ಕೇಂದ್ರ ಸರಕಾರದ ಅವೈಜ್ಞಾನಿಕ ದಂಡ ವಸೂಲಿ : ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಬೂತನ್,ರಷ್ಯಾ ದೇಶಗಳಿಗೆ ಪ್ರವಾಸ ಮಾಡಿ ಅಲ್ಲಿನ ಪ್ರಜೆಗಳಿಗೆ 7 ಸಾವಿರ ಕೋಟಿ ನೀಡುತ್ತಾರೆ ,ಆದರೆ ನಮ್ಮ ರಾಜ್ಯದಲ್ಲಿ 40 ದಿನಗಳ ಹಿಂದೆ ಕಂಡು ಕೇಳರಿಯದ ಪ್ರವಾಹ ಬಂದು ಸಾವಿರಾರು ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ ಅವರಿಗೆ ಪುನ:ವಸತಿ ಕಲ್ಪಿಸದ ಕೇಂದ್ರವು ಇಷ್ಟರವರೆಗೆ ನಯಾ ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲವೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಅಜ್ಜರಕಾಡು ಹುತಾತ್ಮರಕಟ್ಟೆ ಬಳಿ ಕೇಂದ್ರ ಸರಕಾರವು ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸಲಾಗಿದ್ದ ದುಬಾರಿ ದಂಡ ಹಾಗೂ ರಾಜ್ಯದಲ್ಲಿ ಉಂಟಾದ ನೆರೆ ಪರಿಹಾರಕ್ಕೆ ಕೇಂದ್ರವು ಯಾವುದೇ ಪರಿಹಾರ ಹಣ ಬಿಡುಗಡೆ ಮಾಡದಿರುವದನ್ನು ಖಂಡಿಸಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಪ್ರವಾಹ ಬಂದು ತಿಂಗಳು ದಾಟಿದರು ಇಲ್ಲಿಯವರೆಗೆ ವೈಮಾನಿಕ ಸಮೀಕ್ಷೆಯಾಗಲಿ, ಸಂತ್ರಸ್ಥರ ಭೇಟಿಯಾಗಲಿ ಮಾಡದೇ ಕೇವಲ ವಿದೇಶ ಸುತ್ತುವ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ ದೇಶದ ಪ್ರಧಾನಿ. ದೇಶದ ಜನರ ಚಿಂತೆ ಇಲ್ಲದ ಪ್ರಧಾನಿಯವರಿಗೆ ವಿದೇಶ ಸುತ್ತುವ ಚಾಲಿ ಯಾವಾಗ ಕಡಿಮೆಯಾಗುತ್ತ ಎಂದು ಪ್ರಶ್ನಿಸಿದರು.

ಒಂದೆಡೆ ಮಹಾರಾಷ್ಟ್ರ ,ಕರ್ನಾಟಕ ಡ್ಯಾಮ್‌ಗಳ ನೀರುಗಳನ್ನು ಬಿಟ್ಟು ಕೃತ ನೆರೆಯನ್ನು ಸೃಷ್ಟಿಸಲಾಗುತ್ತಿದೆಂದು ಆರೋಪಿಸಿದರು. ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸಲಾಗಿದ್ದ ಅವೈಜ್ಞಾನಿಕ ದಂಡ ವಸೂಲಿ ಬಗ್ಗೆ ಲೋಕಸಭೆ, ರಾಜ್ಯ ಸಭೆಯಲ್ಲಿಯಾಗಲಿ ಚರ್ಚಿಸದೆ ಈ ನಿಯಾಮ ಜಾರಿಗೆ ತಂದ ಪರಿಣಾಮ ಅನೇಕ ವಾಹನ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದರು.

ಕಾನೂನು ತರುವ ಮೊದಲು ಜನಜಾಗೃತಿ ಮಾಡಬೇಕಾದ್ದು ಸರಕಾರದ ಕರ್ತವ್ಯವಾಗಿದೆ. ಈರೀತಿ ಸರಕಾರ ಯಾವುದನ್ನು ಮಾಡದೆ ಏಕಾಏಕಿ 10 ಪಟ್ಟು ಹೆಚ್ಚು ದಂಡ ವಸೂಲಿ ಮಾಡುವುದು ಬಡ ವಾಹನ ಚಾಲಕರಿಗೆ ಆರ್ಥಿಕ ಪರಿಸ್ಥಿತಿಯ ಹೊಡೆತದ ನಡುವೆ ಇನ್ನೊಂದು ಬರೆ ಎಂದರು.

ಮಾಜಿ ಶಾಸಕ ಯು.ಆರ್. ಸಭಾಪತಿ ಮಾತನಾಡಿ ಕೇವಲ ಹಿಂದುತ್ವ , ಗೋವು ಹತ್ಯೆ ನಿಷೇಧ ,ರಾಮ ಮಂದಿರ ಹೇಳಿ ಓಟು ಪಡೆದ ನೀವು ಯಾವುದನ್ನು ಅನುಷ್ಠಾನ ಮಾಡಿದಿರಿ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಪ್ರಳಯ ರೂಪದ ಮಳೆಯಲ್ಲಿ ಕೊಚ್ಚಿ ಹೋದ ಮನೆಗಳೆಷ್ಟು ಅವರಿಗೆ ಪುರ್ನವಸತಿ ಕಲ್ಪಿಸಲಾಗದ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಮುಖಂಡರಾದ ನವೀನ್ ಚಂದ್ರಶೆಟ್ಟಿ, ಹಬಿಬಾಲಿ, ಸುನಿಲ್ ಬಂಗೇರ, ಪ್ರಶಾಂತ್ ಜತ್ತನ್ನ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ವೆರೋನಿಕಾ ಕರ್ನೇಲಿಯೋ, ಡಾ. ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ನಾಗೇಶ್ ಕುಮಾರ್ ಉದ್ಯಾವರ, ಶಂಕರ್ ಕುಂದರ್, ಪ್ರವೀಣ್ ಶೆಟ್ಟಿ, ನಗರಸಭಾ ಸದಸ್ಯ ವಿಜಯ ಪೂಜಾರಿ, ಕೀರ್ತಿ ಶೆಟ್ಟಿ ಅಂಬಲಪಾಡಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!