ಕೊಕೈನ್ ಹಂಟ್…!!! ಪೋಷಕರೆ ಇತ್ತ ಗಮನಿಸಿ…
ಮಂಗಳೂರು : ಕೆಲ ದಂಧೆಗಳಲ್ಲಿ ಕರ್ನಾಟಕದಲ್ಲಿ ನಂಬರ್ ಒನ್ ದಕ್ಷಿಣ ಕನ್ನಡ-ಮಂಗಳೂರು. ಮುಂಬೈ ಲಿಂಕ್‌ಯಿರುವ ಮಂಗಳೂರಿಗೆ ಡ್ರಗ್ಸ್, ಕೊಕೈನ್, ಅಫೀಮು ಡೈರೆಕ್ಟಾಗಿ ಬಂದು ಇಳಿಯುತ್ತೆ. ಇಲ್ಲಿನ ಯುವ ಸಮೂಹ ಮತ್ತಿನಲ್ಲಿ ತೇಲಲು ನಿತ್ಯ ಕಾಣದ ಕೈಗಳು ಇಲ್ಲಿ ದಂಧೆ ನಡೆಸುತ್ತಿದ್ದಾರೆ. ಈ ದಂಧೆ ನಿಲ್ಲಿಸಲು ಈಗ ಪೊಲೀಸರು ಪಣ ತೊಟ್ಟಿದ್ದಾರೆ. ಇದರ ಮೊದಲ ಭೇಟೆ ಆಗಿದ್ದು ಸದ್ದಿಲ್ಲದೇ ಖಾಕಿ ಅಲರ್ಟ್ ಆಗಿದೆ.
ಮಂಗಳೂರು ರಾತ್ರಿಯಾದ್ರೇ ಕಿಕ್ಕೇರುತ್ತದೆ. ಮಂಗಳೂರಿನ ಆಯಕಟ್ಟಿನ ಸ್ಥಳಗಳಲ್ಲಿ ಮಾದಕ ಲೋಕವೇ ಸೃಷ್ಟಿಯಾಗುತ್ತದೆ. ಗಾಂಜಾ ಬೇಕಾ. ಅಫೀಮು ಬೇಕಾ. ಇಲ್ಲಾ ಕಾಸ್ಟಿಯಸ್ಟ್ ಡ್ರೈಗ್ ಕೊಕೈನ್ ಬೇಕಾ ಎಲ್ಲಾ ಸಿಗುತ್ತದೆ. ಮದಿರೆಯ ಮತ್ತಿನ ಜೊತೆ ಮಾದಕತೆಯನ್ನು ಇಮ್ಮಡಿಗೊಳಿಲು ಹಾತೊರೆಯುತ್ತಿರುವವರನ್ನು ನೋಡಿ ಈ ಗ್ಯಾಂಗ್ ಬಲೆ ಬೀಸುತ್ತದೆ. ಇನ್ನೂ ಯುವ ಸಮೂಹವೇ ಇವರ ಟಾರ್ಗೆಟ್.
ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಯುವಕ ಯುವತಿಯರನ್ನು ಟಾರ್ಗೆಟ್ ಮಾಡುವ ಈ ದಂಧೆಕೋರರು ಅವರಿಗೆ ಮಾದಕ ವಸ್ತುಗಳನ್ನು ಮಾರುತ್ತಾರೆ. ಸದ್ಯ ಕೊಕೈನ್ ಮಾರಲು ಆಗಮಿಸಿದ್ದ ವ್ಯಕ್ತಿಯನ್ನು ಪೊಲೀಸರು ತಮ್ಮ ಖೆಡ್ಡಾಕ್ಕೆ ಕೆಡವಿದ್ದಾರೆ. ಮಂಗಳೂರಿನ ಬೋಳಾರು ಬಳಿಯಿರುವ ಸುಲ್ತಾನ್ ಬತ್ತೇರಿ ಬಳಿ ದತ್ತಪ್ರಸಾದ್ ಲೇಔಟ್ ನಿವಾಸಿ ಮೋನಿಶ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು ಮತ್ತು ನಾರ್ಕೋಟಿಕ್ ಬಂಧಿಸಿದ್ದಾರೆ. ಇನ್ನೂ ಈತನ ಬಳಿ ಸುಮಾರು 1.6 ಲಕ್ಷ ರೂಪಾಯಿ ಬೆಲೆಬಾಳುವ 16 ಗ್ರಾಂ ಕೊಕೇನ್ ಸೇರಿದಂತೆ ಒಟ್ಟು 2 ಲಕ್ಷದ 81 ಸಾವಿರದನೈರು ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಮನೀಶ್‌ನ್ನು ವಿಚಾರಣೆಗೆ ಒಳಪಡಿಸಿದ್ರೆ ಈತ ಮುಂಬೈ ಮುತ್ತು ಗೋವಾದಿಂದ ಈ ಮಾದಕ ವಸ್ತುಗಳನ್ನು ಸಪ್ಲೇ ಮಾಡುವುದಾಗಿ ತಿಳಿಸಿದ್ದಾನೆ. ಮಂಗಳೂರಿನ ಒಂದು ದೊಡ್ಡ ಜಾಲವೇ ಈ ದಂಧೆಯನ್ನು ಆಪರೇಟ್ ಮಾಡುತ್ತಿದ್ದು ಮುಂಬೈನಿಂದ ಡ್ರಗ್ಸ್ ವಿಮಾನ ಮತ್ತು ಹಡಗುಗಳಲ್ಲಿ ಬರುತ್ತೆ ಅನ್ನೊದು ಈತನ ವಿಚಾರಣೆಯಿಂದ ತಿಳಿದು ಬಂದಿದೆ.
ಇದನ್ನು ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ಬಾರ್‌ನಲ್ಲಿ ಕುಡಿಯುವವರಿಗೆ ಸಪ್ಲೇ ಮಾಡುವುದಾಗಿಯು ಹೇಳಿದ್ದಾನೆ. ಇದನ್ನೆಲ್ಲಾ ಮಟ್ಟ ಹಾಕಲು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪಣ ತೊಟ್ಟಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಬರುವ ಎಲ್ಲಾ ಬಾರ್ ಅಂಡ್ ರೆಸ್ಟೋರಂಟ್‌ಗಳ ಮೇಲೆ ಸರ್ಪೈಸ್ ದಾಳಿ ಮಾಡುತ್ತಿದ್ದು, ಮದ್ಯಪಾನ ಮಾಡುತ್ತಿದ್ದವರನ್ನು ಸಂಪೂರ್ಣ ಶೋಧಿಸುತ್ತಿದ್ದಾರೆ. ಸಿಗರೇಟ್‌ಗೆ ಗಾಂಜಾ ಫಿಲ್ ಅಫ್ ಮಾಡಿ ಬಾರ್‌ನಲ್ಲಿ ಸೇದುತ್ತಿದ್ದಾರ ಅಂತಾ ಪರಿಶೀಲನೆ ಮಾಡುತ್ತಿದ್ದಾರೆ.
ಈಗಿರುವ ಮತ್ತಿನ ಮಂಗಳೂರನ್ನು ಮೆತ್ತನೆಯ ಮಂಗಳೂರನ್ನಾಗಿಸಲು ಪೊಲೀಸ್ ಇಲಾಖೆ ಕ್ರಮ ಸಾರ್ವಜನಿಕವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ಪೊಲೀಸರ ಈ ಕಠಿಣ ಕ್ರಮದಿಂದ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಭೂಗತ ಪಾತಕಿಗಳಿಗೆ ನುಂಗಲಾರದ ತುತ್ತಾಗಿದೆ. ಅದೇನೆ ಇದ್ರು ಮಂಗಳೂರಿನ ಯುವ ಜನತೆಯ ಭವಿಷ್ಯಕ್ಕೆ ಇಂತಹ ಪ್ರಯತ್ನಗಳು ಅನಿವಾರ್ಯ.