ಕೆಥೋಲಿಕ್ ಸಭಾ ಉಡುಪಿ ವಲಯ : ಪ್ರತಿಭಾ ಪುರಸ್ಕಾರ

ಉಡುಪಿ : ಕೆಥೋಲಿಕ್ ಸಭಾ ಉಡುಪಿ ವಲಯದಿಂದ ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಬಿಎಸ್ಸಿ ಮತ್ತು ಐಸಿಎಸ್ಸಿಯಲ್ಲಿ ಉಡುಪಿ ವಲಯ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ೧೦ ವಿದ್ಯಾರ್ಥಿಗಳಿಗೆ ಡಾನ್ ಬಾಸ್ಕೋ ಸಭಾಭವನ ಉಡುಪಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು

ವಿವಿಧ ಯೋಜನೆಗಳ ಸಹಾಯಾರ್ಥವಾಗಿ ೨೦೨೦ ಜನವರಿ ೫ ರಂದು ಸಂಜೆ ೫.೩೦ ಕ್ಕೆ ಉಡುಪಿ ಸೈಂಟ್ ಸಿಸಿಲೀಸ್ ಶಾಲಾ ಮೈದಾನದಲ್ಲಿ ನಡೆಯುವ ‘ಮೆಲ್ವಿನ್ ಪೆರಿಸ್ ಸಂಗೀತ ಸಂಜೆ’ ಕಾರ್ಯಕ್ರಮದ ಕರಪತ್ರವನ್ನು ಉಡುಪಿ ಮದರ್ ಆಫ್ ಸಾರೋಸ್ ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ವಲೇರಿಯನ್ ಮೆಂಡೋನ್ಸ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಥೋಲಿಕ್ ಸಭಾ ಉಡುಪಿ ವಲಯದ ಅಧ್ಯಕ್ಷ ರೊನಾಲ್ಡ್ ಡಿ ಅಲ್ಮೇಡ ಸ್ವಾಗತಿಸಿ, ಸಂಗೀತ ಸಂಜೆಯ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವನ್ನು ಯಾಚಿಸಿದರು.

ವೇದಿಕೆಯಲ್ಲಿ ನಿಯೋಜಿತ ಅಧ್ಯಕ್ಷ ಸಂಜಯ್ ಅಂದ್ರಾದೆ ಕಲ್ಮಾಡಿ, ಮಾರ್ಗದರ್ಶಕ ಆಲ್ಫೋನ್ಸ್ ಡಿಕೋಸ್ತಾ ಉಡುಪಿ, ಕೋಶಾಧಿಕಾರಿ ಅನಿಲ್ ಡಿಸೋಜ ಮೂಡುಬೆಳ್ಳೆ, ಆಮ್ಚೊ ಸಂದೇಶ್ ಪ್ರತಿನಿಧಿ ರಫಾಯಲ್ ಡಿಸೋಜಾ ಮತ್ತು ಸಂಗೀತ ಸಂಜೆ ಕಾರ್ಯಕ್ರಮದ ಕರಪತ್ರದ ಪ್ರಾಯೋಜಕರಾದ ಜೋ ಪಿರೇರ ಕೆಟರರ್ಸ್ ಮಾಲಕರಾದ ವಿವಿಯನ್ ಪಿರೇರಾ ಉದ್ಯಾವರ ಉಪಸ್ಥಿತರಿದ್ದರು.


ಕಾರ್ಯದರ್ಶಿ ಲವೀನಾ ಪಿರೇರಾ ಉಡುಪಿ ಧನ್ಯವಾದ ಸಮರ್ಪಿಸಿದರೆ, ಆಪೊಲಿನ್ ಪಿಂಟೊ ಉಡುಪಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!