ಜೂ.30 ರಂದು ಉಡುಪಿಯಲ್ಲಿ ನನ್ನ ಹಾಡು ನನ್ನದು ಸೀಸನ್-3

ಉಡುಪಿ: ಜೂ.30 ರಂದು ಉಡುಪಿಯಲ್ಲಿ ನನ್ನ ಹಾಡು ನನ್ನದು ಸೀಸನ್-೩ ಸುಗಮ ಸಂಗೀತ ಗೀತಗಾಯನ ಸ್ಪರ್ಧೆ ನಡೆಯಲಿದೆ.

ಕಟಪಾಡಿ ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್, ಕಲಾನಿಧಿ ಸಾಂಸ್ಕ್ಕೃತಿಕ ಕಲಾಪ್ರಕಾರಗಳ ಸಂಸ್ಥೆ, ರಾಗವಾಹಿನಿ ಉಡುಪಿ, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಗೀತ ಗಾಯನ ಸ್ಪರ್ಧೆ.

ಜೂ.30ರಂದು ಬೆಳಗ್ಗೆ 9ರಿಂದ  ಉಡುಪಿಯ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ ೯ಕ್ಕೆ ಸಂಗೀತ ಸ್ಫರ್ಧೆಯ ಪ್ರಥಮ ಸುತ್ತು ಮತ್ತು ಸೆಮಿಫೈನಲ್  ಸ್ಫರ್ಧೆಯನ್ನು ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದಾರೆ.

ಫೈನಲ್ ಸ್ಫರ್ಧೆಗೆ ಆಯ್ಕೆಯಾಗುವ ೧೦ ಮಂದಿ ಗಾಯಕರಿಗೆ ಆಗಸ್ಟ್ ತಿಂಗಳಲ್ಲಿ ನಡೆಯುವ ನನ್ನ ಹಾಡು ನನ್ನದು ಲೈವ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ವಿಜೇತರಿಗೆ ಪ್ರಥಮ ರೂ. 10000 ನಗದು ಸಮೇತ ಟ್ರೋಫಿ ಮತ್ತು ದ್ವಿತೀಯ 5000 ನಗದು ಸಮೇತ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ ಸುವರ್ಣ ಕಟಪಾಡಿ, ರೋಹಿತ್ ಮಲ್ಪೆ, ಉಪ್ಪೂರು ಭಾಗ್ಯ ಲಕ್ಷ್ಮೀ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!