ಅಂತ್ಯ ಸಂಸ್ಕಾರಕ್ಕೆ 20 ಜನ, 1000 ಜನ ಮದ್ಯದಂಗಡಿ ಮುಂದೆ ನಿಲ್ಲಬಹುದೇ?: ಕೇಂದ್ರದ ವಿರುದ್ಧ ಶಿವಸೇನೆ ಕಿಡಿ
ಮುಂಬೈ: ಅಂತ್ಯ ಸಂಸ್ಕಾರಕ್ಕೆ 20 ಜನರ ಸೇರುವಂತಿಲ್ಲ, ಮದ್ಯದಂಗಡಿ ಮುಂದೆ 1000 ಜನರು ನಿಲ್ಲಬಹುದೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಶನಿವಾರ ತೀವ್ರವಾಗಿ ಕಿಡಿಕಾರಿದೆ.
ಈ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಮದ್ಯ ಮಾರಾಟ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಸಡಿಲಿಸಿರುವುದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನ ಅಂತ್ಯ ಸಂಸ್ಕಾರಕ್ಕೆ 20 ಜನರು ಹೊರತುಪಡಿಸಿ ಅದಕ್ಕಿಂತಲೂ ಹೆಚ್ಚು ಜನರು ಸೇರಿವಂತಿಲ್ಲ ಎಂದು ಆದೇಶಿಸಲಾಗಿದೆ. ಆದರೆ, ಮದ್ಯದ ಅಂಗಡಿಗಳ ಮುಂದೆ ಪ್ರತೀನಿತ್ಯ 1000 ಜನರು ನಿಲ್ಲುತ್ತಿದ್ದಾರೇಕೆ? ಏಕೆಂದರೆ, ವ್ಯಕ್ತಿಯಲ್ಲಿನ ಶಕ್ತಿ ಅದಾಗಲೇ ಹೊರಟು ಹೋಗಿರುತ್ತದೆ. ಆದರೆ, ಮದ್ಯದಂಗಡಿಗಳಲ್ಲಿ ಶಕ್ತಿ ಇರುವುದರಿಂದ 1000 ಜನರು ಸೇರಲು ಅನುಮತಿ ನೀಡಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.