ಉಡುಪಿ ವರುಣ ದೇವನ ಕೃಪೆ : ಸಂಭ್ರಮದ ಕೃಷ್ಣ ಲೀಲೋತ್ಸವ ಸಂಪನ್ನ

 ಉಡುಪಿ :ಪೊಡವಿಗೊಡೆಯನ ಊರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಷ್ಟೇ ವಿಟ್ಲ ಪಿಂಡಿಯು ಅಷ್ಟೇ ಮಹತ್ವದಾಗಿದೆ, ತಾಯಿ ಯಶೋದೆಯ ಕಣ್ಣು ತಪ್ಪಿಸಿ ತುಂಟ ಕೃಷ್ಣ ತನ್ನ ಗೆಳೆಯರ ಜೊತೆಗೂಡಿ ದ್ವಾರಕಾದ ಮನೆಮನೆಗಳಿಗೆ ತೆರಳಿ ಬೆಣ್ಣೆ ಮೊಸರು ಹಾಲು ಕದ್ದು ತಿನ್ನುತ್ತಿದ್ದನಂತೆ  ಅಷ್ಟೇ ಅಲ್ಲದೆ ತನ್ನ ಪುಟ್ಟ ಕೈಗೆ ಎಟಕದ ಮಡಕೆಗಳನ್ನ  ಪೆಟ್ಲಎಂಬ ಆಯುಧದಿಂದ ಒಡೆದು ಕದಿಯುತ್ತಿದ್ದ, ಇವನ ಈ ತುಂಟಾಟದ ವರದಿಗಳು ಪ್ರತಿ ದಿನ ತಾಯಿ ಯಶೋಧೆಗೆ ಬರುತ್ತಿತ್ತಂತೆ.

ಈ ಎಲ್ಲದರ ನೆನಪು ಈ ವಿಟ್ಲ ಪಿಂಡಿಯ ಆಚರಣೆ , ಉಡುಪಿಯಲ್ಲಿ ಕೃಷ್ಣ ಮಠದಲ್ಲಿ  ಈ ಬಾರಿಯೂ ವಿಟ್ಲಾಪಿಂಡಿಯು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು . ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಭಕ್ತರು ಹರ್ಷೋದ್ಗಾರ ಮತ್ತು ಹುಮಸ್ಸಿನಿಂದ  ರಥಬೀಧಿ ಸುತ್ತಲೂ ವಿವಿಧ ಕಲಾಕೃತಿಗಳು ಮತ್ತು ಸಾಂಸ್ಕೃತಿಕ  ಕಲಾ ತಂಡಗಳ ಮೆರವಣಿಗೆಯೊಂದಿಗೆ ಆಚರಣೆಗಳು ಪ್ರಾರಂಭವಾದವು.

ಮಧ್ಯಾಹ್ನದ ನಂತರ ವೇಷ ಭೂಷಣಗಳೊಂದಿಗೆ ದೇವರ ಹಾಗು ಮಠಾಧಿಪತಿಗಳ ಆಶೀರ್ವಾದ ಪಡೆದು ಜನರ ಹರ್ಷೋಗಾದರಾದ ನಡುವೆ ಸಿಂಗರಿಸಿದ ಕೋಲುಗಳನ್ನ ಹಿಡಿದು ಗೊಲ್ಲರ ತಂಡ ಹಾಡುತ್ತ ಕುಣಿಯುತ್ತ ರಥಬೀದಿಗೆ ಬಂದರು, ರಥಬೀದಿಯ ಸುತ್ತ ಅಲಂಕ್ರತಗೊಂಡ ಗುಜ್ಜಿ ಮೇಲೆ  ಹಾಲು, ಮೊಸರು ಮತ್ತು ಕೇಸರಿ ನೀರಿನಿಂದ ತುಂಬಿದ ಮಣ್ಣಿನ ಮಡಕೆಗಳನ್ನು ಒಡೆದು  ಕೃಷ್ಣ ನ ಬಾಲ್ಯದ ಲೀಲೆಯನ್ನ ಮತ್ತೊಮ್ಮೆ ಜ್ಞಾಪಿಸುವಂತೆ ಮಾಡಿದರು, ಕೊರಳಿಗೆ ನೋಟುಗಳ ಮಾಲೆಯನ್ನ ಧರಿಸಿ, ತಾಷೆಯ ಶಬ್ದದೊಂದಿಗೆ ಹೆಜ್ಜೆಯನ್ನ ಇಡುವ ಹುಲಿ ವೇಷ,ಕೀಲು ಕುದುರೆ , ಗೊಂಬೆಗಳು ಹಾಗು ಅನೇಕ ವೇಷಗಳು ಜನರ ಗಮನ ಸೆಳೆದವು.

