ಕರಾವಳಿ ಸ್ಪೋರ್ಟ್ಸ್ ಕ್ಲಬ್ : ‘ಕಡೆಕಾರ್ಡ್ ಕೆಸರ್ದ ಗೊಬ್ಬು’
ಉಡುಪಿ : ಗ್ರಾಮೀಣ ಭಾಗದ ಯುವ ಜನರನ್ನು ಮತ್ತು ಸಾರ್ವಜನಿಕರನ್ನು ಕೃಷಿಯತ್ತ ಆಕರ್ಷಿಸುವ ಸಲುವಾಗಿ ಕಡೆಕಾರು ಗ್ರಾಮದ ಹಿರಿಯ ಮತ್ತು ಪ್ರತಿಷ್ಠಿತ ಸಂಸ್ಥೆ ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕಡೆಕಾರ್ ಇವರ ನೇತೃತ್ವದಲ್ಲಿ ‘ಕಡೆಕಾರ್ಡ್ ಕೆಸರ್ದ ಗೊಬ್ಬು’ ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.
ಕಡೆಕಾರು ಸಿ ಯೂ ರೆಸಾರ್ಟ್ ಬಳಿ ಜುಲೈ 28ರಂದು ರವಿವಾರ ಬೆಳಿಗ್ಗೆ 8 ಗಂಟೆಯಿಂದ ಗ್ರಾಮೀಣ ಕ್ರೀಡಾಕೂಟ ಆರಂಭವಾಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಡೆಕಾರು ಕರಾವಳಿ ಸ್ಪೋರ್ಟ್ಸ್ ಕ್ಲಬ್ ಇವರ ನೇತೃತ್ವದಲ್ಲಿ ಕಡೆಕಾರು ಗ್ರಾಮದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಕ್ರೀಡಾಕೂಟ ಜರುಗಲಿದೆ.
ಉಜ್ವಲ್ ಡೆವಲಪರ್ಸ್ನ ಮಾಲಕರಾದ ಉದ್ಯಮಿ ಪುರುಷೋತ್ತಮ ಶೆಟ್ಟಿ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಗೋಪಾಲ ಶ್ರೀ ಬಂಗೇರ ವಹಿಸಲಿದ್ದಾರೆ. ಲಯನ್ಸ್ ಜಿಲ್ಲಾ ಸಂಪರ್ಕಾಧಿಕಾರಿ ಸಂಜೀವ ಟಿ ಕರ್ಕೇರ ಮುಖ್ಯ ಭಾಷಣಕಾರರಾಗಿರುವ ಕಾರ್ಯಕ್ರಮದಲ್ಲಿ, ಆನಂದ ಪಿ ಸುವರ್ಣ, ಉದ್ಯಮಿ ಸುರೇಶ್ ಭಂಡಾರಿ ಕಡಂದಲೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ , ಸಿಂಧೂರಾಮ್ ಆನಂದ ಪುತ್ರನ್, ಸಾಧು ಸಾಲ್ಯಾನ್, ನಿರುಪಮಾ ಶೆಟ್ಟಿ , ಸುನಿಲ್ ಸಾಲ್ಯಾನ್,ಉದಯ ಕುಮಾರ್ ಶೆಟ್ಟಿ ಮತ್ತಿತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕಡೆಕಾರು ಇದರ ಗೌರವಾಧ್ಯಕ್ಷ ಮುರಳೀಧರ ಶೆಟ್ಟಿ, ಅಧ್ಯಕ್ಷ ದಿನೇಶ್ ಜೆ ಮತ್ತು ಕಾರ್ಯದರ್ಶಿ ಶಶಿಧರ್ ಬಂಗೇರ ಮತ್ತು ಕಾರ್ಯಕಾರಿ ಸಮಿತಿ ಸೇವೆ ಸಲ್ಲಿಸುತ್ತಿದೆ. ಕೆಸರ್ದ ಗೊಬ್ಬು ಗ್ರಾಮೀಣ ಕ್ರೀಡಾಕೂಟಕ್ಕೆ ಉದ್ಯಮಿ ಮತ್ತು ಮಾಜಿ ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಾರಾನಾಥ ಆರ್ ಸುವರ್ಣ ನೇತೃತ್ವದ ಸಮಿತಿಯು ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸುತ್ತಿದೆ. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗ್ರಾಮ ಪಂಚಾಯಿತಿ ಸದಸ್ಯ ಜತಿನ್ ಕಡೆಕಾರ್, ಪ್ರಧಾನ ಸಂಚಾಲಕರಾಗಿ ಸೋಮನಾಥ ಕೆ ಪೂಜಾರಿ, ಗೌರವಾಧ್ಯಕ್ಷರಾಗಿ ಶಶಿಧರ ಶೆಟ್ಟಿ ಎರ್ಮಾಳು, ಕೋಶಾಧಿಕಾರಿ ಪ್ರವೀಣ್ ಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ.