ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋಧ್ಯಮ ಪ್ರಶಸ್ತಿಗೆ ಚಂದ್ರಶೇಖರ ಪಾಲೇತ್ತಾಡಿ ಆಯ್ಕೆ
ಬ್ರಹ್ಮಾವರ:- ಬ್ರಹ್ಮಾವರದ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ ಜನಪ್ರಿಯ ಮುಂಗಾರು ಪತ್ರಿಕೆಯ ಸಂಪಾದಕ ದಿ|ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ಈ ಬಾರಿ ಮುಂಬನ ಪ್ರತಿಷ್ಟಿತ ‘ಕರ್ನಾಟಕ ಮಲ್ಲ’ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲೇತ್ತಾಡಿ ಆಯ್ಕೆಯಾಗಿದ್ದಾರೆ ಎಂದು ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ್ ಆಚಾರ್ಯ ತಿಳಿಸಿದ್ದಾರೆ.ದಕ್ಷಿಣಕನ್ನಡ ಜಿಲ್ಲೆಯ ಮಲೆನಾಡು ಪುತ್ತೂರಿನ ಬಜತ್ತೂರಿ ಚಂದ್ರಶೇಖರ್ ಪಾಲೇತ್ತಾಡಿಯವರು ರೈತಪರ ಚಳುವಳಿ,ನಾಟಕ,ಯಕ್ಷಗಾನ,ಭಾಷಣ,ಹೀಗೆ ನಾನಾ ರೂಪದಲ್ಲಿ ತನ್ನ ಬಹುತ್ವಗಳಲ್ಲಿ ಕಾಣಿಸಿಕೊಂಡವರು.
ವಡ್ಡರ್ಸೆ ರಘುರಾಮ ಶೆಟ್ಟರಂತೆ ಪತ್ರಿಕಾರಂಗದಲ್ಲಿ ಭಿನ್ನ ದೃಷ್ಟಿಕೋನದಿಂದ ಸಾಗಿದ ಇವರು ಹೊಸದಿಗಂತ,ಮಂಗಳೂರು ಮಿತ್ರ,ಉದಯದೀಪ,ಕರ್ನಾಟಕ ಮಲ್ಲ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ ತದನಂತರ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದರು.
ಮರಾಠಿ ಮಣ್ಣು ಮುಂಬೈನಲ್ಲಿ ಹಲವು ಅಡೆತಡೆಗಳಿದ್ದರೂ ಕನ್ನಡದ ಕಂಪನ್ನು ಯಶಸ್ವಿಯಾಗಿ ಪಸರಿಸಿದವರು ಪಾಲೆತ್ತಾಡಿಯವರು.
ಕನ್ನಡ ಭಾಷೆಯ ಪತ್ರಿಕೆಯೊಂದನ್ನು ಪರರಾಜ್ಯದಲ್ಲಿ ಆ ರಾಜ್ಯದ ಪತ್ರಿಕೆಗಳಿಗೆ ಸರಿಸಮವಾಗಿ ನಡೆಸಿದ ಕೀರ್ತಿ ಪಾಲೆತ್ತಾಡಿಯವರು ಅಂತಹ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಅಗಸ್ಟ್ 4ರಂದು ಮಧ್ಯಾಹ್ನ 2.30 ಯಿಂದ ಬ್ರಹ್ಮಾವರ ಬಂಟರ ಭವನದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇದ್ದು ಸಾಮಾಜಿಕ ಹೋರಾಟಗಾರ ರವೀಂದ್ರನಾಥ್ ಶ್ಯಾನುಬೋಗ್ ರವರಿಂದ ಪಾಲೆತ್ತಾಡಿಯವರಿಗೆ ಪ್ರಶಸ್ತಿ ದೊರೆಯಲಿದ್ದು ಜಿಲ್ಲೆಯ ಅನೇಕ ಗಣ್ಯರ ಉಪಸ್ಥಿತಿ ಇರಲಿದೆ.
ಈ ಸಂಧರ್ಭ ಸಂಸದ ಪ್ರತಾಪ್ ಸಿಂಹ,ಬಿ.ಎಲ್.ಶಂಕರ್,ಜಯಪ್ರಕಾಶ್ ಹೆಗ್ಡೆಯವರಿಂದ ಪ್ರಸ್ತಕ ಕಾಲಘಟ್ಟದಲ್ಲಿ ಪತ್ರಿಕೋಧ್ಯಮ ಎಂಬ ವಿಚಾರದ ಕುರಿತು ಮಾಧ್ಯಮ ಸಂವಾದ ನಡೆಯಲಿದೆ ಎಂದು ಯುವಪತ್ರಕರ್ತ ವಸಂತ್ ಗಿಳಿಯಾರ್ ತಿಳಿಸಿದರು.