ಅಷ್ಟ ಮಠಗಳ ಒಳಗೂ ಹೊರಗೂ ಜನರ ದಂಡು ತುಂಬಿತ್ತು ಕಣ್ಣು ಹಾಯಿಸಿದಷ್ಟು ದೂರ ಭಕ್ತರ ಸಾಗರವೇ ತುಂಬಿತ್ತು. ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥ ಸ್ವಾಮೀಜಿ ,  ಅದಮಾರು ಕಿರಿಯ ಸ್ವಾಮೀಜಿ  ರಥೋತವದಲಿ ಪಾಲುಗೊಂಡರು.ಅಲಂಕ್ರತರಂತಗೊಂಡ ರಥದಲ್ಲಿ ಕೃಷ್ಣ ಪರಮಾತ್ಮನ ಮೃಣ್ಮಯ ಮೂರ್ತಿ ಕಣ್ಮನ ಸೆಳೆಯುತ್ತಿತ್ತು.

ಗಮನ ಸೆಳೆದ ಅಲಾರೆ ದಹಿಹಂಡಿ
ನಗರದ ವಿಟ್ಲಪಿಂಡಿ ಸಂಭ್ರಮದಲ್ಲಿ ವಿಶೇಷ ಗಮನ ಸೆಳೆದಿದ್ದು, ಅಲಾರೆ ತಂಡದ ದಹಿಹಂಡಿ (ಮೊಸರು ಕುಡಿಕೆ ಹೊಡೆಯುವ) ಸ್ಪರ್ಧೆ ನಡೆಯಲಿದೆ. 110 ಮಂದಿಯುಳ್ಳ ಮುಂಬಯಿ ಸಾಂತಾಕ್ರೂಸ್ ಬಾಲಮಿತ್ರ ಮಂಡಳಿಯ ಆಲಾರೆ ಗೋವಿಂದ ತಂಡ ವಿಶಿಷ್ಟ ಸಾಹಸದ ಮೂಲಕ 50 ಅಡಿ ಎತ್ತರದಲ್ಲಿ ಮಡಿಕೆ ಒಡೆದು ಜನರ ಗಮನ ಸೆಳೆದರು.

ಕನಕ ಮಂಟಪ ಮುಂಭಾಗ, ಕಡಿಯಾಳಿ, ಅಂಬಲಪಾಡಿ ಶ್ಯಾಮಿಲಿ ಸಭಾಂಗಣ, ಲಯನ್ಸ್ ಸರ್ಕಲ್, ತ್ರಿವೇಣಿ ಸರ್ಕಲ್, ಕಾಣಿಯೂರು ಮಠ ಮುಂಭಾಗ, ಪುತ್ತಿಗೆ ಮಠ ಮುಂಭಾಗ, ಪೇಜಾವರ ಮಠ ಮುಂಭಾಗ, ಕಿದಿಯೂರು ಹೋಟೆಲ್ ಎದುರು,ಡಯಾನ ಹೋಟೆಲ್ ಮುಂಭಾಗದಲ್ಲಿ ಮಡಿಕೆ ಒಡೆಯುವ ಮೂಲಕ ವಿಶೇಷ ಆಕರ್ಷಣೆಗೆ ಪಾತ್ರರಾದರು.

ವಸಂತ ಮಂಟಪದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅಲಾರೆ ತಂಡದ ಮಡಕೆ ಹೊಡೆಯುವ ಸ್ಪರ್ಧೆಗೆ ಚಾಲನೆ ನೀಡಿ ಆಶಿರ್ವಚನ ನೀಡಿದರು. ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಉದ್ಯಮಿಗಳಾದ ಕೆ.ರಂಜನ್ ಕಲ್ಕೂರು , ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ನಟ ಸಚಿನ್ ಸುವರ್ಣ, ಬಾಲ ಮಿತ್ರ ಮಂಡಳಿ ಸಂತೋಷ, ಕನಕ ಸಂಸ್ಕೃತಿಕ ವೇದಿಕೆ ಅಧ್ಯಕ್ಷ ರಾಜೇಂದ್ರ ಪೂಜಾರಿ, ದುಬೈ ಪ್ರಕಾಶ ಪೂಜಾರಿ, ಯುವರಾಜ್ ಪಿತ್ರೋಡಿ ಉಪಸ್ಥಿತರಿದ್ದರು.

