ಮಾರಕ ಕಾಯಿಲೆ ಬಾಧಿತ ಬಾಲಕನ ರಕ್ಷಣೆ; ಸರಕಾರಿ ಆಸ್ಪತ್ರೆಗಳು ನನ್ನ ನಿರ್ಲಕ್ಷಿಸುತ್ತೆವೆ ಎಂಬುವುದು ಬಾಲಕನ ಅಳಲು…!!

ಉಡುಪಿ, ಜು.30 : ಮಾರಕ ಕಾಯಿಲೆಗೆ ತುತ್ತಾದ ಅಪರಿಚಿತ ಬಾಲಕನೊರ್ವ ಅಸಹಾಯಕ ಪರಿಸ್ಥಿತಿಯಲ್ಲಿ ನಗರದ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಮಂಗಳವಾರ ಸಂಜೆ ಕಂಡಬಂದಿದ್ದಾನೆ. ವಿಷಯ ತಿಳಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಬಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ಬಾಲಕನಿಗೆ ಹೆತ್ತವರಿಂದಲೇ ಮಾರಕ ಕಾಯಿಲೆ ಅಂಟಿಕೊಂಡಿದೆ. ಹೆತ್ತವರು ಈ ಮೊದಲು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಬಾಲಕ ತನ್ನ ಹೆಸರು ಮಾಗುಂಡಪ್ಪ (17ವ)ಊರು ಬಾಗಲಕೋಟೆ, ಮಂಗಳೂರು ಸರಕಾರಿ ಆಸ್ಪತ್ರೆಯಲ್ಲಿ ಶುಲ್ಕ ಕಟ್ಟಲು ನನ್ನಲ್ಲಿ ಹಣ ಇಲ್ಲದ ಕಾರಣ ಚಿಕಿತ್ಸೆ ನೀಡಲು ನಿರಾಕರಿಸಿದರು. ಹಾಗಾಗಿ ಉಡುಪಿಗೆ ಬಂದೆ ಎಂದು ಎಂದು ಬಾಲಕ ಅಸಹಾಯಕತೆನ್ನು ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ. ಕುಟುಂಬ ಮತ್ತು ನಾಗರಿಕ ಸಮಾಜವು ನನ್ನ ಕಡೆಗಣಿಸಿದೆ. ಸಂಬಂಧಪಟ್ಟ ಇಲಾಖೆಗಳು ತನಗೊಂದು ಆಶ್ರಯ ಕಲ್ಪಿಸ ಬೇಕೆಂಬುವುದು ಬಾಲಕನ ಅಳಲಾಗಿದೆ.
ಶುಲ್ಕ ಕಟ್ಟಲು ಹಣ ಇಲ್ಲವೆಂಬ ಕಾರಣದಿಂದ, ಚಿಕಿತ್ಸೆಯನ್ನು ನಿರಾಕರಿಸುವುದು ಸರಿಯಲ್ಲ. ಬಾಲಕನಿಗೆ ಮಾರಕ ಕಾಯಿಲೆ ಜೊತೆಗೆ, ಕ್ಷಯ ರೋಗವು ಇದೆ. ಇಂತಹ ಸಾಂಕ್ರಮಿಕ ರೋಗಪೀಡಿತ ರೋಗಿ ಸಾರ್ವಜನಿಕ ಸ್ಥಳದಲ್ಲಿ ರೋಗವಾಹಕನಾಗಿ, ಪರಿಸರದಲ್ಲಿ ರೋಗ ಹರಡಲು ಕಾರಣನಾಗುತ್ತಾನೆ. ಸಂಬಂಧಪಟ್ಟ  ಇಲಾಖೆಗಳ ನಿಷ್ಕಾಳಜಿಗಳಿಂದ ಅದೆಷ್ಟೋ ರೋಗಗ್ರಸ್ಥರು ಸಾವುಕಾಣಲು, ಪರಿಸರದಲ್ಲಿ ರೋಗಹರಡಲು ಕಾರಣವಾಗುತ್ತಿವೆ. ಆರೋಗ್ಯ ಇಲಾಖೆ ಇಂತಹ ಸಂದರ್ಭದಲ್ಲಿ ಮಾನವಿಯತೆ ತೊರ್ಪಡಿಸ ಬೇಕಾಗುತ್ತದೆ. ಎಂದು ಸಮಾಜಸೇವ ವಿಶು ಶೆಟ್ಟಿ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!