊಟ್ಟಿದ್ದ ಪಿಪಿಇ ಕಿಟ್ ಆರ್ಡರ್ ‘ವಿದ್ ಡ್ರಾ’ ಆಗಿಯೇ ಬಿಟ್ಟಿದೆ. ‘ಪ್ಲಾಸ್ಟೀಸರ್ಜೆ’ ಎಂಬ ಕಂಪೆನಿಗೆ ಕೊಟ್ಟಿದ್ದ ಕೋಟ್ಯಾಂತರ ಆರ್ಡರು ರದ್ದಾಗಿಯೇ ಬಿಟ್ಟಿದೆ. ಈ ಬಗ್ಗೆ ಸರ್ಕಾರ ಫರ್ಮಾನು ಹೊರಡಿಸಿಯೇ ಬಿಟ್ಟಿದೆ. ನಮ್ಮ ಮುಖ್ಯಮಂತ್ರಿಗಳಂತೂ ‘ಇವತ್ತೇ ಆರ್ಡರ್ ಕ್ಯಾನ್ಸಲ್ ಆಗ್ಬೇಕು’ ಅಂತ ಘರ್ಜಿಸಿಯೇ ಬಿಟ್ಟರು. ಅವರ ಸಿಂಹಘರ್ಜನೆ ಮುಂದೆ ಕುರಿಯಂತಾದ ಶ್ರೀರಾಮುಲು ಕೋಟ್ಯಾಂತರ ರೂಪಾಯಿ ಲಂಚದ ಹಣವನ್ನು ‘ಪ್ಲಾಸ್ಟೀಸರ್ಜೆ’ ಕಂಪೆನಿಗೆ ಮರಳಿಸಿದ್ದಾರೆ. ಖುದ್ದು ತಿಮ್ಮಪ್ಪನೇ ಸರಕಾರಿ ಆಂಬುಲೆನ್ಸ್‌ನಲ್ಲಿ ಹೊತ್ತೊಯ್ದು ಹಣವನ್ನು ರೀಚ್ ಮಾಡಿದ್ದಾರೆ.


ಮಾಗಡಿ ರೋಡಿಗೆ ಬಂದೇ ಬಿಡ್ತು ರಾಶಿ ರಾಶಿ ವೇಸ್ಟ್ ಕಿಟ್!

ಅದ್ಯಾವಾಗ ಲಂಚದ ಅಮೌಂಟು ‘ಪ್ಲಾಸ್ಟೀಸರ್ಜೆ’ಗೆ ರಿಟರ್ನ್ ಆಯ್ತಾ.. ವೆರಿ ನೆಕ್ಸ್ಟ್ ಮೊಮೆಂಟಿಗೆ ಪಿಪಿಇ ಕಿಟ್‌ನ ಕೋಟ್ಯಾಂತರ ರೂಪಾಯಿಗಳ ಆರ್ಡರೂ ಕ್ಯಾನ್ಸಲ್ ಆಗಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್‌ಹೌಸಿಂಗ್ ಸೊಸೈಟಿಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಕಮಿಷನರ್ರೇ ಖುದ್ದಾಗಿ ಆದೇಶವನ್ನು ರದ್ದುಪಡಿಸಿ ಸುತ್ತೋಲೆ ಹೊರಡಿಸಿದೆ.

ಇದಕ್ಕೆ ಸಂಬಂಧಿಸಿ ಇಶ್ಯೂ ಮಾಡಿದ ಸರ್ಕ್ಯೂಲರ್ ಆಶಾ/ಕೋವಿಡ್1/20-21 ದಿನಾಂಕ 24-4-2020ರಲ್ಲಿ ಅಲ್ಲಲ್ಲಿ ಸಪ್ಲಾಯ್ ಮಾಡಿದ್ದ ಪಿಪಿಇ ಕಿಟ್ ವಾಹನದಲ್ಲಿ ಮರಳಿಸಲು ಆದೇಶ ನೀಡಿದ್ದಾರೆ. ಇದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿರಲಾರದು. ಅಂದು ಬರೆದಿದ್ದ ಕೊರೊನಾದಿಂದ ಶ್ರೀಮಂತರಾದ ಅಂಕಣಕ್ಕೆ ಸಂದ ಪುರಸ್ಕಾರ ಇದಾಗಿದೆ. ಆವತ್ತೇ ಮಾಗಡಿ ರಸ್ತೆಯಲ್ಲಿರುವ ಲೂಟಿಕೋರರ ಅಡ್ಡಾದ ಫೋಟೊವನ್ನು ಪ್ರಕಟಿಸಿದ್ದು ನಿಮಗೆ ನೆನಪಿರಬಹುದು.

ಲಾಸ್ಟ್ ಸಿಪ್!

ಹಾಗಂತ ಪ್ರಕರಣಗಳ ಸರಮಾಲೆ ಇಲ್ಲಿಗೇ ಮುಗೀತು ಅಂದ್ಕೊಂಡಿದ್ದೀರಾ? ಇಂಪಾಸಿಬಲ್! ಕೊರೊನಾದಲ್ಲಿ ಇನ್ನೊಂದು ಬೃಹತ್ ಲಂಚಾವತಾರ ಕೆಲವೇ ತಾಸುಗಳಲ್ಲಿ ಕೈಸೇರಲಿದೆ. ಅದರಲ್ಲೂ ಪ್ರತಿಧ್ವನಿಸುತ್ತಿರುವ ಹೆಸರು ಬೇರಾರೂ ಅಲ್ಲ; ಸೇಮ್ ಹಣಬಾಕ ಶ್ರೀರಾಮುಲು! ಆದರೆ ಕೊರೊನಾದ ಮತ್ತೊಂದು ಐಟಂನಲ್ಲಿ ಪರ್ಚೇಸ್‌ಗೆ ಬ್ರೋಕರ್‌ಗಿರಿ ಮಾಡಿದ್ದು, ಆ ಪಿಪಿಇ ಕಿಟ್‌ನ ತಿಮ್ಮಪ್ಪ ಅಲ್ಲ. ಇಲ್ಲೊಬ್ಬಳು ಹೆಂಗಸಿನ ಹೆಸರು ಧ್ವನಿಸುತ್ತಿದೆ. ಅವಳ ಫೋಟೋ ಈಗ ತಾನೇ ಕೈಸೇರಿದೆ. ಯಥಾವತ್ತು ನಿಮ್ಮ ಮುಂದಿಟ್ಟಿದ್ದೇನೆ. ವಿಧಾನಸೌಧದಲ್ಲಿ ಬಿಗ್ ಡೀಲ್ ಮಾಡುತ್ತಿರುವ, ಗೋಲ್‌ಮಾಲ್ ಕ್ವೀನ್ ಖ್ಯಾತಿಯ ಘನಂದಾರಿ ಈಯಮ್ಮಳೊಂದಿಗೆ ಕೈಜೋಡಿಸಿರುವ ಪೋಲಿಸೊಬ್ಬನಿದ್ದಾನೆ. ಟ್ರೇಲರ್ ಮಾತ್ರ ಇಲ್ಲಿದೆ. ಅಭೀ ಫಿಕ್ಚರ್ ಬಾಕೀ ಹೈ.. ವೈಟ್ ಸಮ್‌ಟೈಮ್ ಪ್ಲೀಸ್….

-ಕುಂಜಾಲ್
ನಿಮ್ಮ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಇ-ಮೇಲ್ “[email protected]” ಗೆ ಕಳುಹಿಸಬಹುದು ಅಥವಾ ದೂರವಾಣಿ 9845070166 ಗೆ ಕರೆ ಮಾಡಬಹುದು

1 thought on “ಕೊರೊನಾ: ಕಿಟ್ ಪರ್ಚೇಸ್ ನಲ್ಲಿ ಸಿಕ್ಕಿಬಿದ್ದವರು ಯಾರು ಗೊತ್ತೆ?

Leave a Reply

Your email address will not be published. Required fields are marked *

error: Content is protected !!