ರವಿ ಕಟಪಾಡಿಯ ವಾಂಪೈರ್‌ ವೇಷ, ರಾಮಾಂಜಿ ಹಾಕಿರುವ ಸ್ನೇಕ್‌ ಕ್ವೀನ್‌ ವೇಷ ಜನರ
ಗಮನಸೆಳೆಯಿತು. ಇನ್ನೊಂದೆಡೆ ಹುಲಿವೇಷ, ಯಕ್ಷಗಾನ ವೇಷ, ಮಕ್ಕಳ ಹನುಮಂತ, ಕೃಷ್ಣ ವೇಷ ಸೇರಿದಂತೆ ನಾನ ರೀತಿಯ ವೇಷಗಳು ಜನರನ್ನು ರಂಜಿಸಿದವು. ಮಕ್ಕಳು ಹುಲಿವೇಷ, ಯಕ್ಷಗಾನದ ರಾಕ್ಷಸ ವೇಷಧಾರಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡ ದೃಶ್ಯಗಳು ಸಾಮಾನ್ಯವಾಗಿತ್ತು.


ವಾಂಪೈರ್‌ ವೇಷಕ್ಕೆ ಮನಸೋತ ಜನ ಪ್ರತಿವರ್ಷದಂತೆ ಈ ವರ್ಷವೂ ಬಡ ಮಕ್ಕಳ ಅನಾರೋಗ್ಯಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ ರವಿ ಕಟಪಾಡಿ ವಿಭಿನ್ನ ವೇಷಧರಿಸಿ ಜನರನ್ನು ಖುಷಿಪಡಿಸಿದರು. ಈ ಬಾರಿ ರವಿಹಾಕಿರುವ ವಾಂಪೈರ್‌ ವೇಷ ಜನರ ಗಮನಸೆಳೆಯಿತು.
ಈ ಬಾರಿ ಸಂಗ್ರಹವಾಗುವ ಹಣವನ್ನು ಲಿವರ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ
ಮೂಡುಬಾರಳಿಯ ಮಂದರ್ತಿಯ ಕುಶಲ ಹಾಗೂ ಉಷಾ ದಂಪತಿ ಪುತ್ರ ಶ್ರೀತನ್‌ ಚಿಕಿತ್ಸೆಗೆ, ಬಿಳಿ ರಕ್ತಕಣ ಸಮಸ್ಯೆ ಇರುವ ಕಳ್ಳಿಗುಡ್ಡೆ ವಕ್ವಾಡಿಯ ರವೀಂದ್ರ ಯಶೋಧ ದಂಪತಿ ಪುತ್ರ ಪ್ರಥಮ್‌ಗೆ, ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿರುವ ಪಂಚಬೆಟ್ಟು ಹಿರಿಯಡಕ ಕೃಷ್ಣಮೂರ್ತಿ ಆಚಾರ್ಯ, ಕುಶಲ ದಂಪತಿ ಪುತ್ರ ಕಿರಣ್‌ ಸೇರಿದಂತೆ 5 ಮಕ್ಕಳ ಚಿಕಿತ್ಸೆಗೆ ನೀಡಲು ಉದ್ದೇಶಿಸಿದ್ದಾರೆ.


ಗಮನ ಸೆಳೆದ ಹುಲಿವೇಷ: ರಥಬೀದಿ ಸಹಿತ ನಗರದಾದ್ಯಂತ ಹುಲಿವೇಷಧಾರಿಗಳ ಅಬ್ಬರ ಜೋರಾಗಿದ್ದು, ವಿಟ್ಲ ಪಿಂಡಿ ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿದವು. ಅಂಗಡಿ, ಹೋಟೆಲ್‌, ಆಭರಣ ಮಳಿಗೆಗಳ ಮುಂದೆ ಹುಲಿ ಕುಣಿತವನ್ನು ನೋಡಲು ಜನರು ಮುಗಿಬಿದ್ದರು. ಮಾರ್ಪಳ್ಳಿ ಚೆಂಡೆ ಬಳಗ, ಕಾಡಬೆಟ್ಟು ಅಶೋಕ್‌ ರಾಜ್‌ ಬಳಗ ಸೇರಿದಂತೆ ನಗರದ ಖ್ಯಾತ ಹುಲಿವೇಷಧಾರಿಗಳ ತಂಡ ನಗರದ ಅಲ್ಲಾಲ್ಲಿ ಪ್ರದರ್ಶನ ನೀಡಿದವು. ತಾಸೆ, ಬ್ಯಾಂಡ್‌ನ ಸದ್ದಿನೊಂದಿಗೆ ಹುಲಿವೇಷಧಾರಿಗಳು ಕುಣಿದ ನೃತ್ಯವೂ ಜನರನ್ನು ಆಕರ್ಷಿಸಿದವು. ಜನರು ಹುಲಿ ಕುಣಿತವನ್ನು ನೋಡಿ ಕಣ್ತುಂಬಿಕೊಂಡರು.

Leave a Reply

Your email address will not be published. Required fields are marked *

error: Content is protected !!